ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ದೇಶದ ಪ್ರತಿ ಮಹಿಳೆಗೆ ವರ್ಷಕ್ಕೆ 1 ಲಕ್ಷ ರೂಪಾಯಿಯನ್ನು ನೀಡೋದಾಗಿ ಭರವಸೆ ನೀಡಿದೆ. ಇದರ ಬೆನ್ನಲ್ಲಿಯೇ ಕಾಂಗ್ರೆಸ್‌ ನಾಯಕ ಹೇಳಿರುವ ಸ್ಟೇಟ್‌ಮೆಂಟ್‌ ವೈರಲ್‌ ಆಗಿದೆ. 

ನವದೆಹಲಿ (ಮೇ.10): ಕಾಂಗ್ರೆಸ್ ನಾಯಕ ಕಾಂತಿಲಾಲ್ ಭುರಿಯಾ ಅವರು ಗುರುವಾರ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪಕ್ಷದ ಮಹಾಲಕ್ಷ್ಮಿ ಯೋಜನೆಯಡಿ ಪ್ರತಿ ಮಹಿಳೆಗೆ ₹1 ಲಕ್ಷ ರೂಪಾಯಿಯನ್ನು ಕಾಂಗ್ರೆಸ್‌ ನೀಡಲಿದೆ ಎಂದು ತಿಳಿಸಿದೆ. ಹಾಗೇನಾದರೂ ನಿಮಗೆ ಇಬ್ಬರು ಪತ್ನಿಯರಿದ್ದಲ್ಲಿ ಪುರುಷರಿಗೆ ₹2 ಲಕ್ಷ ಸಿಗಲಿದೆ ಎಂದು ಹೇಳಿದ್ದಾರೆ.ರತ್ಲಾಮ್‌ನಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಭೂರಿಯಾ ಸೈಲಾನಾದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡುತ್ತಾ, ‘ಪ್ರತಿಯೊಬ್ಬ ಮಹಿಳೆಯ ಖಾತೆಗೆ ₹ 1 ಲಕ್ಷ ಜಮಾ ಮಾಡಲಾಗುವುದು ಮತ್ತು ಇಬ್ಬರು ಹೆಂಡತಿಯರನ್ನು ಹೊಂದಿರುವವರಿಗೆ ₹ 2 ಲಕ್ಷ ಸಿಗುತ್ತದೆ’ ಎಂದು ಹೇಳಿದರು. ಅವರು ತಮಾಷೆಯಾಗಿ ಮಾಡಿರುವ ಈ ಹೇಳಿಕೆ ಈಗ ವಿವಾದ ಸೃಷ್ಟಿಸಿದೆ.ಮಹಾಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಮಾಸಿಕ ₹ 8,500 ನೆರವು ನೀಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆ ಭರವಸೆ ನೀಡಿದೆ. ತಮ್ಮ ಭಾಷಣದಲ್ಲಿ, ಭೂರಿಯಾ ಅವರು ಆದಿವಾಸಿಗಳನ್ನು ಪ್ರಧಾನಿ ನರೇಂದ್ರ ಮೋದಿ ಗೌರವಿಸುತ್ತಿಲ್ಲ ಎಂದು ಆರೋಪಿಸಿದರು, ಸಿಧಿಯಲ್ಲಿ ಬಿಜೆಪಿ ನಾಯಕರೊಬ್ಬರು ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆಯನ್ನು ಖಂಡಿಸಲು ಅವರು ವಿಫಲರಾಗಿದ್ದಾರೆ ಎಂದು ಹೇಳಿದರು.

