ಮೋದಿ ನಡೆಯಿಂದ ರಾಮಮಂದಿರ ಅಪವಿತ್ರ, ಕಾಂಗ್ರೆಸ್ ಗೆದ್ದರೆ ಕಾಯಕಲ್ಪ; ವಿವಾದ ಸೃಷ್ಟಿಸಿದ ನಾಯಕ!
ಪ್ರಧಾನಿ ನರೇಂದ್ರ ಮೋದಿ ಪ್ರೊಟೋಕಾಲ್ ಅನುಸರಿಸಿಲ್ಲ. ಅಪವಿತ್ರಗೊಂಡಿರುವ ರಾಮ ಮಂದಿರವನ್ನು ಇಂಡಿಯಾ ಒಕ್ಕೂಟ ಅಧಿಕ್ಕಾರ ಬಂದರೆ ನಾಲ್ಕು ಶಂಕರಾಚಾರ್ಯರನ್ನು ಕರೆಸಿ ಪವಿತ್ರಗೊಳಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ವಿವಾದ ಸೃಷ್ಟಿಸಿದ್ದಾರೆ.
ಮುಂಬೈ(ಮೇ.10)ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆಗಾಗಿ ಪ್ರಧಾನಿ ನರೇಂದ್ರ ಮೋದಿ 11 ದಿನಗಳ ಕಠಿಣ ವೃತ ಕೈಗೊಂಡಿದ್ದರು. ಶ್ರದ್ಧಾ ಭಕ್ತಿಯಿಂದ ರಾಮ ಮಂದಿರ ಪ್ರಾಣಪ್ರತಿಷ್ಠೆ ನೆರವೇರಿಸಿ ಚರಣಾಮೃತ ಸ್ವೀಕರಿಸುವ ಮೂಲಕ ಮೋದಿ ಉಪಾವಾಸ ವೃತ ಅಂತ್ಯಗೊಳಿಸಿದ್ದರು. ಇದೀಗ ಕಾಂಗ್ರೆಸ್ ನಾಯಕ ರಾಮ ಮಂದಿರ ವಿಚಾರದಲ್ಲಿ ಪ್ರದಾನಿ ಮೋದಿ ನಡೆಯನ್ನೇ ಪ್ರಶ್ನಿಸಿದ್ದಾರೆ. ಇಷ್ಟೇ ಅಲ್ಲ ಮೋದಿ ಶಿಷ್ಟಾಚಾರ ಪಾಲಿಸದ ಕಾರಣ ಅಪವಿತ್ರಗೊಂಡಿರುವ ರಾಮ ಮಂದಿರವನ್ನು ಇಂಡಿಯಾ ಮೈತ್ರಿ ಅಧಿಕಾರಕ್ಕೆ ಬಂದರೆ ಪವಿತ್ರ ಮಾಡಲಾಗುವುದು ಎಂದು ಮಹಾರಾಷ್ಟ್ರ ಅಧ್ಯಕ್ಷ ನಾನಾ ಪಟೊಲ್ ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣದಲ್ಲಿ ಪ್ರಧಾನಿ ಮೋದಿ ಪ್ರೊಟೋಕಾಲ್ ಪಾಲಿಸಿಲ್ಲ. ಮೋದಿ ಮಾಡಿದ ತಪ್ಪವನ್ನು ಕಾಂಗ್ರೆಸ್ ಸರಿಪಡಿಸಲಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ವಿರೋಧ ವ್ಯಕ್ತಪಡಿಸಿದ್ದ ನಾಲ್ವರು ಶಂಕರಾಚಾರ್ಯ ಮಠಧಿಪತಿಗಳನ್ನು ಕರೆಯಿಸಿ ಅವರ ಕೈಯಿಂದ ರಾಮ ಮಂದಿರ ಶುಚಿತ್ವಗೊಳಿಸಲಾಗುತ್ತದೆ ಎಂದು ನಾನಾ ಪಟೋಲ್ ಹೇಳಿದ್ದಾರೆ.
