Asianet Suvarna News Asianet Suvarna News

ಬಾಬ್ರಿ ಮಸೀದಿ ಧ್ವಂಸ ಪ್ರತೀಕಾರಕ್ಕೆ ಬಾಂಬ್ ಸ್ಫೋಟಿಸಿದ ಆರೋಪಿ ಅಬ್ದುಲ್ ಕರೀಮ್ ಖುಲಾಸೆ!

1993ರ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ, ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯಲ್ಲಿ ಬಾಂಬ್ ತಯಾರಕನಾಗಿದ್ದ ಸೈಯದ್ ಅಬ್ದುಲ್ ಕರೀಮ್ ತುಂಡಾನನ್ನು ಟಾಡಾ ಕೋರ್ಟ್ ಪ್ರಕರಣಗಳಿಂದ ಖುಲಾಸೆಗೊಳಿಸಿದೆ.
 

Serial bomb blasts case 1993 Tada Court Acquits main accuse Syed abdul karim tunda ckm
Author
First Published Feb 29, 2024, 1:30 PM IST

ಜೈಪುರ(ಫೆ.29) ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯಲ್ಲಿ ಬಾಂಬ್ ತಯಾರಿಕೆಯ ಮಾಸ್ಟರ್ ಆಗಿದ್ದ ಆರೋಪಿ ಸೈಯದ್ ಅಬ್ದುಲ್ ಕರೀಮ್ ತುಂಡಾನನ್ನು 1993ರ ಸರಣಿ ಬಾಂಬ್ ಸ್ಫೋಟ ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ. ಟಾಡಾ ಕೋರ್ಟ್ ತೀರ್ಪು ನೀಡಿದ್ದು, ಆರೋಪಿ ಅಬ್ದುಲ್ ಕರೀಮ್ ತುಂಡಾ ಬಂಧಮುಕ್ತರಾಗಿದ್ದಾರೆ. ಅಬ್ದುಲ್ ಕರೀಮ್ 1993ರ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿದ್ದರು. ಬಾಬ್ರಿ ಮಸೀದಿ ಧ್ವಂಸಕ್ಕೆ ಒಂದು ವರ್ಷ ತುಂಬುತ್ತಿದ್ದಂತೆ ಪ್ರತೀಕಾರ ತೀರಿಸಲು 1993ರಲ್ಲಿ ರೈಲು ಸೇರಿದಂತೆ ಹಲವೆಡೆ ಬಾಂಬ್ ಇಟ್ಟು ಸ್ಫೋಟಿಸಲಾಗಿತ್ತು. ಈ ಸರಣಿ ಸ್ಫೋಟದಲ್ಲಿ ಇಬ್ಬರು ಮೃತಪಟ್ಟರೆ, ಹಲವರು ಗಾಯಗೊಂಡಿದ್ದರು.

1993ರ ಸರಣಿ ಬಾಂಬ್ ಸ್ಫೋಟಕ್ಕೆ ಬಾಂಬ್ ತಯಾರಿಸಿ ನೀಡಿದ್ದ ಪ್ರಮುಖ ಆರೋಪಿ ಸೈಯದ್ ಅಬ್ದುಲ್ ಕರೀಮ್ ತುಂಡಾ. ಪಾಕಿಸ್ತಾನದ ಲಷ್ಕರ್ ಇತೋಯ್ಬಾ ಉಗ್ರ ಸಂಘನೆಯ ಪ್ರಮುಖ ಸದಸ್ಯನಾಗಿದ್ದ ಅಬ್ದುಲ್ ಕರೀಮ್, ಪಾಕ್ ಉಗ್ರರ ನೆರವಿನೊಂದಿಗೆ ಭಾರತದಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಿದ್ದ. ಸೂಕ್ತ ಸಾಕ್ಷ್ಯಾಧರಗಳ ಕೊರತೆ ಕಾರಣ 2016ರಲ್ಲಿ ದೆಹಲಿ ಕೋರ್ಟ್ ಅಬ್ದುಲ್ ಕರೀಮ್‌ಗೆ ಕ್ಲೀನ್ ಚಿಟ್ ನೀಡಿತ್ತು. ಇದೀಗ ರಾಜಸ್ಥಾನದ ಭಯೋತ್ಪಾದಕ ವಿರೋಧ ಚಟುವಟಿಕೆ ಕಾಯ್ದೆ(TADA) ಕೋರ್ಟ್ ಸರಣಿ ಬಾಂಬ್ ಸ್ಫೋಟ ಪ್ರಕರಣದಿಂದ ಖುಲಾಸೆಗೊಳಿಸಿದೆ. ಆದರೆ ಇತರ ಹಲವು ಪ್ರಕರಣಗಳು ಈತನ ಮೇಲಿದೆ. ಇಷ್ಟೇ ಅಲ್ಲ 1996ರ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪ ಸಾಬೀತಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕಾರಣ ಜೈಲಿನಲ್ಲಿ ಕೊಳೆಯಬೇಕಾಗಿದೆ.

