ರೆಮ್‌ಡೆಸಿವಿರ್‌ನ ಜೆನರಿಕ್ ಮಾದರಿ ರಿಲೀಸ್: ಬೆಂಗಳೂರಲ್ಲಿ ಉತ್ಪಾದನೆ!
ರೆಮ್‌ಡೆಸಿವಿರ್‌ನ ಜೆನರಿಕ್ ಮಾದರಿ ಬಿಡುಗಡೆ| ಬೆಂಗಳೂರಲ್ಲಿ ಉತ್ಪಾದನೆ| ಡೆಸ್ರೆಂ ಹೆಸರಿನಲ್ಲಿ ಮಾರುಕಟ್ಟೆಗೆ, 100 ಎಂಜಿಗೆ 4800 ರು.
ನವದೆಹಲಿ(ಜು.21): ಕೊರೋನಾ ಸೋಂಕಿತರಿಗೆ ನೀಡಲಾಗುತ್ತಿರುವ ರೆಮ್‌ಡೆಸಿವರ್ ಔಷಧದ ಜನರಿಕ್ ಮಾದರಿಯನ್ನು ಭಾರತದಲ್ಲಿ ಮತ್ತೊಂದು ಕಂಪನಿ ಬಿಡುಗಡೆ ಮಾಡಿದೆ. ಅಮೆರಿಕದ ಗಿಲೀಡ್ ಕಂಪನಿಯ ರೆಮ್‌ಡೆಸಿವರ್‌ನ ಔಷಧವನ್ನು ಮೈಲಾನ್ ಕಂಪನಿ ಡೆಸ್ರೆಂ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 100 ಎಂಎಲ್‌ನ ಔಷಧಕ್ಕೆ ಕಂಪನಿ 4800 ರು. ದರ ನಿಗದಿಪಡಿಸಿದ್ದು, ಅದನ್ನು ಬೆಂಗಳೂರಿನಲ್ಲೇ ಉತ್ಪಾದಿಸುವುದಾಗಿ ಹೇಳಿದೆ.
ಕೊರೋನಾ ಶಮನಕ್ಕೆ ನಂಜನಗೂಡು ಲಸಿಕೆ?
ರೆಮಿಡೆಸಿವರ್ ಕಂಪನಿ ಬಿಡುಗಡೆ ಮಾಡಿರುವ ಔಷಧವನ್ನು ಜನರಿಕ್ ಮಾದರಿಯಲ್ಲಿ ಈಗಾಗಲೇ ಭಾರತದಲ್ಲಿ ಸಿಪ್ಲಾ ಮತ್ತು ಹೆಟಿರೋ ಹೆಲ್ತ್‌ಕೇರ್ ಸಂಸ್ಥೆಗಳು ಬಿಡುಗಡೆ ಮಾಡಿವೆ. ಸಿಪ್ಲಾ ಕಂಪನಿಯ ಸಿಮ್‌ರೆಮಿ ಔಷಧಕ್ಕೆ 4000 ರು. ಮತ್ತು ಹೆಟಿರೋ ಕಂಪನಿಯ ಕೋವಿಫೋರ್ ಹೆಸರಿನ ಔಷಧಕ್ಕೆ 5400 ರು. ದರ ನಿಗದಿಪಡಿಸಲಾಗಿದೆ. ಈ ಔಷಧಗಳ ಮೇಲೆ ಕೇಂದ್ರ ಗರಿಷ್ಠ ದರ ಮಿತಿ ಹಾಕದೇ ಇರುವ ಹಿನ್ನೆಲೆಯಲ್ಲಿ ಪ್ರತಿಯೊಂದು ಕಂಪನಿಗಳು ಒಂದೇ ಔಷಧವನ್ನು ಬೇರೆ ಬೇರೆ ದರದಲ್ಲಿ ಮಾರಾಟ ಮಡುತ್ತಿವೆ.
ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿ ಗಂಭೀರ ಸ್ಥಿತಿಯಲ್ಲಿ ಬಳಲುತ್ತಿರುವ ಕೊರೋನಾ ರೋಗಿಗಳಿಗೆ ರೆಮ್‌ಡೆಸಿವಿರ್ ಅನ್ನು ಬಳಕೆ ಮಾಡಲು ಅನುಮತಿ ದೊರೆತಿದೆ.