ಅರವಿಂದ್ ಕೇಜ್ರಿವಾಲ್‌ಗೆ ಮತ್ತೊಂದು ಹಿನ್ನಡೆ, ಆಪ್‌ನ 6 ಕಾರ್ಪೋರೇಟರ್ ಬಿಜೆಪಿ ಸೇರ್ಪಡೆ!
ಆಮ್ ಆದ್ಮಿ ಪಾರ್ಟಿಗೆ ಇದೀಗ ಸಂಕಷ್ಟಗಳ ಸರಮಾಲೆ ಶುರುವಾಗಿದೆ. ಕರ್ನಾಟಕದಲ್ಲಿ ಪಕ್ಷಾಂತರ ಪರ್ವ ನಡೆಯುತ್ತಿದ್ದರೆ, ಅತ್ತ ಸೂರತ್‌ನ 6 ಕಾರ್ಪೋರೇಟರ್‌ಗಳು ಇದೀಗ ಬಿಜೆಪಿ ಸೇರಿಕೊಂಡಿದ್ದಾರೆ.
ಸೂರತ್(ಏ.15): ಆಮ್ ಆದ್ಮಿ ಪಾರ್ಟಿಗೆ ಸಮಸ್ಯೆಗಳು ತಪ್ಪುತ್ತಿಲ್ಲ. ಮನೀಶ್ ಸಿಸೋಡಿಯಾ ಜೈಲು ಪಾಲಾದರೆ, ಇತ್ತ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸಿಬಿಐ ಸಮನ್ಸ್ ನೀಡಿದೆ. ಈ ಘಟನೆಗಳ ಬೆನ್ನಲ್ಲೇ ಆಮ್ ಆದ್ಮಿ ಪಾರ್ಟಿಯ 6 ಕಾರ್ಪೋರೇಟರ್‌ಗಳು ಪಕ್ಷ ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ. ಸೂರತ್‌ನಲ್ಲಿ ಆಪ್ ಬಾವುಟ ಹಾರಿಸಿದ 6 ಕಾರ್ಪೋರೇಟರ್ಸ್ ಇದೀಗ ಬಿಜೆಪಿ ಸೇರಿಕೊಂಡಿದ್ದಾರೆ. ಗುಜರಾತ್ ಗೃಹ ಸಚಿವ ಸಾಂಘ್ವಿ ಸಮ್ಮುಖದಲ್ಲಿ ಆಪ್ ನಾಯಕರು ಪಕ್ಷ ಸೇರಿಕೊಂಡಿದ್ದಾರೆ. ಆಮ್ ಆದ್ಮಿ ಪಾರ್ಟಿಯಿಂದ ಬಿಜೆಪಿ ಸೇರಿಕೊಳ್ಳುತ್ತಿರುವ ಕಾರ್ಪೋರೇಟ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೂರತ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ 17 ಸ್ಥಾನ ಗೆದ್ದಿದ್ದ ಆಪ್, ಇದೀಗ ಪಕ್ಷಾಂತರಿಂದ 17 ಸ್ಥಾನಕ್ಕೆ ಕುಸಿದಿದೆ.
ಆಮ್ ಆದ್ಮಿ ಪಾರ್ಟಿ ನಿಜವಾದ ಮುಖ ಬಯಲಾಗಿದೆ. ಮೋಸದ ಆಟಗಳು, ಮರಳು ಮಾತುಗಳು ಹೆಚ್ಚು ದಿನ ನಡೆಯುವುದಿಲ್ಲ. ಜನರಿಗೆ ಆಮ್ ಆದ್ಮಿ ಪಾರ್ಟಿಯ ಸುಳ್ಳು ಭರವಸೆ, ಬಿಜೆಪಿ ವಿರುದ್ದ ಸುಳ್ಳು ಆರೋಪಗಳ ಅಸಲಿಯತ್ತು ಗೊತ್ತಾಗಿದೆ. ಹೀಗಾಗಿ ಕಾರ್ಪೋರೇಟರ್ಸ್ ಇದೀಗ ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ ಎಂದು ಸಾಂಘ್ವಿ ಹೇಳಿದ್ದಾರೆ.
ಮೋದಿ ಡಿಗ್ರಿ ಬಗ್ಗೆ ಈಗ ಅನುಮಾನ ಇನ್ನೂ ಜಾಸ್ತಿ ಆಗಿದೆ ಎಂದ ಅರವಿಂದ್ ಕೇಜ್ರಿವಾಲ್!
