ಮಧ್ಯಪ್ರದೇಶ ಬಂಕುರಾ ಗ್ರಾಮದಲ್ಲಿ ದಲಿತನ ಮುಖ ಹಾಗೂ ಮೈಗೆ ಹಿಂದುಳಿದ ವರ್ಗದ ವ್ಯಕ್ತಿಯೊಬ್ಬ ಮಾನವ ಮಲ ಬಳಿದ ಘಟನೆ ನಡೆದಿದೆ. ಈ ಸಂಬಂಧ ಸಂತ್ರಸ್ತ ದಶರಥ ಅಹಿರ್ವಾರ್ ನೀಡಿದ ದೂರಿನ ಮೇರೆಗೆ ರಾಮ್‌ಕೃಪಾಲ್ ಪಟೇಲ್ ಎಂಬುವನ ವಿರುದ್ಧ ಕೇಸು ದಾಖಲಾಗಿದೆ.
ಛತರ್‌ಪುರ: ಮಧ್ಯಪ್ರದೇಶ ಬಂಕುರಾ ಗ್ರಾಮದಲ್ಲಿ ದಲಿತನ ಮುಖ ಹಾಗೂ ಮೈಗೆ ಹಿಂದುಳಿದ ವರ್ಗದ ವ್ಯಕ್ತಿಯೊಬ್ಬ ಮಾನವ ಮಲ ಬಳಿದ ಘಟನೆ ನಡೆದಿದೆ. ಈ ಸಂಬಂಧ ಸಂತ್ರಸ್ತ ದಶರಥ ಅಹಿರ್ವಾರ್ ನೀಡಿದ ದೂರಿನ ಮೇರೆಗೆ ರಾಮ್‌ಕೃಪಾಲ್ ಪಟೇಲ್ ಎಂಬುವನ ವಿರುದ್ಧ ಕೇಸು ದಾಖಲಾಗಿದೆ. ನಾನು ಕಟ್ಟಡ ಕಾರ್ಮಿಕನಾಗಿದ್ದು, ಕೆಲಸ ಮಾಡುವಾಗ ಕೈಗೆ ಗ್ರೀಸ್ ಮೆತ್ತಿತ್ತು. ಅಲ್ಲೇ ಹ್ಯಾಂಡ್‌ಪಂಪ್ ಕೆಳಗೆ ಸ್ನಾನ ಮಾಡುತ್ತಿದ್ದ ಪಟೇಲ್‌ನನ್ನು ಅಚಾನಕ್ ಮುಟ್ಟಿದೆ. ಆಗ ಸಿಟ್ಟಿಗೆದ್ದ ಪಟೇಲ್ ಅಲ್ಲೇ ಇದ್ದ ಮಲವನ್ನು ತನ್ನ ಮಗ್‌ನಲ್ಲಿ ತಂದು ನನ್ನ ಮುಖ ಹಾಗೂ ಮೈಗೆ ಸುರಿದ. ಮೊದಲು ಗ್ರಾ.ಪಂ.ಗೆ ದೂರು ನೀಡಿದಾಗ ನನಗೇ ಗ್ರಾ.ಪಂಚಾಯತ್ 600 ರು. ದಂಡವಿಧಿಸಿತು. ಕೊನೆಗೆ ಪೊಲೀಸರಿಗೆ ದೂರು ನೀಡಿದೆ ಎಂದು ದೂರಿನಲ್ಲಿ ದಶರಥ ತಿಳಿಸಿದ್ದಾರೆ.
ಬೆಂಗಳೂರು ಮನೆಮುಂದೆ ನಾಯಿ ಗಲೀಜು ಮಾಡಿಸಬೇಡಿ ಎಂದಿದ್ದಕ್ಕೆ ಮಾಲೀಕನನ್ನೇ ಕೊಲೆಗೈದ ಪಾಪಿಗಳು
ಮಲ ವಿಸರ್ಜನೆ ಮಾಡುವಾಗ ಹಾವು ದೇಹ ಹೊಕ್ಕಿದೆ ಎಂದ, ಅಷ್ಟಕ್ಕೂ ಏನಾಗಿದೆ ಅಂದ್ರು ಡಾಕ್ಟರ್?
