ಲೈಂಗಿಕ ಸಾಬೀತು ಪದದಲ್ಲಿ ನಗ್ನ ವಿಡಿಯೋ ಫಾರ್ವರ್ಡ್ ಸೇರಿದೆ ಸೆಕ್ಷನ್ 67 ಎ ಅಡಿಯಲ್ಲಿರುವ ಲೈಂಗಿಕ ಸಾಬೀತು ಪದ ವಿಡಿಯೋ ಫಾರ್ವರ್ಡ್ ತರಲಿದೆ ಸಂಕಷ್ಟ
ಮುಂಬೈ(ಜೂ.17): ಲೈಂಗಿಕ ಸಾಬೀತು ಅನ್ನೋ ಪದ ಕೇವಲ ಸಂಭೋಗ ಚಟುವಟಿಕೆಗೆ ಮಾತ್ರ ಸೀಮಿತವಾಗಿಲ್ಲ. ಅಶ್ಲೀಲ ವಿಡಿಯೋ ಪ್ರಕಟಿಸಿರುವುದು ಅಥವಾ ಫಾರ್ವರ್ಡ್ ಮಾಡುವುದಕ್ಕೂ ಅನ್ವಯವಾಗಲಿದೆ. ಹೀಗಾಗಿ ನಗ್ನ ವಿಡಿಯೋಗಳ ರವಾನಿಸುವುದು ಅಪರಾಧವಾಗಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಮಹತ್ವದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಮೂರ್ತಿ ಭಾರತಿ ಡಾಂಗ್ರೆ, ಸೆಕ್ಷನ್ 67 ಎ ಅಡಿಯಲ್ಲಿ ಲೈಂಗಿಕ ಸಾಬೀತು ಅನ್ನೋಪದವನ್ನು ಕೇವಲ ಸಂಭೋಗ ನಡೆದಿದ್ದರೆ ಮಾತ್ರಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. ನಗ್ನ ವಿಡಿಯೋವನ್ನು ಹರಿಬಿಟ್ಟರೂ ಅನ್ವಯವಾಗಲಿದೆ ಎಂದಿದ್ದಾರೆ.
ಸುಮ್ ಸುಮ್ನೆ ಗಂಡ ನಪುಂಸಕ ಎಂದ್ರೆ ಕ್ರೌರ್ಯ: ಹೈ ಕೋರ್ಟ್
ಮಹಿಳೆಯ ನಗ್ನ ವಿಡಿಯೋವನ್ನು ಆಕೆಯ ಪತಿ ಹಾಗೂ ಹಲವರಿಗೆ ವ್ಯಾಟ್ಯ್ಆ್ಯಪ್ ಮಾಡಿದ್ದ ವ್ಯಕ್ತಿ ವಿರುದ್ಧ ನೀಡಿದ್ದ ದೂರಿನ ವಿಚಾರಣೆ ನಡೆಸಿದ ಕೋರ್ಟ್, ಈ ಆದೇಶ ನೀಡಿದೆ. ಮಹಿಳೆಯ ನಗ್ನ ವಿಡಿಯೋವನ್ನು ಚಿತ್ರೀಕರಿಸಿ ಹರಿಬಿಡುವುದು ಲೈಂಗಿಕ ಸಾಬೀತಿನಷ್ಟೇ ದೊಡ್ಡ ಅಪರಾಧವಾಗಿದೆ ಎಂದು ಕೋರ್ಟ್ ಹೇಳಿದೆ.
ಸೆಕ್ಷನ್ 67 ರೂಪುಗೊಂಡಿರುವುದು ಹೊಸ ಮಾಧ್ಯಮಗಳ ಮೂಲಕ ವಿಶೇಷವಾಗಿ ಎಲೆಕ್ಟ್ರಾನಿಕ್ ಡಿವೈಸ್ ಮೂಲಕ ಅಂದರೆ ವ್ಯಾಟ್ಸ್ಆ್ಯಪ್, ಸಾಮಾಜಿಕ ಜಾಲತಾಣಗಳ ಮೂಲಕ ಅಶ್ಲೀಲ ವಿಡಿಯೋ ಅಥವಾ ವಿಚಾರಗಳನ್ನು ಪ್ರಕಟಿಸುವುದು ಹಾಗೂ ರವಾನಿಸುವುದು ಒಳಗೊಂಡಿದು. ಹೀಗಾಗಿ ಲೈಂಗಿಕ ಸಾಬೀತು ಅನ್ನೋ ಪದ ಕೇವಲ ಸಂಭೋಗ ಚಟುವಟಿಕೆಗೆ ಸೀಮಿತಗೊಳಿಸಲು ಸಾಧ್ಯವಿಲ್ಲ ಎಂದಿದೆ. ಇಷ್ಟೇ ಅಲ್ಲ ಮಹಿಳೆ ನಗ್ನ ವಿಡಿಯೋ ಹರಿಬಿಟ್ಟ ವ್ಯಕ್ತಿಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ.
