Asianet Suvarna News Asianet Suvarna News

ಪಟಾಕಿ ಘಟಕ ಸ್ಫೋಟ, 11 ಸಾವು, 36 ಮಂದಿಗೆ ಗಾಯ; ಪ್ರಧಾನಿ ಮೋದಿ ಸಂತಾಪ!

ತಮಿಳುನಾಡಿನಲ್ಲಿ ಮತ್ತೊಂದು ಪಟಾಕಿ ದುರಂತ ಸಂಭವಿಸಿದೆ. ಈ ಬಾರಿಯ ದುರಂತದಲ್ಲಿ 11 ಮಂದಿ ಸಾವನ್ನಪ್ಪಿದರೆ, 36 ಮಂದಿ ಸ್ಥಿತಿ ಗಂಭೀರವಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Several workers died and 36 injured in explosion at firecracker factory in Tamil Nadu ckm
Author
Bengaluru, First Published Feb 12, 2021, 6:27 PM IST

ತಮಿಳುನಾಡು(ಫೆ.12): ಮತ್ತೊಂದು ಪಟಾಕಿ ದುರಂತ ತಮಿಳುನಾಡಿನ ವಿರುಧುನಗರದಲ್ಲಿ ನಡೆದಿದೆ. ಪಟಾಕಿ ಘಟಕದಲ್ಲಿ ದಿಢೀರ್ ಸ್ಫೋಟ ಸಂಭವಿಸಿದೆ. ಪರಿಣಾಮ 11 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 36 ಮಂದಿಗೆ ತೀವ್ರ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರದಾನಿ ನರೇಂದ್ರ ಮೋದಿ ದುರಂತದಲ್ಲ ಮಡಿದವರಿಗೆ ಸಂತಾಪ ಸೂಚಿಸಿದ್ದಾರೆ.

ಶಿವಮೊಗ್ಗ : ಬಾಂಬ್‌ ಸ್ಫೋಟ-9 ಮಂದಿಗೆ ಗಾಯ

ತಮಿಳುನಾಡಿನ ವಿರುಧುನಗರದಲ್ಲಿ ಸಂಭವಿಸಿದ ಪಟಾಕಿ ದುರಂತ ನನಗೆ ದುಃಖ ತಂದಿದೆ. ಈ ಸಂದರ್ಭದಲ್ಲಿ ದುಃಖಿತ ಕುಟಂಬದ ಜೊತೆ ನಿಲ್ಲುತ್ತೇನೆ. ಗಾಯಗೊಂಡವರು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ.  ದುರಂತದಲ್ಲಿ ಸಿಲುಕಿದರಿಗೆ ಸಹಾಯ ಮಾಡಲು ಅಧಿಕಾರಿಗಳು  ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಕಾರ್ಯಾಲಯ ಟ್ವೀಟ್ ಮಾಡಿದೆ.

 

ಚೆನ್ನೈ ನಗರದಿಂದ 500 ಕಿ.ಮೀ ದೂರದಲ್ಲಿರುವ ವಿರುಧುಗನರದಲ್ಲಿನ ಪಟಾಕಿ ಘಟಕ ದಿಢೀರ್ ಸ್ಫೋಟಗೊಂಡಿದೆ. ಇಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸುಟ್ಟು ಭಸ್ಮವಾಗಿದ್ದಾರೆ. ಸ್ಫೋಟದ ಸ್ಥಳದಿಂದ 9 ಮೃತದೇಹಳನ್ನು ಹೊರತೆಗೆಯಲಾಗಿದೆ. ಒಬ್ಬರ ಗುರುತು ಸಿಗದಂತೆ ಸುಟ್ಟು ಕರಕಲಾಗಿದ್ದಾರೆ. ಇನ್ನಿಬ್ಬರು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಬೆಂಗಳೂರಿನ KPCL ಪವರ್‌ ಪ್ಲಾಂಟ್‌ನಲ್ಲಿ ಭಾರೀ ಸ್ಫೋಟ

ಪಟಾಕಿ ಘಟಕದಲ್ಲಿ 50 ಮಂದಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಸದ್ಯ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ. ಇದರ ಜೊತೆ ರಕ್ಷಣ ಕಾರ್ಯಗಳು ಭರದಿಂದ ಸಾಗಿದೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ ಎಂದು  ಪೊಲೀಸರು ಹೇಳಿದ್ದಾರೆ.

Follow Us:
Download App:
  • android
  • ios