ಆಕೆಗೆ 25 ಆತನಿಗೆ 27: ಬದುಕು ಕಟ್ಟಿಕೊಳ್ಳಲು ಊರು ಬಿಟ್ಟು ರಾಜಧಾನಿಗೆ ಬಂದ ಯುವ ದಂಪತಿ ಸಾವಿಗೆ ಶರಣು
ಗಂಡ ಸಾವಿಗೆ ಶರಣಾಗಿರುವುದನ್ನು ನೋಡಿ ಹೆಂಡತಿಯೂ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಮೃತರನ್ನು 27 ವರ್ಷದ ಭಾಸ್ಕರ್ ದೇಕ ಹಾಗೂ 25 ವರ್ಷದ ಝುಮಿ ದಾಸ್ ಎಂದು ಗುರುತಿಸಲಾಗಿದೆ.
ನವದೆಹಲಿ: ಗಂಡ ಸಾವಿಗೆ ಶರಣಾಗಿರುವುದನ್ನು ನೋಡಿ ಹೆಂಡತಿಯೂ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಮೃತರನ್ನು 27 ವರ್ಷದ ಭಾಸ್ಕರ್ ದೇಕ ಹಾಗೂ 25 ವರ್ಷದ ಝುಮಿ ದಾಸ್ ಎಂದು ಗುರುತಿಸಲಾಗಿದೆ.
ಇವರಿಬ್ಬರು ಬದುಕಿನ ಬಂಡಿ ಎಳೆಯುವುದಕ್ಕೆ ದೂರದ ಅಸ್ಸಾಂನಿಂದ ದೇಶದ ರಾಜಧಾನಿ ದೆಹಲಿಗೆ ಆಗಮಿಸಿ ನೆಲೆಸಿದ್ದರು. ಆಕೆ ಹೌಸ್ ಕೀಪಿಂಗ್(ಹೊಟೇಲ್, ಸಂಸ್ಥೆಗಳಲ್ಲಿ ಕ್ಲೀನಿಂಗ್ ಸರ್ವೀಂಗ್ ಕೆಲಸ) ಮಾಡುತ್ತಿದ್ದರೆ, ಆತ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ದಂಪತಿಗೆ ಏನಾಯ್ತೋ ಏನೋ ಇಬ್ಬರು ಸಾವಿಗೆ ಶರಣಾಗಿದ್ದಾರೆ. ವರದಿಗಳ ಪ್ರಕಾರ ಮೊದಲಿಗೆ ಭಾಸ್ಕರ್ ದೇಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಗಂಡ ಪ್ರಾಣ ಬಿಟ್ಟಿರುವುದನ್ನು ನೋಡಿ ಪತ್ನಿಯೂ ಸಾವಿಗೆ ಶರಣಾಗಿದ್ದಾಳೆ. ದೇಕ ಇಂದು ಮುಂಜಾನೆ ಮನೆಯಲ್ಲೇ ಸಾವಿಗೆ ಶರಣಾಗಿದ್ದರೆ ಝುಮಿ ದಾಸ್ ಶವ ಯಮುನಾ ಖಾದರ್ ಬಳಿ ಇರುವ ನೀರಿನ ಪೈಪ್‌ಲೈನ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದೇಕ ನಗರದ ಚಾಂದಿನಿ ಚೌಕ್ ಪ್ರದೇಶದ ಒಮೆಕ್ಸ್ ಮಾಲ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
4 ವರ್ಷ ಪ್ರೀತಿಸಿ ಮದುವೆಯಾಗಿದ್ದ ನವದಂಪತಿ, 4 ತಿಂಗಳೂ ಸಂಸಾರ ಸಾಗಿಸದೇ ಆತ್ಮಹತ್ಯೆಗೆ ಶರಣು
ಸಾವಿಗೆ ಮೊದಲು ಝುಮಿ ದಾಸ್ ತನ್ನ ಸ್ನೇಹಿತೆಯರಿಗೆ ಕರೆ ಮಾಡಿ ತನ್ನ ಗಂಡ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದು, ನಾನು ಕೂಡ ಬದುಕನ್ನು ಕೊನೆಗೊಳಿಸುವ ನಿರ್ಧಾರ ಮಾಡುತ್ತಿರುವುದಾಗಿ ಹೇಳಿದ್ದಾಳೆ. ಆದರೆ ಈ ಸಾವಿನ ಹಿಂದಿನ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಸಾಯುವುದಕ್ಕೂ ಮೊದಲು ಭಾಸ್ಕರ್ ದೇಕ ಡೆತ್‌ನೋಟ್ ಬರೆದಿಟ್ಟಿದ್ದು, ಅದು ಅಸ್ಸಾಮಿ ಭಾಷೆಯಲ್ಲಿದೆ. ಅದರಲ್ಲಿರುವಂತೆ ಆತ ತನ್ನ ಪತ್ನಿಗೆ ತನ್ನ ಪ್ರೀತಿಯನ್ನು ತಿಳಿಸಿದ್ದು, ಅಸ್ಸಾಂನಿಂದ ಆಕೆಯನ್ನು ದೆಹಲಿಗೆ ಕರೆದುಕೊಂಡು ಬಂದ ತನ್ನ ನಿರ್ಧಾರ ತಪ್ಪಾಗಿಹೋಯ್ತು ಎಂದು ಹೇಳಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ಎಲ್ಲದಕ್ಕೂ ಎಲ್ಲರಿಗೂ ಆತ ಡೆತ್‌ನೋಟ್‌ನಲ್ಲಿ ಕ್ಷಮೆ ಕೇಳಿದ್ದಾರೆ. ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಸ್ಸಾಂನಲ್ಲಿರುವ ಜೋಡಿಯ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.
Udupi: ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಯುವ ಜೋಡಿ ಆತ್ಮಹತ್ಯೆ..?
ಆತ್ಮಹತ್ಯೆಯೇ ಎಲ್ಲದಕ್ಕೂ ಪರಿಹಾರವಲ್ಲ ಅಂತಹ ಯೋಚನೆ ಬಂದರೆ ಆತ್ಮೀಯರಿಗೆ ಕರೆ ಮಾಡಿ ನಿಮ್ಮ ಕಷ್ಟ ಹೇಳಿಕೊಳ್ಳಿ.