ಹೈದರಾಬಾದ್[ಡಿ.06]: ಹೈದರಾಬಾದ್ ಎನ್‌ಕೌಂಟರ್‌ನಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆಗೖದಿದ್ದ ನಾಲ್ವರು ಆರೋಪಿಗಳು ಹತರಾಗಿದ್ದಾರೆ. ಇದರ ಬೆನ್ನಲ್ಲೇ ಪೊಲೀಸ್ ತಂಡಕ್ಕೆ ಧನ್ಯವಾದ ಎಂದಿರುವ ಸಂತ್ರಸ್ತೆಯ ತಂದೆ 'ನನ್ನ ಮಗಳ ಆತ್ಮಕ್ಕೇ ಈಗ ಶಾಂತಿ ಸಿಕ್ತು' ಎಂದು ಭಾವುಕರಾಗಿದ್ದಾರೆ.

ಹೈದರಾಬಾದ್ ಎನ್‌ಕೌಂಟರ್: ಎಲ್ಲೆಲ್ಲೂ ಸಂಭ್ರಮಾಚರಣೆ, ಪೊಲೀಸರ ಮೇಲೆ ಹೂಮಳೆ!

ಹೌದು ಆರೋಪಿಗಳು ಬಲಿಯಾದ ಬೆನ್ನಲ್ಲೇ ಸುದ್ದಿ ಸಂಸ್ಥೆ ANIಗೆ ಪ್ರತಿಕ್ರಿಯಿಸಿದ ಸಂತ್ರಸ್ತೆಯ ತಂದೆ 'ನನ್ನ ಮಗಳು ಕಾಮುಕರ ಅಟ್ಟಹಾಸಕ್ಕೆ ಬಲಿಯಾಗಿ 10 ದಿನಗಳಾಗಿದ್ದವು. ಆದರೀಗ ಎನ್‌ಕೌಂಟರ್‌ನಲ್ಲಿ ಅವರು ಬಲಿಯಾಗಿದ್ದಾರೆ. ಹೀಗಿರುವಾಗ ನಾನು ಪೊಲೀಸರಿಗೆ ಹಾಗೂ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಮಗಳ ಆತ್ಮಕ್ಕೀಗ ಶಾಂತಿ ಲಭಿಸಿದೆ' ಎಂದು ಭಾವುಕರಾಗಿದ್ದಾರೆ.

ಹೈದರಾಬಾದ್ ರಾಕ್ಷಸರಿಗೆ ಕನ್ನಡಿಗನಿಂದ ಎನ್‌ಕೌಂಟರ್!

ಇನ್ನು ಎನ್‌ಕೌಂಟರ್ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಎನ್‌ಕೌಂಟ್‌ ನೇತೃತ್ವ ವಹಿಸಿದ್ದ ಸೈಬರಾಬಾದ್ ಪೊಲೀಸ್ ಕಮಿಷನರ್ ವಿ. ಸಿ. ಸಜ್ಜನರ್ ಮಾತನಾಡುತ್ತಾ 'ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳಾದ ಮೊಹಮ್ಮದ್ ಆರಿಫ್, ನವೀನ್, ಶಿವ ಹಾಗೂ ಚೆನ್ನಕೇಶವುಲು ಶಾದ್‌ನಗರದ ಚೆಟ್ನಪಳ್ಳಿಯಲ್ಲಿ ಶುಕ್ರವಾರ ಬೆಳಗ್ಗಿನ ಜಾವ 03 ರಿಂದ 6 ಗಂಟೆಯವರೆಗೆ ನಡೆದ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ. ನಾನು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇನೆ. ಹೆಚ್ಚಿನ ಮಾಹಿತಿಯನ್ನು ಮುಂದೆ ನೀಡುತ್ತೇವೆ' ಎಂದಿದ್ದಾರೆ

ವೈದ್ಯೆ ರೇಪ್, ಕೊಲೆ ಪ್ರಕರಣ: ನಾಲ್ವರೂ ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ಗೆ ಬಲಿ!

ಡಿಸೆಂಬರ್ 6ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