ಏನಿದು ಪ್ರಕರಣ:
2012ರಲ್ಲಿ ಪತಿಯ ಗೆಳೆಯನ ಜೊತೆ ಪತ್ನಿಗೆ ಅಕ್ರಮ ಸಂಬಂಧ ಬೆಳೆದಿತ್ತು. ಈ ವೇಳೆ ಇವರಿಬ್ಬರು ತಮ್ಮದೇ ಹಲವು ನಗ್ನ ವಿಡಿಯೋ, ಸಂಭೋಗದ ವಿಡಿಯೋಗಳನ್ನು ಚಿತ್ರೀಕರಿಸಿದ್ದರು. ಈ ವಿಡಿಯೋಗಳನ್ನು ಮಹಿಳೆ ಡಿಲೀಟ್ ಮಾಡಿದ್ದರೆ, ಪತಿಯ ಗೆಳೆಯ ಮೊಬೈಲ್‌ನಲ್ಲಿ ಹಾಗೇ ಉಳಿಸಿಕೊಂಡಿದ್ದರು. ಇತ್ತ ಅಕ್ರಮ ಸಂಬಂಧ ಪತಿಗೆ ತಿಳಿದಾಗ ಪತ್ನಿ ನಿರಾಕರಿಸಿದ್ದಳು.
ವಿಚ್ಛೇದನ ಬಳಿಕ ‘ಸ್ತ್ರೀಧನ’ ಪತಿಗೆ ಸೇರಿದ್ದಲ್ಲ: ಹೈಕೋರ್ಟ್!
3 ವರ್ಷಗಳ ಬಳಿಕ ಪತಿಯ ಗೆಳೆಯ ಮತ್ತೆ ಲೈಂಗಿಕ ಚಟುವಟಿಕೆಗೆ ಒತ್ತಾಯಿಸಿದ್ದಾನೆ. ಆಕೆ ನಿರಾಕರಿಸಿದ್ದಾಳೆ. ಈ ವೇಳೆ ಹಳೆಯ ವಿಡಿಯೋಗಳನ್ನು ಆಕೆಯ ಪತಿ ಸೇರಿದಂತೆ ಹಲವರಿಗೆ ವ್ಯಾಟ್ಸ್ಆ್ಯಪ್ ಮಾಡಿದ್ದಾನೆ. ಮೋಸ ಮಾಡಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಳು.ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ವಿಡಿಯೋ ಹರಿಬಿಟ್ಟ ಆತನಿಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ.ನಗ್ನ ವಿಡಿಯೋಗಳನ್ನು ಹರಿಬಿಡುವುದು ಕೂಡ ಅಪರಾಧವಾಗಿದೆ ಎಂದು ಕೋರ್ಟ್ ಹೇಳಿದೆ.
ತೀರ್ಪಿಗೂ ಮುನ್ನ ಆರೋಪಪಟ್ಟಿ ತಿದ್ದುಪಡಿ ಅಕ್ರಮವಲ್ಲ: ಕೋರ್ಟ್
ಅಪರಾಧ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು ಪ್ರಕಟಿಸುವ ಮುನ್ನ ಯಾವುದೇ ಹಂತದಲ್ಲಿ ಆರೋಪ ಪಟ್ಟಿಯಲ್ಲಿ ಮಾರ್ಪಾಡು ಮಾಡಿ ಅಗತ್ಯ ಅಂಶ ಸೇರ್ಪಡೆ ಮಾಡುವುದು ಕಾನೂನು ಬಾಹಿರವಲ್ಲ ಎಂದು ಎಂದು ಹೈಕೋರ್ಚ್ ಅಭಿಪ್ರಾಯ ಪಟ್ಟಿದೆ.
ಪೋಕ್ಸೋ ಕಾಯ್ದೆ ಅಡಿ ಪ್ರಕರಣದಲ್ಲಿ ವಿಚಾರಣೆ ಆರಂಭವಾದ ಬಳಿಕ ಆರೋಪ ಪಟ್ಟಿಯಲ್ಲಿ ಸೆಕ್ಷನ್ 7 ಸೇರ್ಪಡೆ ಮಾಡಿರುವ ಕ್ರಮ ಪ್ರಶ್ನಿಸಿ ಕೋಲಾರದ ಮಾಲೂರು ತಾಲೂಕಿನ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅಪರಾಧ ದಂಡ ಸಂಹಿತೆ ಸೆಕ್ಷನ್ 216(1)ರ ಪ್ರಕಾರ ನ್ಯಾಯಾಲಯ ತೀರ್ಪು ಪ್ರಕಟಿಸುವ ಮುನ್ನ ಯಾವುದೇ ಹಂತದಲ್ಲಿ ಬೇಕಾದರೂ ಆರೋಪಪಟ್ಟಿಯಲ್ಲಿ ಮಾರ್ಪಾಡು ಮಾಡಿ ಅಗತ್ಯ ಅಂಶಗಳನ್ನು ಸೇರಿಸಬಹುದಾಗಿದೆ. ಆ ರೀತಿ ಆರೋಪ ಪಟ್ಟಿಯಲ್ಲಿ ಬದಲಾವಣೆ ಮಾಡುವ ಅಧಿಕಾರ ತನಿಖಾಧಿಕಾರಿಗಳಿಗೆ ಇರಲಿದೆ. ಅದನ್ನು ಯಾರೂ ಕುಸಿದುಕೊಳ್ಳಲಾಗದು ಎಂದೂ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
