ದೀಪಾವಳಿ ಆಚರಿಸಿದ ಶಾರೂಕ್ ಖಾನ್ ಫ್ಯಾಮಿಲಿ | ಹಬ್ಬದ ವೇಳೆ ಶಾರೂಕ್ ಖಾನ್ ತಿಲಕವಿಟ್ಟಿದ್ದಕ್ಕೆ ಮುಸಲ್ಮಾನರಿಂದ ಟೀಕೆ | ಶಾರೂಕ್ ಪರ ಮಾತನಾಡಿದ ಶಬಾನಾ ಆಜ್ಮಿ 

ನವದೆಹಲಿ (ಅ. 30): ತಿಲಕ ಧರಿಸಿ ದೀಪಾವಳಿ ಹಬ್ಬಾಚರಣೆಯಲ್ಲಿ ಪಾಲ್ಗೊಂಡ ನಟ ಶಾರುಖ್‌ ಖಾನ್‌ ಬಗ್ಗೆ ಮುಸ್ಲಿಮರಲ್ಲಿ ಟೀಕೆ ವ್ಯಕ್ತವಾದ ಬಗ್ಗೆ ನಟಿ ಶಬಾನಾ ಆಜ್ಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೀಕಾಕಾರರನ್ನು ‘ವಿವೇಕರಹಿತ ಮುಸ್ಲಿಮರು’ ಎಂದು ಶಬಾನಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Scroll to load tweet…

‘ದೀಪಾವಳಿ ವೇಳೆ ತಿಲಕ ಧರಿಸಿದ ಶಾರುಖ್‌ ಖಾನ್‌ರನ್ನು ‘ನಕಲಿ ಮುಸ್ಲಿಂ’ ಎಂದು ‘ವಿವೇಕರಹಿತ ಮುಸ್ಲಿಮರು’ ಟೀಕಿಸುತ್ತಿರುವುದು ನನಗೆ ಆಘಾತ ತಂದಿದೆ. ಭಾರತದ ಸುಂದರ ಸಂಪ್ರದಾಯ ಹೊಂದಿದೆ. ಆದರೆ ಇದರಿಂದ ಬೆದರಿಕೆಗೆ ಒಳಗಾಗುವಷ್ಟು ದುರ್ಬಲ ಧರ್ಮ ಇಸ್ಲಾಂ ಅಲ್ಲ. ಗಂಗಾ, ಯಮುನಾದ ನಿರ್ಮಲತೆಯಲ್ಲಿ ಭಾರತದ ಸುಂದರತೆ ಇದೆ’ ಎಂದು ಶಬಾನಾ ಟ್ವೀಟ್‌ ಮಾಡಿದ್ದಾರೆ. ಶಾರುಖ್‌ ಖಾನ್‌ ಅವರು ತಿಲಕ ಧರಿಸಿ ದೀಪಾವಳಿ ಆಚರಿಸಿಕೊಳ್ಳುತ್ತಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಭಾನುವಾರ ಹಾಕಿಕೊಂಡಿದ್ದರು.

Scroll to load tweet…