ಸ್ಯಾಮ್ ಪಿತ್ರೋಡಾರಿಂದ ಮತ್ತೊಂದು ವಿವಾದ : ದಕ್ಷಿಣ ಭಾರತೀಯರ ಆಫ್ರಿಕನರಿಗೆ ಹೋಲಿಸಿದ ಕಾಂಗ್ರೆಸ್ ನಾಯಕ
ರಾಮ ಮಂದಿರ ನಿರ್ಮಾಣದಲ್ಲಿ ಮೋದಿ ಹಲವು ತಪ್ಪು ಮಾಡಿದ್ದಾರೆ. ಶಿಷ್ಟಾಚಾರ ಪಾಲಿಸಿಲ್ಲ. ಹೀಗಾಗಿ ಶಂಕಾರಾಚಾರ್ಯ ಮಠದ ಸ್ವಾಮೀಜಿಗಳು ಪ್ರಾಣಪ್ರತಿಷ್ಠೆಗೆ ವಿರೋಧ ವ್ಯಕ್ತಪಡಿಸಿದ್ದರು. ಮೋದಿ ಮಾಡಿದ ತಪ್ಪುಗಳಿಂದ ರಾಮ ಮಂದಿರ ಪಾವಿತ್ರ್ಯ ಹಾಳಾಗಿದೆ. ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರವನ್ನು ಪವಿತ್ರಗೊಳಿಸಿ, ರಾಮ್ ದರ್ಬಾರ್ ಆರಂಭಿಸುತ್ತೇವೆ ಎಂದು ನಾನಾ ಪಟೋಲ್ ಹೇಳಿದ್ದಾರೆ.
ಆಯೋಧ್ಯ ಮಂದಿರದಲ್ಲಿರುವುದು ರಾಮನ ವಿಗ್ರಹವಲ್ಲ, ಅದು ಬಾಲ ರಾಮನ ವಿಗ್ರಹ. ಆಯೋಧ್ಯೆ ರಾಮ ಮಂದಿರದಲ್ಲಿ ಹಲವು ಪುನರುಜ್ಜೀವನ ಕಾರ್ಯಕ್ರಮಗಳನ್ನು ನಾವು ಕೈಗೊಳ್ಳುತ್ತೇವೆ ಎಂದು ನಾನಾ ಪಟೋಲ್ ಹೇಳಿದ್ದಾರೆ. ಆದರೆ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷನ ಹೇಳಿಕೆಗಳು ಭಾರಿ ವಿವಾದಕ್ಕೆ ಕಾರಣವಾಗಿದೆ.ನಿರ್ಮಾಣಹಂತದಿಂದ ರಾಮ ಮಂದಿರದಲ್ಲಿ ಪಾವಿತ್ರ್ಯತೆ ಕಾಪಾಡಿಕೊಳ್ಳಲಾಗಿದೆ. ರಾಮ ಮಂದಿರ ನಿರ್ಮಾಣ,ರಾಮ ಲಲ್ಲಾ ವಿಗ್ರಹ ಕೆತ್ತನೆ, ಪ್ರತಿಷ್ಠಾಪನೆ ಸೇರಿದಂತೆ ಎಲ್ಲಾ ವಿಚಾರದಲ್ಲೂ ಅಷ್ಟೇ ಪಾವಿತ್ರ್ಯತೆ ಕಾಪಾಡಲಾಗಿದೆ. ಇದೀಗ ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ರಾಮ ಮಂದಿರ ಕುರಿತು ಅವಹೇಳನ ಮಾಡುವುದು, ಪದ್ಧತಿ, ಅಚಾರ ವಿಚಾರಗಳನ್ನು ಹೀಗಳೆಯುವುದು ಸರಿಯಲ್ಲ ಅನ್ನೋ ವಾದ ಹುಟ್ಟಿಕೊಂಡಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮಮಂದಿರ ತೀರ್ಪು ರದ್ದತಿಗೆ ರಾಹುಲ್ ಚಿಂತನೆ: ಮಾಜಿ ಕಾಂಗ್ರೆಸ್ಸಿಗ ಆಚಾರ್ಯ
ನಾನಾ ಪಟೋಲ್ ತಕ್ಷಣವೇ ಕ್ಷಮೆ ಕೇಳಬೇಕು ಎಂದು ಸಾಮಾಜಿಕ ಮಾಧ್ಯಮದಲ್ಲಿ ರಾಮ ಭಕ್ತರು ಆಗ್ರಹಿಸಿದ್ದಾರೆ. 500 ವರ್ಷಗಳ ಬಳಿಕ ರಾಮ ಮಂದಿರ ಉದ್ಘಾಟನೆಯಾಗಿದೆ. ಆಮಂತ್ರಣ ನೀಡಿದರೂ ಪ್ರಾಣಪ್ರತಿಷ್ಠೆಗೆ ಬಾರದ ಕಾಂಗ್ರೆಸ್ ಇದೀಗ ಪಾವಿತ್ರ್ಯಗೊಳಿಸುವ ಅನಿವಾರ್ಯತೆಗೆ ಬಿದ್ದಿದೆ ಎಂದು ಹಲವರು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಿದ್ದಾರೆ.