2024ರ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ವಿಪಕ್ಷಗಳ ಒಗ್ಗೂಡಿಸಿ ಬಿಜೆಪಿ ಸೋಲಿಲು ರಣತಂತ್ರ ಹೆಣೆಯುತ್ತಿದ್ದಾರೆ. ಆದರೆ ನಿತೀಶ್ ಈ ಪ್ರಯತ್ನದಲ್ಲಿ ತಮ್ಮ ರಾಜ್ಯದ ಸರ್ಕಾರವೇ ಅಲುಗಾಡಲು ಆರಂಭಿಸಿದೆ. ಸಂಪುಟದಿಂದ ಪ್ರಮುಖ ನಾಯಕ ರಾಜೀನಾಮೆ ನೀಡಿದ್ದಾರೆ.
ಪಾಟ್ನಾ(ಜೂ.13): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳು ಒಗ್ಗಟ್ಟಾಗಿ ಹೋರಾಟ ನಡೆಸಲು ತಂತ್ರ ಹೆಣೆಯಲಾಗುತ್ತಿದೆ. ಬಿಹಾರ ಸಿಎಂ ನಿತೀಶ್ ಕುಮಾರ್ ಈಗಾಗಲೇ ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಎನ್‌ಡಿಎ ವಿರೋಧಿ ಪಕ್ಷಗಳ ಜೊತೆ ಮಾತುಕತೆ ನಡೆಸಿದ್ದಾರೆ. 2024ರಲ್ಲಿ ಮೋದಿ ಸೋಲಿಸಿ ಅಧಿಕಾರಕ್ಕೇರಲು ಭಾರಿ ಪ್ರಯತ್ನ ನಡೆಯುತ್ತಿದೆ. ಈ ಪ್ರಯತ್ನದಲ್ಲಿ ಬಿಹಾರದ ರಾಜಕೀಯ ಪರಿಸ್ಥಿತಿ ಹದಗೆಟ್ಟಿದೆ. ಇದರ ಪರಿಣಾಮ ನಿತೀಶ್ ಕುಮಾರ್ ಸಂಪುಟದಿಂದ ಮಾಜಿ ಮುಖ್ಯಮಂತ್ರಿ ಪುತ್ರ, ಸಚಿವ ಸಂತೋಷ್ ಸುಮನ್ ಮಾಂಜಿ ರಾಜೀರಾಮೆ ನೀಡಿದ್ದಾರೆ.
2024ರ ವೇಳೆ ಪ್ರಬಲ ರಾಜಕೀಯ ಪಕ್ಷವಾಗಿ ಹೊರಹೊಮ್ಮಲು ನಿತೀಶ್ ಕುಮಾರ್ ಜೆಡಿಯು ಪ್ಲಾನ್ ಹಾಕಿಕೊಂಡಿದೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ಹೋರಾಟದಲ್ಲಿ ಸಿಂಹಪಾಲು ಪಡೆಯಲು ನಿತೀಶ್ ಕುಮಾರ್ ಮಹತ್ವದ ಪ್ಲಾನ್ ಹಾಕಿಕೊಂಡಿದ್ದಾರೆ. ಇದಕ್ಕಾಗೆ ಜೆಡಿಯು ಬೆಂಬಲಿಸುತ್ತಿರುವ ಕೆಲ ಪಕ್ಷಗಳನ್ನು ವಿಲೀನ ಮಾಡಲು ಮುಂದಾಗಿದ್ದಾರೆ. ಈ ಪ್ಲಾನ್ ಪ್ರಕಾರ ಜೆಡಿಯು ಮೈತ್ರಿ ಪಕ್ಷ ಹಿಂದುಸ್ತಾನಿ ಅವಾಮ್ ಮೋರ್ಚಾ((HAM) ಪಕ್ಷವನ್ನು ವಿಲೀನಗೊಳಿಸಲು ಪ್ರಯತ್ನ ನಡೆಯುತ್ತಿದೆ. ಇದನ್ನು ವಿರೋಧಿಸಿ HAM ಪಕ್ಷದ ಪ್ರಮುಖ ನಾಯಕ ಸಂತೋಷ್ ಮಾಂಜಿ ರಾಜೀನಾಮೆ ನೀಡಿದ್ದಾರೆ.
