Asianet Suvarna News Asianet Suvarna News

ಶಾಲೆಯಲ್ಲೇ ತಾರತಮ್ಯ: ದಲಿತ ಮಕ್ಕಳಿಗೆ ಬೇರೆ ಊಟದ ಕ್ಯೂ

  • ಶಾಲೆಗಳಲ್ಲಿಯೇ ತಾರಮ್ಯ - ಪುಟ್ಟ ಮಕ್ಕಳ ತಲೆಗೆ ಕೆಟ್ಟ ಯೋಚನೆ
  • ತಟ್ಟೆ ಹಿಡಿದು ಬೇರೆಯೇ ಸಾಲಿನಲ್ಲಿ ಬರಬೇಕು ದಲಿತ ಮಕ್ಕಳು
Separate Midday meal queues for Dalit students in UP school principal booked dpl
Author
Bangalore, First Published Oct 1, 2021, 1:38 PM IST
  • Facebook
  • Twitter
  • Whatsapp

ದೆಹಲಿ(ಅ.01): ಶಾಲೆಗಳಲ್ಲಿ ಮಕ್ಕಳ ನಡುವೆ ತಾರತಮ್ಯ ತೊಡೆದು ಹಾಕಲೆಂದೇ ಸಹಭೋಜನ, ಸಮವಸ್ತ್ರ ಸೇರಿ ಬಹಳಷ್ಟು ನಿಯಮಗಳಿವೆ. ಆದರೆ ಎಷ್ಟೆ ನಿಯಮ ಮಾಡಿ ಮನಸಿನ ಕೊಳೆ ಹೋಗದಿದ್ದರೆಷ್ಟು ಬಂತು ? ಇದಕ್ಕೆ ಉದಾಹರಣೆಯಾಗಿ ಅಮಾನವೀಯ ಘಟನೆಯೊಂದು ಅಮೇಥಿ ಗ್ರಾಮದಲ್ಲಿ ನಡೆದಿದೆ. ಮುಗ್ಧ ಮಕ್ಕಳ ಮಧ್ಯೆ ವಿಷ ಬೀಜ ಬಿತ್ತುವಂತಹ ಈ ಘಟನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಅಮೇಥಿಯಲ್ಲಿ ಪ್ರಾಥಮಿಕ ಶಾಲೆಯ ವಿರುದ್ಧ ಜಾತಿ ಆಧಾರಿತ ತಾರತಮ್ಯದ ಆರೋಪ ಮಾಡಲಾಗಿದೆ. ಗಡೇರಿ ಗ್ರಾಮದಲ್ಲಿರುವ ಶಾಲೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳನ್ನು ವಿವಿಧ ಸರತಿ ಸಾಲಿನಲ್ಲಿ ಕುಳಿತುಕೊಳ್ಳುವಂತೆ ಮಾಡಿ ಬೇರೆ ಬೇರೆಯಾಗಿಯೇ ಮಧ್ಯಾಹ್ನದ ಊಟವನ್ನು(Midday meal) ನೀಡಲಾಗಿದೆ.

ಪಂಜಾಬ್‌ನ ಮೊದಲ ದಲಿತ ಸಿಎಂ ಬಳಿಕ ಅಧಿಕಾರ ಸ್ವೀಕರಿಸಿದ ದಲಿತ DGP!

ಈ ಸಂಬಂಧ ಶಾಲೆಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಶಾಲೆಯ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ. ಪ್ರಿನ್ಸಿಪಾಲ್ ತನ್ನ ವಿದ್ಯಾರ್ಥಿಗಳನ್ನು ಥಳಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಆದರೂ ಪ್ರಾಂಶುಪಾಲೆ ಕುಸುಮ್ ಸೋನಿ ಈಗ ಶಾಲೆಯ ಆವರಣದಲ್ಲಿ ಗಲಾಟೆ ಮಾಡಿ, ಗೇಟ್‌ಗಳಿಗೆ ಬೀಗ ಹಾಕಿದ್ದಕ್ಕಾಗಿ ಗ್ರಾಮದ ಮುಖ್ಯಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. ಅವರ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ.

ಆರೋಪಗಳಿಗೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ಒಬ್ಬ ಪವನ್ ದುಬೆ, ಹಳ್ಳಿಯ ಮುಖ್ಯಸ್ಥನ ಪ್ರತಿನಿಧಿ ಎಂದು ಹೇಳಿಕೊಂಡು ಇಲ್ಲಿಗೆ ಬಂದ. ಎಲ್ಲರನ್ನು ಹೊರಗೆ ತಳ್ಳಿ, ಗೇಟ್‌ಗಳನ್ನು ಲಾಕ್ ಮಾಡಿ, ಶಾಲೆಯ ಚಿತ್ರಗಳನ್ನು ಕ್ಲಿಕ್ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ. ನಾನು ಪೊಲೀಸ್ ದೂರು ದಾಖಲಿಸಿದ್ದೇನೆ ಎಂದು ಸೋನಿ ಹೇಳಿದ್ದಾರೆ.

ಶಾಲೆಯ ಮುಖ್ಯಸ್ಥ ವಿನಯ್ ಕುಮಾರ್ ಜೈಸ್ವಾಲ್, ಶಾಲೆಯಲ್ಲಿ ಊಟದ ಸಮಯದಲ್ಲಿ ಆಗುವ ಸಮಸ್ಯೆಗಳ ಬಗ್ಗೆ ದೂರು ನೀಡಲು ಪೋಷಕರು ಮತ್ತು ವಿದ್ಯಾರ್ಥಿಗಳು ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ನಾನು ಶಾಲೆಗೆ ಹೋಗಿದ್ದೆ, ಆದರೆ ಅಲ್ಲಿ ಶಿಕ್ಷಕರನ್ನು ಹುಡುಕಲಾಗಲಿಲ್ಲ. ಶಿಕ್ಷಕಿ ಸಮಯಕ್ಕೆ ಬರುವುದಿಲ್ಲ. ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಹೇಳಲಾಗಿದೆ ಎಂದು ಜೈಸ್ವಾಲ್ ಹೇಳಿದ್ದಾರೆ.

Follow Us:
Download App:
  • android
  • ios