* ಕೊರೋನಾ ವೇಳೆ ಕರ್ನಾಟಕದ ಬಿ.ವಿ.ಶ್ರೀನಿವಾಸ್ ಕಾರ್ಯಕ್ಕೆ ಸೋನಿಯಾ ಗಾಂಧಿ ಪ್ರಶಂಸೆ* ಕೊರೋನಾ ಸಂಕಷ್ಟದ ಸಮಯದಲ್ಲಿ ಯುವ ಕಾಂಗ್ರೆಸ್ ಅತ್ಯುತ್ತಮವಾಗಿ ಕಾರ್ಯ ನಿರ್ವಹಣೆ* ಕೊರೋನಾ ಸೋಂಕಿತರಿಗೆ ಅಗತ್ಯ ಸೇವೆ ಮತ್ತು ಬೆಂಬಲ
ನವದೆಹಲಿ(ಜೂ.25): ಕರ್ನಾಟಕದ ಮುಖಂಡ ಬಿ.ವಿ. ಶ್ರೀನಿವಾಸ್ ಅವರ ನೇತೃತ್ವದ ಯುವ ಕಾಂಗ್ರೆಸ್ ಘಟಕ ಕೊರೋನಾ 2ನೇ ಅಲೆಯ ವೇಳೆ ಕೈಗೊಂಡ ಕಾರ್ಯವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕೊರೋನಾ ಸಂಕಷ್ಟದ ಸಮಯದಲ್ಲಿ ಯುವ ಕಾಂಗ್ರೆಸ್ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಕೊರೋನಾ ಸೋಂಕಿತರಿಗೆ ಅಗತ್ಯ ಸೇವೆ ಮತ್ತು ಬೆಂಬಲವನ್ನು ಒದಗಿಸಿದೆ. ಅದೇ ರೀತಿ ದೇಶದೆಲ್ಲೆಡೆ ಕಾಂಗ್ರೆಸ್‌ನ ಹಲವಾರು ನಾಯಕ, ನಾಯಕಿಯರು ಸ್ವಯಂ ಪ್ರೇರಿತರಾಗಿ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸಮುದಾಯ ಸೇವೆ ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಪಾಲಸಿಕೊಂಡರು ಬಂದಿರುವ ಸಂಪ್ರದಾಯವಾಗಿದ್ದು, ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಸೋನಿಯಾ ಗಾಂಧಿ ಕರೆ ನೀಡಿದ್ದಾರೆ.