ಅವರ ಹೇಳಿಕೆಗಳಿಗೆ ಆಡಳಿತಾರೂಢ ಬಿಜೆಪಿ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಭೂರಿಯಾ ವಿರುದ್ಧ ಭಾರತ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ. ಬಿಜೆಪಿ ವಕ್ತಾರ ನರೇಂದ್ರ ಸಲೂಜಾ ಕಾಂತಿಲಾಲ್ ಭೂರಿಯಾ ಅವರ ಹೇಳಿಕೆಯನ್ನು ಪೋಸ್ಟ್‌ ಮಾಡಿದ್ದು, "140 ಕೋಟಿ ಜನರನ್ನು ಪ್ರತಿನಿಧಿಸುವ ದೇಶದ ಮುಖ್ಯಸ್ಥ" ವಿರುದ್ಧ ಅವರ ಹೇಳಿಕೆಗಳು "ಆಕ್ಷೇಪಾರ್ಹ" ಎಂದು ಟೀಕಿಸಿದರು ಮತ್ತು ಇದು ಕಾಂಗ್ರೆಸ್‌ನ "ಸಣ್ಣ ಮನಸ್ಥಿತಿಯನ್ನು' ತೋರಿಸುತ್ತದೆ ಎಂದು ಹೇಳಿದರು.ಭುರಿಯಾ ಅವರು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಮತ್ತು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಜಿತು ಪಟ್ವಾರಿ ಅವರ ಸಮ್ಮುಖದಲ್ಲಿ ಈ ಭಾಷಣ ಮಾಡಿದ್ದಾರೆ. ಸಮಾವೇಶದಲ್ಲಿ ಪಟ್ವಾರಿ ಭೂರಿಯಾ ಅವರ ಮಾತನ್ನು ಬೆಂಬಲಿಸುತ್ತಾ, ಇದು ಭಯಾನಕ ಘೋಷಣೆ ಎಂದು ಹೇಳಿದ್ದಾರೆ.

ಭುರಿಯಾ 2009 ರಲ್ಲಿ ರತ್ಲಾಮ್ ಲೋಕಸಭಾ ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಆದರೆ 2014 ರಲ್ಲಿ ಬಿಜೆಪಿಯ ದಿಲೀಪ್ ಸಿಂಗ್ ಭೂರಿಯಾ ವಿರುದ್ಧ ಸೋಲು ಕಂಡಿದ್ದರು. 2015 ರಲ್ಲಿ, ದಿಲೀಪ್ ಸಿಂಗ್ ಭುರಿಯಾ ಅವರ ಸಾವಿನಿಂದ ಆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಗೆಲುವು ಸಾಧಿಸಿದ್ದರು.

ಕೇದಾರನಾಥದಲ್ಲಿ ಶಿವ ಸ್ಥಾಪಿತನಾಗಿದ್ದು ಹೇಗೆ? ಪಂಚಕೇದಾರಕ್ಕೂ ಮಹಾಭಾರತಕ್ಕೂ ಇರುವ ಲಿಂಕ್‌ ಏನು?

2019 ರಲ್ಲಿ ಅವರು ಬಿಜೆಪಿಯ ಗುಮನ್ ಸಿಂಗ್ ದಮೋರ್ ವಿರುದ್ಧ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ರತ್ಲಂ ಕ್ಷೇತ್ರಕ್ಕೆ ಮೇ 13 ರಂದು ಚುನಾವಣೆ ನಡೆಯಲಿದೆ. ಮಧ್ಯಪ್ರದೇಶದ ಅರಣ್ಯ ಸಚಿವ ನಾಗರ್ ಸಿಂಗ್ ಚೌಹಾಣ್ ಅವರ ಪತ್ನಿ ಬಿಜೆಪಿಯ ಅನಿತಾ ಚೌಹಾನ್ ಅವರ ವಿರುದ್ದ ಭೂರಿಯಾ ಸ್ಪರ್ಧಿಸಿದ್ದಾರೆ.

ಜಪಾನ್‌ ದೇಶವನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಸೌರ ವಿದ್ಯುತ್‌ ಉತ್ಪಾದಕ ರಾಷ್ಟ್ರ ಎನಿಸಿಕೊಂಡ ಭಾರತ!

Scroll to load tweet…