ಬಿಜೆಪಿ ಗೆದ್ದ ಕ್ಷೇತ್ರದಲ್ಲಿ ಅಭಿವೃದ್ಧಿಯಾಗುತ್ತಿದೆ. ಆಮ್ ಆದ್ಮಿ ಪಾರ್ಟಿ ಕಾರ್ಪೋರೇಟರ್‌ಗಳನ್ನು ತಮ್ಮ ತಾಳಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದೆ. ಅಭಿವೃದ್ಧಿ ಕಾಣದಾಗಿದೆ ಎಂದು ಬಿಜೆಪಿ ಸೇರಿದ ರುತಾ ಖೇಣಿ ಹೇಳಿದ್ದಾರೆ. ನರೇಂದ್ರ ಮೋದಿ ನಾಯಕತ್ವ, ಬಿಜೆಪಿ ಸಿದ್ಧಾಂತದಿಂದ ಪ್ರೇರಿತನಾಗಿ ಪಕ್ಷ ಸೇರಿಕೊಂಡಿದ್ದೇನೆ ಎಂದು ರುತಾ ಖೇಣಿ ಹೇಳಿದ್ದಾರೆ. ಬಿಜೆಪಿ ಮೂಲಕ ಸೂರತ್ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದ್ದಾರೆ.
ಆಮ್ ಆದ್ಮಿ ನಾಯಕರು ಬಿಜೆಪಿ ಸೇರಿಕೊಂಡ ಬೆನ್ನಲ್ಲೇ ಇದೀಗ ಸೂರತ್‌ನಲ್ಲಿ ಆಪ್ ಹಿಡಿದು ದುರ್ಬಲವಾಗಿದೆ. ಇತ್ತ ಆಪ್ ಈ ಕುರಿತು ಪ್ರತಿಕ್ರಿಯೆ ನೀಡಿದೆ. ಬಿಜೆಪಿ ಆಮಿಷ ತೋರಿಸಿದೆ. ಇತರ ತನಿಖಾ ಸಂಸ್ಥೆಗಳ ಮೂಲಕ ಬೆದರಿಕೆ ಹಾಕುತ್ತಿದೆ. ಇದರಿಂದ ನಮ್ಮ ಕಾರ್ಪೋರೇಟರ್ಸ್ ಅನಿವಾರ್ಯವಾಗಿ ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ.
ಪ್ರಧಾನಿ ಮೋದಿ ಡಿಗ್ರಿ ಕೇಳಿದ್ದ ಕೇಜ್ರಿವಾಲ್ ಅರ್ಜಿ ವಜಾ: 25 ಸಾವಿರ ದಂಡ
ಕೇಜ್ರಿವಾಲ್‌ಗೆ ಸಿಬಿಐ ಸಮನ್ಸ್
ದೆಹಲಿಯ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಏ.16ರಂದು ವಿಚಾರಣೆಗೆ ಹಾಜರಾಗುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಇದರಿಂದಾಗಿ ಇತ್ತೀಚೆಗೆ ಬಂಧಿತರಾದ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಳಿಕ ಕೇಜ್ರಿವಾಲ್ ಅವರಿಗೂ ಸಂಕಷ್ಟಆರಂಭವಾಗಿದೆ.ದೆಹಲಿಯಲ್ಲಿರುವ ಸಿಬಿಐ ಮುಖ್ಯಕಚೇರಿಗೆ ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲು ಕೇಜ್ರಿವಾಲ್‌ಗೆ ಸೂಚಿಸಲಾಗಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಮುಖ್ಯಮಂತ್ರಿಯೊಬ್ಬರನ್ನು ವಿಚಾರಣೆಗೆ ಕರೆದಿರುವುದು ಇತ್ತೀಚಿನ ದಿನಗಳಲ್ಲೇ ಅಪರೂಪದ ಘಟನೆಯಾಗಿದೆ. ‘ವಿಚಾರಣೆಗೆ ಕೇಜ್ರಿವಾಲ್ ಹಾಜರಾಗಲಿದ್ದಾರೆ’ ಎಂದು ಆಪ್ ಹೇಳಿದೆ ಹಾಗೂ ‘ಬಂಧಿಸುವ ಸಂಚು ನಡೆದಿದೆ’ ಎಂದು ಆರೋಪಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿರುವ ಸಿಬಿಐಗೆ ಈ ಹಗರಣದಲ್ಲಿ ಕೇಜ್ರಿವಾಲ್ ಅವರನ್ನು ಪ್ರಶ್ನಿಸುವಷ್ಟುಮಾಹಿತಿ ಲಭಿಸಿದೆ ಎಂದು ಮೂಲಗಳು ಹೇಳಿವೆ. ಹೀಗಾಗಿಯೇ ವಿಚಾರಣೆಗೆ ಕೇಜ್ರಿವಾಲ್ ಅವರಿಗೆ ಬುಲಾವ್ ಹೋಗಿದೆ.