ಮುಂಬೈ  : ಬಾಲಿವುಡ್ ನಟರಾದ ಶಾರುಕ್  ಖಾನ್, ಅನಿಲ್ ಕಪೂರ್, ವಿವೇಕ್ ಒಬೇರಾಯ್ ಸೇರಿದಂತೆ ಹಲವರಿಗೆ ನೋಟಿಸ್ ಜಾರಿ ಮಾಡಲಾಗಿದೆ. 

Qnet ಸ್ಕ್ಯಾಮ್ ಸಂಬಂಧ ಬಾಲಿವುಡ್ ನಟ ಜಾಕಿ ಶ್ರಾಫ್, ಬೊಮನ್ ಇರಾನಿ, ಕ್ರಿಕೆಟರ್ ಯುವರಾಜ್ ಸಿಂಗ್, ನಟಿ ಪೂಜಾ ಹೆಗ್ಡೆ, ಅಲ್ಲು ಸಿರೀಸ್ ಗೂ ಸೈಬರಾಬಾದ್ ಪೊಲೀಸರು ನೋಟಿಸ್ ನೀಡಿದ್ದಾರೆ. 

ಶಾರೂಕ್ ಮಗಳಿಗೆ ಈ ನಟನೊಂದಿಗೆ ಡೇಟಿಂಗ್ ಮಾಡ್ಬೇಕಂತೆ!

Qnet ಸ್ಕ್ಯಾಮ್ ಗೆ ಸಂಬಂಧಿಸಿದಂತೆ ಒಟ್ಟು 500 ಮಂದಿಗೆ ನೋಟಿಸ್ ನೀಡಲಾಗಿದ್ದು, ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 60ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. 

ಈ ನಟರು ಕೂಡ ಹಣವನ್ನು ಪಡೆದುಕೊಂಡು ಕಂಪನಿಯನ್ನು ಪ್ರಮೋಟ್ ಮಾಡಿದ್ದು, ಈ ನಿಟ್ಟಿನಲ್ಲಿ ನೋಟಿಸ್ ನೀಡಲಾಗಿದೆ. 

ಐಶ್ವರ್ಯಾ ರೈ ಕನಸು ಕಂಡಿದ್ದ ಶಾರುಖ್‌ಗೆ ಭಾರೀ ನಿರಾಸೆ!

ಅಲ್ಲದೇ ಮಾರ್ಚ್ 4ರ ಒಳಗಾಗಿ ಹಾಜರಾಗುವಂತೆ ಈ ನೋಟಿಸ್ ನಲ್ಲಿ ಸೂಚಿಸಲಾಗಿದೆ. ಒಂದು ವೇಳೆ ನಿಗದಿತ ಸಮಯದಲ್ಲಿ ಹಾಜರಾಗದಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. 

ನೆಟ್ವರ್ಕ್ ಮಾರ್ಕೆಟಿಂಗ್ ಮಾಡುವ ಈ ಕಂಪನಿಯ ವ್ಯವಹಾರದಲ್ಲಿ ಭಾರೀ ಅವ್ಯವಹಾರ ನಡೆದಿರುವ ಸಂಬಂಧ ನೋಟಿಸ್ ನೀಡಲಾಗಿದೆ.