* ಕೋವಿನ್‌ ಪೋರ್ಟಲ್‌ನಲ್ಲಿ ಮಹತ್ವದ ಬದಲಾವಣೆ* ಯಾರು ಬೇಕಾದರೂ ಇನ್ನು ಲಸಿಕೆ ಸ್ಟೇಟಸ್‌ ನೋಡಬಹುದು 

ನವದೆಹಲಿ(ನ.21): ದೇಶದ ಪ್ರತಿಯೊಬ್ಬ ವ್ಯಕ್ತಿಯ ಲಸಿಕಾಕರಣದ (Vaccination) ಪ್ರಕ್ರಿಯೆಯನ್ನು ಯಾವುದೇ ವ್ಯಕ್ತಿ ನೋಡಲು ಅವಕಾಶ ನೀಡುವ ಸೇವೆಯನ್ನು ಕೋವಿನ್‌ ಪೋರ್ಟಲ್‌ನಲ್ಲಿ (CoWIN Portal) ಕೇಂದ್ರ ಆರೋಗ್ಯ ಸಚಿವಾಲಯ ಸಕ್ರಿಯಗೊಳಿಸಿದೆ.

ಹೊಸ ಸೇವೆಯನ್ನು ಖಾಸಗಿ ಕಂಪನಿಗಳು, ಟ್ರಾವೆಲ್‌ ಏಜೆನ್ಸಿ (Travel Agency), ಕಚೇರಿಗಳು, ಉದ್ಯೋಗಿಗಳು, ಮನರಂಜನಾ ಏಜೆನ್ಸಿಗಳು ಅಥವಾ ಸರ್ಕಾರಿ ಏಜೆನ್ಸಿಗಳಾದ ಐಆರ್‌ಸಿಟಿಸಿ ಮುಂತಾದವು ವ್ಯಕ್ತಿಯ ಲಸಿಕಾಕರಣ ಸ್ಟೇಟಸ್‌ ಪರಿಶೀಲನೆ ವೇಳೆ ಬಳಕೆ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ನೋ ಯುವರ್‌ ವ್ಯಾಕ್ಸಿನೇಶನ್‌ ಸ್ಟೇಟಸ್‌’ (Vaccination Feature) ಫೀಚರ್‌ ನಾಗರಿಕರು ಲಸಿಕೆ ಸ್ವೀಕರಿಸಿರುವ ಬಗ್ಗೆ ಪರಿಶೀಲನೆ ಮಾಡಿ ಮಾಹಿತಿ ಒದಗಿಸುತ್ತದೆ. ಲಸಿಕೆ ಪಡೆದ ಜನರು ಇದನ್ನು ಜಾಲತಾಣಗಳಲ್ಲಿ ಹಂಚಿಕೊಂಡು ಲಸಿಕೆ ಅಭಿಯಾನವನ್ನು (Vaccination Campaign) ಪ್ರೋತ್ಸಾಹಿಸಬಹುದು.

ಏನೇನು ಪ್ರಕ್ರಿಯೆ?

- ಕೋವಿನ್‌ ಆ್ಯಪ್‌ನಲ್ಲಿ ಹೆಸರು, ಮೊಬೈಲ್‌ ಸಂಖ್ಯೆ ನಮೂದಿಸಬೇಕು

- ಆಗ ಮೊಬೈಲ್‌ಗೆ ಬರುವ ಒಟಿಪಿಯನ್ನು ಸಂಬಂಧಿಸಿದ ಸಿಬ್ಬಂದಿಗೆ ಹೇಳಬೇಕು

- ವ್ಯಾಕ್ಸಿನೇಶನ್‌ ಸ್ಟೇಟಸ್‌ ಲಭ್ಯವಾಗುತ್ತದೆ.

- ಸಂಬಂಧಿಸಿದ ಸಿಬ್ಬಂದಿಗೆ ‘ನೀವು ಲಸಿಕೆ ಪಡೆದಿದ್ದೀರಿ’ ಎಂದು ಖಚಿತವಾಗುತ್ತದೆ

- ಅದನ್ನು ಡೌನ್‌ಲೋಡ್‌ ಕೂಡ ಮಾಡಿಕೊಳ್ಳಬಹುದು.

