ಕಾನೂನುಬಾಹಿರ ಎನ್‌ಕೌಂಟರ್ ಅಪಾಯ: ತರೂರ್, ಮನೇಕಾ ಅಭಿಪ್ರಾಯ!
ದಿಶಾ ಹತ್ಯಾಚಾರ ಆರೋಪಿಗಳನ್ನು ನರಕಕ್ಕೆ ಕಳುಹಿಸಿದ ಪೊಲೀಸರು| ಪೊಲೀಸ್ ಎನ್‌ಕೌಂಟರ್‌ನಲ್ಲಿ ದಿಶಾ ಹತ್ಯಾಚಾರ ಆರೋಪಿಗಳು ಫಿನಿಷ್| ಪೊಲೀಸ್ ಕಾರ್ಯಾಚರಣೆಗೆ ದೇಶಾದ್ಯಂತ ಸಂಭ್ರಮಾಚರಣೆ| ಹತ್ಯಾಚಾರ ಆರೋಪಿಗಳನ್ನು ಕೊಂದ ಪೊಲೀಸರಿಗೆ ಧನ್ಯವಾದಗಳ ಮಹಾಪೂರ| ಎನ್‌ಕೌಂಟರ್ ಖಂಡಿಸಿದ ಕಾಂಗ್ರೆಸ್ ನಾಯಕ ಶಶಿ ತರೂರ್| ಪೊಲೀಸರು ಕಾನೂನು ಕೈಗೆತ್ತಿಕೊಳ್ಳಬಾರದು ಎಂದ ಬಿಜೆಪಿಯ ಮನೇಕಾ ಗಾಂಧಿ| ದೇಶಾದ್ಯಂತ ಎನ್‌ಕೌಂಟರ್ ಪರ-ವಿರೋಧ ಚರ್ಚೆ ಶುರು|
ನವದೆಹಲಿ(ಡಿ.06): ದಿಶಾ ಹತ್ಯಾಚಾರ ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿರುವ ತೆಲಂಗಾಣ ಪೊಲೀಸರನ್ನು ಇಡೀ ದೇಶವೇ ಕೊಂಡಾಡುತ್ತಿದೆ. ರಾಕ್ಷಸರನ್ನು ನರಕಕ್ಕೆ ಕಳುಹಿಸಿದ ಪೊಲೀಸರಿಗೆ ಧನ್ಯವಾದಗಳ ಸುರಿಮಳೆಯೇ ಆಗುತ್ತಿದೆ.
ಈ ಮಧ್ಯೆ ಪೊಲೀಸರ ಎನ್‌ಕೌಂಟರ್ ಪರ-ವಿರೋಧದ ಚರ್ಚೆಯೂ ಶುರುವಾಗಿದ್ದು, ಕೆಲವು ಸಾಮಾಜಿಕ ಸಂಘಟನೆಗಳು ಹಾಗೂ ರಾಜಕೀಯ ನಾಯಕರು ಎನ್‌ಕೌಂಟರ್‌ನ್ನು ಖಂಡಿಸಿದ್ದಾರೆ.
ವೈದ್ಯೆ ರೇಪ್, ಕೊಲೆ ಪ್ರಕರಣ: ನಾಲ್ವರೂ ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ಗೆ ಬಲಿ!
ತೆಲಂಗಾಣ ಪೊಲೀಸರ ಎನ್‌ಕೌಂಟರ್ ಮೇಲೆ ಪ್ರಶ್ನೆ ಎತ್ತಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ಕಾನೂನುಬಾಹಿರ ಎನ್‌ಕೌಂಟರ್‌ಗಳು ದೇಶದ ನ್ಯಾಯಾಂಗ ವ್ಯವಸ್ಥೆಗೆ ಮಾರಕ ಎಂದು ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಿಕ ಪ್ರಕ್ರಿಯೆಯ ಮೂಲಕ ಆರೋಪಿಗಳಿಗೆ ಶಿಕ್ಷೆಯಾಗಬೇಕೇ ಹೊರತು, ಈ ರೀತಿ ಎನ್‌ಕೌಂಟರ್‌ನಲ್ಲಿ ಸಾಯಿಸುವುದರಿಂದ ಬಲಿಪಶುಗಳಿಗೆ ನ್ಯಾಯ ಸಿಕ್ಕಂತಾಗುವುದಿಲ್ಲ ಎಂದು ತರೂರ್ ಹೇಳಿದ್ದಾರೆ.
ಹೈದರಾಬಾದ್ ಎನ್‌ಕೌಂಟರ್: ಎಲ್ಲೆಲ್ಲೂ ಸಂಭ್ರಮಾಚರಣೆ, ಪೊಲೀಸರ ಮೇಲೆ ಹೂಮಳೆ!
ಇದೇ ವೇಳೆ ಬಿಜೆಪಿ ನಾಯಕಿ ಮನೇಕಾ ಗಾಂಧಿ ಕೂಡ ಎನ್‌ಕೌಂಟರ್‌ನ್ನು ವಿರೋಧಿಸಿದ್ದು, ಕಾನೂನು ಕಾಪಾಡಬೇಕಾದ ಪೊಲೀಸರೇ ಕಾನೂನನ್ನು ಕೈಗೆತ್ತಿಕೊಳ್ಳುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ದಿಶಾ ಹತ್ಯಾಚಾರ ಆರೋಪಿಗಳನ್ನು ಶಿಕ್ಷಿಸುವ ಮೂಲಕ ದಿಶಾ ಆತ್ಮಕ್ಕೆ ಶಾಂತಿ ದೊರಕಿಸಿಕೊಟ್ಟ ಪೊಲೀಸರು ಒಂದೆಡೆಯಾದರೆ, ಎನ್‌ಕೌಂಟರ್ ಕಾನೂನುಬಾಹಿರ ಎನ್ನುವವರು ಮತ್ತೊಂದೆಡೆ. ಪೊಲೀಸರ ನಡೆಯನ್ನು ಜನತಾ ನ್ಯಾಯಾಲಯವೇ ತೀರ್ಮಾನಿಸಬೇಕಿದೆ. ಬಹುತೇಕರ ಅನಿಸಿಕೆ ಪ್ರಕಾರ ಜನತೆ ತೀರ್ಮಾನಿಸಿದೆ.
'ನನ್ನ ಮಗಳ ಆತ್ಮಕ್ಕೆ ಈಗ ಶಾಂತಿ ಸಿಕ್ತು'
ಡಿಸೆಂಬರ್ 6ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