 

ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟಕ್ಕೆ ಬೇನಾಮಿ ಬ್ಯಾಂಕ್ ಖಾತೆ..!

1992ರಲ್ಲಿ ಬಾಬ್ರಿ ಮಸೀದಿ ಧ್ವಂಸದಿಂದ ದೇಶಾದ್ಯಂತ ಮುಸ್ಲಿಮರು ಭಾರಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಭಾರಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಆದರೂ ಹಿಂಸಾಚಾರ ನಡೆದಿತ್ತು. 1993ರಲ್ಲಿ ಬಾಬ್ರಿ ಮಸೀದಿ ಧ್ವಂಸಕ್ಕೆ ಒಂದು ವರ್ಷವಾಗುತ್ತಿದ್ದಂತೆ ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆ ಪ್ರತೀಕಾರಕ್ಕೆ ನಿಂತಿಕೊಂಡಿತ್ತು. ಇದಕ್ಕಾಗಿ ಭಾರತದಲ್ಲಿ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿದ್ದ ಉಗ್ರರಿಗೆ ಬಾಂಬ್ ಬ್ಲಾಸ್ಟ್ ಕಾರ್ಯಾಚರಣೆ ಹೊಣೆ ನೀಡಲಾಗಿತ್ತು. 

1993ರಿಂದ 1996ರಲ್ಲಿ ಒಟ್ಟು 40 ಕಡೆ ಬಾಂಬ್ ಸ್ಫೋಟ ನೆಡಸಲಾಗಿತ್ತು. ಅಬ್ದುಲ್ ಕರೀಮ್ ತುಂಡಾ ಈ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯಾಗಿದ್ದ. ಪಾಕಿಸ್ತಾನ ಉಗ್ರರ ನೆರವಿಂದ ಬಾಂಗ್ಲಾದೇಶಕ್ಕೆ ಪರಾರಿಯಾದ ಅಬ್ದುಲ್ ಕರೀಮ್ ತುಂಡಾನನ್ನು ಭಾರತ ಬಂಧಿಸುವಲ್ಲಿ ಯಶಸ್ವಿಯಾಗಿತ್ತು. 2013ರಲ್ಲಿ ಭಾರತ ನೇಪಾಳ ಗಡಿಯಲ್ಲಿ ಅಬ್ದುಲ್ ಕರೀಮ್‌ನನ್ನು ಬಂಧಿಸಲಾಗಿತ್ತು. 

ಕೇರಳ ಬಾಂಬ್‌ ಸ್ಫೋಟದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು: ಮೃತರ ಸಂಖ್ಯೆ 4ಕ್ಕೆ ಏರಿಕೆ

1996ರಲ್ಲಿ ಸೋನಿಪತ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಅಬ್ದುಲ್ ಕರೀಮ್ ಮೇಲಿನ ಆರೋಪ ಸಾಬೀತಾಗಿತ್ತು. ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.ಜೊತೆಗೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. 1993ರ ಸರಣಿ ಬಾಂಬ್ ಸ್ಫೋಟದಿಂದ ಖುಲಾಸೆಗೊಂಡರೂ ಇತರ ಪ್ರಕರಣಗಳಲ್ಲಿ ಜೈಲಿನಲ್ಲೇ ಇರಬೇಕಾಗಿದೆ.
 

Follow Us:
Download App:
  • android
  • ios