ಲಸಿಕೆ ಪ್ರಮಾ​ಣ​ಪ​ತ್ರ​ದಲ್ಲಿ ಇನ್ನು ಜನ್ಮ ದಿನಾಂಕ

ಕೋವಿಡ್‌ ಲಸಿಕಾ ಪ್ರಮಾ​ಣ​ಪ​ತ್ರ​ದಲ್ಲಿ ಮಹ​ತ್ವದ ಬದ​ಲಾ​ವಣೆ ತರಲು ಕೇಂದ್ರ ಸರ್ಕಾರ ನಿರ್ಧ​ರಿ​ಸಿದೆ. ಇನ್ನು ವಿದೇ​ಶಕ್ಕೆ ತೆರ​ಳ​ಬ​ಯ​ಸುವ ವ್ಯಕ್ತಿ​ಗ​ಳ ಲಸಿಕಾ ಪ್ರಮಾ​ಣ​ಪ​ತ್ರ​ದಲ್ಲಿ ಜನ್ಮ​ದಿ​ನಾಂಕ ಕೂಡ ಇರ​ಲಿ​ದೆ ಎಂದು ಮೂಲ​ಗಳು ಹೇಳಿ​ವೆ.

ವಿಶ್ವಸಂಸ್ಥೆಯ ನಿಯಮಾವಳಿ ಪ್ರಕಾರ ಪ್ರಮಾ​ಣ​ಪ​ತ್ರ​ದ​ಲ್ಲಿ ಫಲಾನುಭವಿಗಳ ಜನ್ಮ ದಿನಾಂಕ ಇರ​ಬೇಕು. ಆದರೆ ಜನ್ಮ​ದಿ​ನಾಂಕವು ಪ್ರಮಾ​ಣ​ಪ​ತ್ರ​ದಲ್ಲಿ ಇಲ್ಲದ ಕಾರಣ ಬ್ರಿಟನ್‌ ಸರ್ಕಾ​ರವು ಲಸಿಕೆ ಪಡೆದ ಭಾರ​ತೀ​ಯ​ರಿಗೂ ಕ್ವಾರಂಟೈನ್‌ ಕಡ್ಡಾ​ಯ​ಗೊ​ಳಿ​ಸಿ​ತ್ತು.

ಈ ಹಿನ್ನೆ​ಲೆ​ಯಲ್ಲಿ ಕೋವಿಡ್‌ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದು ವಿದೇಶ ಪ್ರಯಾಣಕ್ಕೆ ಬಯಸಿದ್ದರೆ ಅವ​ರ ಲಸಿಕೆ ಪ್ರಮಾ​ಣ​ಪ​ತ್ರ​ದಲ್ಲಿ ಜನ್ಮ​ದಿ​ನಾಂಕ ನಿಗ​ದಿ​ಪ​ಡಿ​ಸ​ಲಾ​ಗು​ತ್ತದೆ. ಮುಂದಿನ ವಾರ ಕೋ-ವಿನ್‌ ವೆಬ್‌​ಸೈ​ಟ್‌​ನ​ಲ್ಲಲಿ ಈ ಬದ​ಲಾ​ವಣೆ ತರ​ಲಾ​ಗು​ತ್ತದೆ ಎಂದು ಮೂಲ​ಗಳು ತಿಳಿ​ಸಿ​ವೆ,

ಪ್ರಸ್ತುತ ಹುಟ್ಟಿದ ವರ್ಷದ ಲೆಕ್ಕಾಚಾರದಲ್ಲಿ ಲಸಿಕೆ ಫಲಾನುಭವಿಗಳಿಗೆ ಅವರ ಕೋವಿನ್‌ ಪ್ರಮಾಣ ಪತ್ರದಲ್ಲಿ ವಯಸ್ಸು ಮಾತ್ರವೇ ನಮೂದಿಸಲಾಗುತ್ತಿದೆ.