ಇಂಡಿಯಾ ಮೈತ್ರಿ ಒಕ್ಕೂಟ ಇದೀಗ ರಾಜ್ಯ ರಾಜ್ಯದಲ್ಲಿದೆ ಇದೆ ಎಂದು ಹುಡುಕುವ ಪರಿಸ್ಥಿತಿ ಎದುರಾಗಿದೆ. 28ಕ್ಕೂ ಹೆಚ್ಚು ಪಕ್ಷಗಳಿಂದ ತುಂಬಿ ತುಳುಕುತ್ತಿದ್ದ ಇಂಡಿಯಾ ಮೈತ್ರಿಯಲ್ಲಿ ಇದೀಗ ಒಂದೊಂದೆ ಪಕ್ಷಗಳು ಹೊರನಡೆದೆ ಕಾಂಗ್ರೆಸ್ ಏಕಾಂಗಿಯಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ತನ್ನ ಸ್ವಂತ ಬಲದ ಮೇಲೆ ಚುನಾವಣೆ ಎದುರಿಸಲಿದೆ ಎಂದು ಫಾರೂಖ್ ಅಬ್ದುಲ್ಲಾ ಘೋಷಿಸಿದ್ದಾರೆ.

ನವದೆಹಲಿ(ಫೆ.15) ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಮೋದಿ ಸೋಲಿಸಲು ರಚನೆಗೊಂಡ ಇಂಡಿಯಾ ಮೈತ್ರಿ ದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲಿದೆ ಎಂದು ಹಲವರು ವಿಶ್ಲೇಷಿಸಿದ್ದರು. ಆದರೆ ಇದೀಗ ಯಾವ ರಾಜ್ಯದಲ್ಲಿ ಇಂಡಿಯಾ ಮೈತ್ರಿ ಇದೆ ಎಂದು ಹುಡುಕುವ ಪರಿಸ್ಥಿತಿ ಎದುರಾಗಿದೆ. ಒಂದೊಂದೆ ರಾಜ್ಯದಲ್ಲಿನ ಪ್ರಮುಖ ಪಕ್ಷಗಳು ಮೈತ್ರಿಯಿಂದ ದೂರ ಸರಿದಿದೆ. ಕೆಲ ಪಕ್ಷಗಳು ಎನ್‌ಡಿಎ ಸೇರಿಕೊಂಡಿದೆ. ಇದೀಗ ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಸರದಿ. ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಯಾವುದೇ ಮೈತ್ರಿಯೊಂದಿಗೆ ಲೋಕಸಭಾ ಚುನಾವಣೆ ಎದುರಿಸುತ್ತಿಲ್ಲ. ನ್ಯಾಷನಲ್ ಕಾನ್ಫರೆನ್ಸ್ ಸ್ವಂತ ಬಲದ ಮೇಲೆ ಚುನಾವಣೆ ಎದುರಿಸಲಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರುಖ್ ಅಬ್ದುಲ್ಲಾ ಘೋಷಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಫಾರುಖ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್ ಯಾವುದೇ ಮೈತ್ರಿಯೊಂದಿಗೆ ಲೋಕಸಭೆ ಚುನಾವಣೆ ಎದುರಿಸುತ್ತಿಲ್ಲ. ಜಮ್ಮ ಮತ್ತು ಕಾಶ್ಮೀರ ಜನತೆ ನ್ಯಾಷನಲ್ ಕಾನ್ಫರೆನ್ಸ್ ಮೇಲೆ ನಂಬಿಕೆ ಇಟ್ಟಿದ್ದಾರೆ. ಲೋಕಸಭಾ ಚುನಾವಣೆ ಸಮಯದಲ್ಲೇ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆ ಕೂಡ ನಡೆಯಲಿದೆ. ನಮ್ಮ ಸ್ಪರ್ಧೆಯಲ್ಲಿ ಯಾವುದೇ ಗೊಂದಲವಿಲ್ಲ, ಏಕಾಂಗಿ ಹೋರಾಟವೇ ನಮ್ಮ ಶಕ್ತಿ ಎಂದು ಫಾರುಖ್ ಅಬ್ದುಲ್ಲಾ ಹೇಳಿದ್ದಾರೆ.