ಬಿಹಾರ ಸೇತುವೆ ವಿನ್ಯಾಸದಲ್ಲಿಯೇ ದೋಷ, ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಿತೀಶ್ ಕುಮಾರ್!
ನಿತೀಶ್ ಕುಮಾರ್ ಸರ್ಕಾರದಲ್ಲಿ ಎಸ್‌ಸಿ, ಎಸ್‌ಟಿ ಕಲ್ಯಾಣ ಸಚಿವರಾಗಿರುವ ಸಂತೋಷ್ ಮಾಂಜಿ ಪಕ್ಷವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ರಾಜೀರಾಮೆ ನೀಡಿರುವುದಾಗಿ ಹೇಳಿದ್ದಾರೆ. ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು, ಲಾಲೂ ಪ್ರಸಾದ್ ಯಾದವ್ ಅವರ ಆರ್‌ಜೆಡಿ, ಕಾಂಗ್ರೆಸ್ ಹಾಗೂ HAM ಮೈತ್ರಿ ಸರ್ಕಾರವಿದೆ. ಇದೀಗ HAM ನಾಯಕ ಸಂತೋಷ್ ಮಾಂಜಿ ರಾಜೀನಾಮೆ ನೀಡಿ ಹೊರಬಂದಿದ್ದಾರೆ.
HAM ಪಕ್ಷವನ್ನ ವಿಲೀನಗೊಳಿಸಲು ಜೆಡಿಯು ಭಾರಿ ಕಸರತ್ತು ನಡೆಸುತ್ತಿದೆ. ಆದರೆ HAM ಪಕ್ಷ ಬಿಹಾರಕ್ಕೆ ಮುಖ್ಯಮಂತ್ರಿ ಕೊಟ್ಟ ಪಕ್ಷವಾಗಿದೆ. ರಾಜ್ಯದ ಆಡಳಿತದಲ್ಲಿ ಪ್ರತಿಭಾರಿ ಪ್ರಮುಖ ಪಾತ್ರ ನಿರ್ವಹಿಸಿದೆ. ರಾಜ್ಯದ ಜನರ ಸುರಕ್ಷತೆ, ಆಭಿವೃದ್ಧಿಗೆ ಹಲವು ಕೆಲಸ ಮಾಡಿದೆ. ಇದೀಗ ಜೆಡಿಯು ಜೊತೆ ವಿಲೀನಕ್ಕೆ ನಾವು ತಯಾರಿಲ್ಲ. ನಮ್ಮ ಕಾರ್ಯಕರ್ತರು ತಯಾರಿಲ್ಲ. ಹೀಗಾಗಿ ರಾಜೀನಾಮೆ ನೀಡಿ ಹೊರಬಂದಿದ್ದೇನೆ ಎಂದು ಸಂತೋಷ್ ಸುಮನ್ ಹೇಳಿದ್ದಾರೆ.
ಕರ್ನಾಟಕದ ಗೆಲುವಿನಿಂದ ಕಾಂಗ್ರೆಸ್ ಕೈಹಿಡಿದ ವಿಪಕ್ಷ, ರಾಹುಲ್, ಖರ್ಗೆ ಭೇಟಿಯಾದ ಸಿಎಂ ನಿತೀಶ್!
HAM ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಸಂತೋಷ್ ಸುಮನ್ ರಾಜೀನಾಮೆಯಿಂದ ಸರ್ಕಾರದ ಮೇಲೆ ತೀವ್ರ ಪರಿಣಾಮ ಬಿರುವ ಸಾಧ್ಯತೆ ಇಲ್ಲ. ಕಾರಣ HAM ಪಕ್ಷ ನಾಲ್ವರು ಶಾಸಕರನ್ನು ಮಾತ್ರ ಹೊಂದಿದೆ. ಇಷ್ಟೇ ಅಲ್ಲ ಕಾಂಗ್ರೆಸ್, ಆರ್‌ಜೆಡಿ ಪಕ್ಷಗಳು ಜೆಡಿಯು ಜೊತೆಗಿರುವ ಕಾರಣ ಸಂಖ್ಯಾಬಲದ ಸಮಸ್ಯೆ ಇಲ್ಲ. ಆದರೆ ಈ ನಡೆ ನಿತೀಶ್ ಕುಮಾರ್ ಸರ್ಕಾರಕ್ಕೆ ತೀವ್ರ ಹಿನ್ನಡೆ ತಂದಿದೆ.
