ನವದೆಹಲಿ(ಫೆ.12): ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಸಂಭ್ರಮಿಸಿದ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರನ್ನು ಕಾಂಗ್ರೆಸ್ ನಾಯಕಿ ಶರ್ಮಿಷ್ಠ ಮುಖರ್ಜಿ ತರಾಟೆಗೆ ತೆಗೆದುಕೊಂಡಿದ್ದಾರೆ.

 ಆಪ್’ಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದ ಚಿದಂಬರಂ ಅವರನ್ನು ಪ್ರಶ್ನಿಸಿರುವ ಶರ್ಮಿಷ್ಠ, ನಮ್ಮ ಸೋಲನ್ನು ಪರಾಮರ್ಶಿಸುವ ಬದಲು ಅವರ ಗೆಲುವನ್ನೇಕೆ ಸಂಭ್ರಮಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.'

ಬಿಜೆಪಿಯ ಧ್ರುವೀಕರಣ, ವಿಭಜನೆಯ ಮತ್ತು ಅಪಾಯಕಾರಿ ಅಜೆಂಡಾಗಳನ್ನು ಸೋಲಿಸಲು ದೆಹಲಿ ಜನತೆ ಆಪ್ ಬೆಂಬಲಿಸಿದ್ದಾರೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದರು.

ದೆಹಲಿ ನಾಶಕ್ಕೆ ಕಾರಣ ಹೇಳಿದ ಮಾಜಿ ರಾಷ್ಟ್ರಪತಿ ಮಗಳು!

ಇದಕ್ಕೆ ಪ್ರತ್ಯುತ್ತರ ನೀಡಿರುವ ಶರ್ಮಿಷ್ಠ , ಬಿಜೆಪಿಯನ್ನು ಸೋಲಿಸಲು ಪ್ರಾದೇಶಿಕ ಪಕ್ಷಕ್ಕೆ ಕಾಂಗ್ರೆಸ್ ಹೊರಗುತ್ತಿಗೆ ಕೆಲಸ ನೀಡಿತ್ತೇ ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ದೆಹಲಿ ಫಲಿತಾಂಶ ಹೊರಬಂದ ಬಳಿಕ ಪಕ್ಷದ ನಾಯಕತ್ವವನ್ನು ಪ್ರಶ್ನಿಸಿ ನಿನ್ನೆಯೂ ಶರ್ಮಿಷ್ಠ ಮುಖರ್ಜಿ ಟ್ವೀಟ್ ಮಾಡಿದ್ದರು. ಹೈಕಮಾಂಡ್ ವಿಳಂಬ ನೀತಿಯೇ ಪಕ್ಷದ ಸೋಲಿಗೆ ಕಾರಣ ಎಂದು ಶರ್ಮಿಷ್ಠ ಆರೋಪಿಸಿದ್ದರು.