ದೆಹಲಿಯ ಎಲ್ಲಾ 7 ಕ್ಷೇತ್ರದಲ್ಲಿ ಆಪ್ ಸ್ವತಂತ್ರ ಸ್ಪರ್ಧೆ ಘೋಷಣೆ, ಇಂಡಿಯಾ ಮೈತ್ರಿಗೆ ಕೇಜ್ರಿವಾಲ್ ಶಾಕ್!

ನ್ಯಾಷನಲ್ ಕಾನ್ಫರೆನ್ಸ್ ಅಧಿಕೃತ ಹೇಳಿಕೆ ಇಂಡಿಯಾ ಮೈತ್ರಿಯನ್ನು ಮತ್ತಷ್ಟು ದುರ್ಬಲಗೊಳಿಸಿದೆ. ಒಂದೊಂದೆ ಪ್ರಮುಖ ಪಕ್ಷಗಳು ಸ್ವತಂತ್ರ ಸ್ಪರ್ಧೆ ಘೋಷಿಸುತ್ತಿದೆ. ಇದು ಮೈತ್ರಿ ಧರ್ಮಕ್ಕೆ ವಿರುದ್ಧವಾಗಿದೆ. ಇದರಿಂದ ಬಿಜೆಪಿ ಅಭ್ಯರ್ಥಿಗಳಿಗೆ ಲಾಭವಾಗಲಿದೆ ಎಂದು ಕಾಂಗ್ರೆಸ್ ಚಿಂತೆಗೀಡಾಗಿದೆ.

Scroll to load tweet…

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಈಗಾಗಲೇ ಏಕಾಂಗಿ ಸ್ಪರ್ಧೆ ಘೋಷಿಸಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಭೂತ ಪೂರ್ವ ಗೆಲವು ದಾಖಲಿಸಲಿದ ಎಂದಿದೆ. ಇಷ್ಟೇ ಅಲ್ಲ ಕಾಂಗ್ರೆಸ್ ಭಾರತದಲ್ಲಿ 40 ಸ್ಥಾನ ಗೆಲ್ಲುವುದೇ ಅನುಮಾನ ಎಂದು ಹೇಳಿದ್ದಾರೆ. ಇತ್ತ ಆಮ್ ಆದ್ಮಿ ಪಾರ್ಟಿ ಪಂಜಾಬ್‌ನಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದಿದೆ. ಇತ್ತ ದೆಹಲಿಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಪಡೆಯಲು ಅರ್ಹವಾಗಿಲ್ಲ, ಆದರೆ ಮೈತ್ರಿ ಧರ್ಮದ ಕಾರಣ ಒಂದು ಸ್ಥಾನ ನೀಡುವುದಾಗಿ ಆಪ್ ಹೇಳಿದೆ.

RLD ಮೈತ್ರಿ ಮುರಿದ ಬೆನ್ನಲ್ಲೇ ರಾಹುಲ್ ಯಾತ್ರೆ ಮಾರ್ಗ ಬದಲಾವಣೆ, ಪಶ್ಚಿಮ ಯುಪಿಗಿಲ್ಲ ಜೋಡೋ!

ಇಂಡಿಯಾ ಮೈತ್ರಿಯನ್ನು ಹುಟ್ಟುಹಾಕಿದ ಬಿಹಾರ ಮುಖ್ಯಮಂತ್ರಿ ನೀತೀಶ್ ಕುಮಾರ್ ಹಾಗೂ ಅವರ ಜೆಡಿಯು ಪಾರ್ಟಿ ಇದೀಗ ಇಂಡಿಯಾ ಮೈತ್ರಿ ತೊರೆದು ಎನ್‍‌ಡಿಎ ಜೊತೆ ಸೇರಿದ್ದಾರೆ. ಕೇರಳದಲ್ಲಿ ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ನಡುವೆ ತಿಕ್ಕಾಟ ನಡೆಯುತ್ತಿದೆ. ಹೀಗಾಗಿ ಬಹುತೇಕ ರಾಜ್ಯದಲ್ಲಿ ಮೈತ್ರಿ ಇಲ್ಲ. ಇತ್ತ ಕೇಂದ್ರಾಡಳಿತ ಪ್ರದೇಶದಲ್ಲೂ ಇಂಡಿಯಾ ಮೈತ್ರಿ ಕಾಣೆಯಾಗಿದೆ.