ಕಾಶ್ಮೀರ ಯಾವತ್ತಿದ್ದರೂ ಭಾರತದ್ದೇ: ಅಫ್ರಿದಿಗೆ ಗಬ್ಬರ್ ಸಿಂಗ್ ವಾರ್ನಿಂಗ್!
ಕಾಶ್ಮೀರ ಹಾಗೂ ಪಿಎಂ ಮೋದಿ ವಿರುದ್ಧ ಪಾಕ್ ಕ್ರಿಕೆಟಿಗ ಅಫ್ರಿದಿ ವಿವಾದಾತ್ಮಕ ಹೇಳಿಕೆ| ಅಫ್ರಿದಿ ಹೆಳಿಕೆ ಬೆನ್ನಲ್ಲೇ ಸಿಡಿದೆದ್ದ ಭಾರತೀಯ ಕ್ರಿಕೆಟಿಗರು| ಭಾರತತ ಯಾವತ್ತಿದ್ದರೂ ನಮ್ಮದೇ ಎಂಬ ಅಬ್ಬರಿಸಿದ ಗಬ್ಬರ್ ಸಿಂಗ್| ಅಫ್ರಿದಿಗೆ ಛೀಮಾರಿ ಹಾಕಿದ ಯುವಿ ಮತ್ತು ಹರ್ಭಜನ್
ನವದೆಹಲಿ(ಮೇ.18): ಕಾಶ್ಮೀರ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಅಫ್ರಿದಿಗೆ ಭಾರತೀಯ ಕ್ರಿಕೆಟಿಗರು ಒಬ್ಬರಾದ ಬಳಿಕ ಮತ್ತೊಬ್ಬರಂತೆ ಭರ್ಜರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅತ್ತ ರೈನಾ ಟ್ವೀಟ್ ವೈರಲ್ ಆಗುತ್ತಿದ್ದಂತೆಯೇ, ಇತ್ತ ಟೀಂ ಇಂಡಿಯಾದ ಗಬ್ಬರ್ ಸಿಂಗ್ ಶಿಖರ್ ಧವನ್ ಯಾವತ್ತಿದ್ದರೂ ಕಾಶ್ಮೀರ ನಮ್ಮದೇ ಎಂದ ಒಂದೇ ಮಾತಲ್ಲಿ ಅಫ್ರಿದಿ ಎಲ್ಲಾ ಆಟಕ್ಕೂ ತೆರೆ ಎಳೆದಿದ್ದಾರೆ.
ಹೌದು ಭಾನುವಾರದಂದು ಕಾಶ್ಮೀ(ಪಿಒಕೆ)ಗೆ ಭೇಟಿ ನೀಡಿದ್ದ ಪಾಕಿಸ್ತಾನದ ಆಲ್‌ರೌಂಡರ್ ಶಾಹಿದ್ ಅಫ್ರಿದಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅವರಾಡಿದ್ದ ಮಾತುಗಳ ವಿಡಿಯೋ ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಟೀಕೆಗೆ ಗುರಿಯಾಗಿತ್ತು. ಅಲ್ಲಿನ ಜನರನ್ನುದ್ದೇಶಿಸಿ ಮಾತನಾಡಿದ್ದ ಅಫ್ರಿದಿ ಇಡೀ ವಿಶ್ವವೇ ಒಂದು ವೈರಸ್‌ನಿಂದ ನಲುಗಿದೆ. ಆದರೆ ಮೋದಿಯ ಹೃದಯ ಮತ್ತು ಮನಸ್ಸು ಅದಕ್ಕಿಂತಲೂ ಅಪಾಯಕಾರಿ ಎಂದು ಹೇಳಿದ್ದರು. ಈ ಮಾತುಗಳು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದ್ದವು. ಈ ವಿವಾದದ ಬೆನ್ನಲ್ಲೇ ಕಾಶ್ಮೀರ ಸಮಬಂಧ ವಿವಾದಾತ್ಮಕ ಟ್ವೀಟ್ ಮಾಡಿ ಕಾಶ್ಮೀರವನ್ನು ರಕ್ಷಿಸಿ ಎಂದಿದ್ದರು.
ಸದ್ಯ ಅಫ್ರಿದಿ ಈ ನಡೆ ಮತ್ತು ಮಾತುಗಳು ಟೀಂ ಇಂಡಿಯಾದ ಕ್ರಿಕೆಟಿಗರನ್ನು ಕೆರಳಿಸಿದೆ. ಈಗಾಗಲೇ ಸುರೇಶ್ ರೈನಾ ಅಫ್ರಿದಿಗೆ ಮುಟ್ಟಿ ನೋಡುವಂತೆ ಉತ್ತರಿಸಿದ್ದಾರೆ. ಸದ್ಯ ಟೀಂ ಇಂಡಿಯಾದ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಕೂಡಾ ಟ್ವೀಟ್ ಮಾಡಿದ್ದು, ಸದ್ಯ ಇಡೀ ವಿಶ್ವವೇ ಕೊರೋನಾ ವಿರುದ್ಧ ಹೋರಾಡುತ್ತಿರುವಾಗಲೂ ನಿನಗೆ ಕಾಶ್ಮೀರದ ವಿಚಾರ ಬೇಕಾ? ಕಾಶ್ಮೀರ ನಮ್ಮದಾಗಿತ್ತು, ನಮ್ಮದಾಗಿದೆ, ಮುಂದೆಯೂ ಇದು ನಮ್ಮದಾಗೇ ಇರುತ್ತದೆ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಮೊದಲು ಫೇಲ್ ಆದ ನಿನ್ನ ದೇಶ ನೋಡ್ಕೋ: ಕಾಶ್ಮೀರ ಎಂದ ಅಫ್ರಿದಿಗೆ ಬಡಿದ ರೈನಾ!
ಇದೇ ವಿಚಾರವಾಗಿ ಯುವರಾಜ್ ಸಿಂಗ್ ಕೂಡಾ ಟಟ್ವೀಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ವಿಇರುದ್ಧ ಅಫ್ರಿದಿ ಆಡಿರುವ ಮಾತುಗಳಿಂದ ಬೇಸರವನ್ನುಂಟು ಮಾಡಿದೆ. ದೇಶಕ್ಕಾಗಿ ಆಡಿದ ಓರ್ ಜವಾಬ್ದಾರಿಯುತ ಭಾರತೀಯನಾಗಿ, ನಾನು ಯಾವತ್ತೂ ಇಂತಹ ಮಾತುಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ. ನಾವು ಮಾನವೀಯತೆಯ ದೃಷ್ಟಿಯಿಂದ ನಿಮಗಾಗಿ ಮನವಿ ಮಾಡಿದ್ದೆವು. ಇನ್ಯಾವತ್ತೂ ಅಪ್ಪಿ ತಪ್ಪಿಯೂ ಹಾಗೆ ಮಾಡುವುದಿಲ್ಲ ಎಂದಿದ್ದಾರೆ
ಇನ್ನು ಹರ್ಭಜನ್ ಸಿಂಗ್ ಕೂಡಾ ಯುವಿ ಮಾತುಗಳನ್ನು ಬೆಂಬಲಿಸಿದ್ದು, ಹೌದು ಇನ್ನ್ಯಾವತ್ತೂ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.