ನವದೆಹಲಿ(ಜು.22): 3 ಕೋಟಿ ಜನಸಂಖ್ಯೆ ಹೊಂದಿರುವ ರಾಜಧಾನಿ ದೆಹಲಿಯಲ್ಲಿ ಶೇ.23.48ರಷ್ಟುಜನರು ಈಗಾಗಲೇ ಕೊರೋನಾ ಸೋಂಕಿಗೆ ತುತ್ತಾಗಿ ಗುಣಮುಖರಾಗಿದ್ದಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಆದರೆ ಈ ಪೈಕಿ ಬಹುತೇಕರಲ್ಲಿ ಯಾವುದೇ ರೋಗ ಲಕ್ಷಣ ಇಲ್ಲದ ಕಾರಣ ಅವರಿಗೆ ಸೋಂಕು ಬಂದಿರುವ ಅರಿವೇ ಆಗಿಲ್ಲ ಎಂದು ವರದಿ ಹೇಳಿದೆ.

ದೇಶದ 18 ಕೋಟಿ ಮಂದಿಗೆ ಗೊತ್ತೇ ಇಲ್ಲದೆ ಬಂದು ಹೋಗಿದೆ ಕೊರೋನಾ!

ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವು ದಿಲ್ಲಿ ಸರ್ಕಾರದ ಸಹಯೋಗದಲ್ಲಿ ಜೂನ್‌ 23ರಿಂದ ಜುಲೈ 10ರ ನಡುವೆ, 11 ಜಿಲ್ಲೆಗಳ 21 ಸಾವಿರ ನಿರ್ದಿಷ್ಟಜನರ ಒಪ್ಪಿಗೆ ಪಡೆದು, ಅವರ ರಕ್ತವನ್ನು ನಮೂನೆಯನ್ನು ಪರೀಕ್ಷೆಗೆ ಒಳಪಡಿಸಿ ಅಧ್ಯಯನ ನಡೆಸಿತ್ತು. ಈ ವೇಳೆ ಶೇ.23.48ರಷ್ಟುಜನರ ದೇಹದಲ್ಲಿ ಆ್ಯಂಡಿಬಾಡಿಗಳು ಪತ್ತೆಯಾಗಿವೆ. ಆ್ಯಂಡಿಬಾಡಿ ಪತ್ತೆಯಾಗಿದೆ ಎಂದರೆ ಅವರ ದೇಹದಲ್ಲಿ ನಿರ್ದಿಷ್ಟರೋಗ ಕಾಣಿಸಿಕೊಂಡಿದ್ದು, ಅದರ ವಿರುದ್ಧ ಅವರ ದೇಹದಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗಿವೆ ಎಂದರ್ಥ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಅಂದರೆ ಸರಾಸರಿ ಆಧಾರದಲ್ಲಿ ನೋಡಿದರೆ 3 ಕೋಟಿಯಲ್ಲಿ ಅಂದಾಜು 70 ಲಕ್ಷ ಜನರಲ್ಲಿ ಈಗಾಗಲೇ ಸೋಂಕು ಕಾಣಿಸಿಕೊಂಡು ಅವರೆಲ್ಲಾ ಗುಣಮುಖರಾಗಿದ್ದಾರೆ.

ರೆಮ್‌ಡೆಸಿವಿರ್‌ನ ಜೆನರಿಕ್‌ ಮಾದರಿ ರಿಲೀಸ್: ಬೆಂಗಳೂರಲ್ಲಿ ಉತ್ಪಾದನೆ!

‘ಕೊರೋನಾ ಬಾಧೆ ಆರಂಭವಾಗಿ 6 ತಿಂಗಳು ಆಗುತ್ತಿದೆ. ಈ ವೇಳೆಗೆ ಅನೇಕ ಜನನಿಬಿಡ ಪ್ರದೇಶಗಳನ್ನು ಹೊಂದಿರುವ ದಿಲ್ಲಿಯಲ್ಲಿ ಶೇ.23.48 ಜನರಿಗೆ ದಿಲ್ಲಿಯಲ್ಲಿ ಕೊರೋನಾ ತಾಗಿದೆ. ಕೊರೋನಾ ತಡೆಗೆ ಸಾಕಷ್ಟುಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಉಳಿದ ಶೇ.77ರಷ್ಟುಜನರು ಸೋಂಕಿಗೆ ತುತ್ತಾಗಬಹುದು. ಹೀಗಾಗಿ ಶುಚಿತ್ವ ಕಾಯ್ದುಕೊಳ್ಳುವಿಕೆ, ಮಾಸ್ಕ್‌ ಧರಿಸುವಿಕೆ, ಅಂತರ ಕಾಯ್ದುಕೊಳ್ಳುವಿಕೆ, ಸೋಂಕಿತರ ಸಂಪರ್ಕದ ಪತ್ತೆ, ಕಂಟೈನ್ಮೆಂಟ್‌ ವಲಯಗಳ ಸೃಷ್ಟಿ- ಇತ್ಯಾದಿ ಕ್ರಮಗಳನ್ನು ಮುಂದುವರಿಸಬೇಕಾಗುತ್ತದೆ’ ಎಂದು ಅಧ್ಯಯನ ಹೇಳಿದೆ.