ರಘುಪತಿ ರಾಘವ ರಾಜಾ ರಾಂ ಬದಲು ಭಾರತ್ ತೇರಿ ಟುಕ್ಡೆ ಹೋಂಗೆ; ಕಾಂಗ್ರೆಸ್ ಅಸಲಿ ಮುಖ ತೆರೆದಿಟ್ಟ ನಾಯಕ!
ಕಾಂಗ್ರೆಸ್ ಪಕ್ಷದಲ್ಲಿರುವ ಪ್ರಮುಖ ನಾಯಕರು ಹಿಂದೂ ವಿರೋಧಿಗಳಾಗಿದ್ದಾರೆ. ಕೇಸರಿ ಕಂಡರೆ ಅವರಿಗೆ ಮೈಯೆಲ್ಲಾ ಉರಿಯುತ್ತದೆ. ಈಗನ ಕಾಂಗ್ರೆಸ್ ದೇಶ ವಿರೋಧಿಗಳ ಜೊತೆ ಸೇರಿ ದೇಶವನ್ನೇ ವಿಭಜನೆ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಚಾರ್ಯ ಪ್ರಮೋದ್ ಕೃಷ್ಣಂ ಹೇಳಿದ್ದಾರೆ.
ನವದೆಹಲಿ(ಆ.21) ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ಭಾರಿ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್, ಮೈತ್ರಿ ಒಕ್ಕೂಟದ ಮೂಲಕ ಅಧಿಕಾರಕ್ಕೇರುವ ಲೆಕ್ಕಾಚಾರದಲ್ಲಿದೆ. ಇದಕ್ಕಾಗಿ ಪ್ರತಿ ರಾಜ್ಯ ಕಾಂಗ್ರೆಸ್ ಘಟಕಕ್ಕೆ ಲೋಕಸಭಾ ಸ್ಥಾನಗಳ ಗುರಿ ನೀಡಿದೆ. ಕರ್ನಾಟಕದಲ್ಲಿ 20 ಸ್ಥಾನ ಗೆಲ್ಲಲು ಟಾಸ್ಕ್ ನೀಡಲಾಗಿದೆ. ಇತರ ಪಕ್ಷಗಳಿಂದ ನಾಯಕರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿದೆ. ಈ ಬೆಳವಣಿಗೆ ನಡುವೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಆಚಾರ್ಯ ಪ್ರಮೋದ್ ಕೃಷ್ಣಂ ನೀಡಿರುವ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ನಡೆಸುತ್ತಿರುವ ಲೋಕಸಭಾ ಚುನಾವಣಾ ಪ್ರಯತ್ನಕ್ಕೆ ಹಿನ್ನಡೆ ನೀಡಿದೆ. ಕಾಂಗ್ರೆಸ್ ಪಕ್ಷದ ಪ್ರಮುಖ ಸ್ಥಾನದಲ್ಲಿರುವ ಕೆಲ ನಾಯಕರು ಹಿಂದೂ ವಿರೋಧಿಗಳಾಗಿದ್ದಾರೆ. ಕೇಸರಿ ಕಂಡರೆ ಉರಿದು ಬೀಳುತ್ತಾರೆ. ಭಾರತ್ ಮಾತಾ ಕಿ ಜೈ ಘೋಷಣೆಯನ್ನು ವಿರೋಧಿಸುತ್ತಾರೆ. ಅವರು ಟುಕ್ಡೆ ಟುಕ್ಡೆ ಗ್ಯಾಂಗ್ ಜೊತೆ ಸೇರಿ ಭಾರತವನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ ಎಂದು ಅಚಾರ್ಯ ಪ್ರಮೋದ್ ಕೃಷ್ಣಂ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಮುಖ ಸ್ಥಾನದಲ್ಲಿರುವ ಕೆಲ ನಾಯಕರು ಕಾಂಗ್ರೆಸ್‌ನ ಸಿದ್ಧಾಂತಗಳನ್ನು ಮರೆತಿದ್ದಾರೆ. ಇಂದಿರಾ ಗಾಂಧಿ ಹಾಗೂ ಮಹಾತ್ಮಾಗಾಂಧಿ ಹಾಕಿಕೊಟ್ಟ ಸಿದ್ಧಾಂತದಲ್ಲಿ ಪಕ್ಷ ಮುನ್ನಡೆಸುತ್ತಿಲ್ಲ. ಹೆಜ್ಜೆ ಹೆಜ್ಜೆಗೂ ಹಿಂದೂ ವಿರೋಧಿ ನಡೆ ತಾಳುತ್ತಾರೆ. ನಾನು ಹಾಗುವ ವಸ್ತ್ರ, ತಿಲಕಕ್ಕೂ ತಗಾದೆ ತೆಗೆಯುತ್ತಿದ್ದಾರೆ. ಇವರು ಟುಕ್ಡೆ ಟುಕ್ಡೆ ಗ್ಯಾಂಗ್ ಜೊತೆ ಸೇರಿಕೊಂಡು ಭಾರತವನ್ನೇ ವಿಭಜಿಸಲು ಹೊರಟಿದ್ದಾರೆ ಎಂದು ಆಚಾರ್ಯ ಹೇಳಿದ್ದಾರೆ.
ಲೋಕಸಭಾ ಸಮರ: ಈ ಬಾರಿ ಮಲ್ಲಿಕಾರ್ಜುನ ಖರ್ಗೆ ಎಲ್ಲಿಂದ ಸ್ಪರ್ಧಿಸುತ್ತಾರೆ?
ಮಹತ್ಮಾ ಗಾಂಧಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ ರೀತಿ ದೇಶಕ್ಕೆ ಮಾದರಿಯಾಗಿತ್ತು. ರಘುಪತಿ ರಾಘವ ರಾಜಾರಾಂ, ಪತೀತ ಪಾವನ ಸೀತಾರಾಂ ಕಾಂಗ್ರೆಸ್ ಸಿದ್ದಾಂತದಲ್ಲಿತ್ತು. ಇದೀಗ ಭಾರತ್ ತೇರಿ ಟುಕ್ಡೆ ಹೋಂಗೆ ಅನ್ನೋ ಘೋಷಣೆಯಾಗಿ ಮಾರ್ಪಟ್ಟಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಕಾಂಗ್ರೆಸ್ ಕೆಲ ಪ್ರಮುಖರ ನಡೆಗೆ ಅಸಧಾನಗೊಂಡಿದ್ದಾರೆ ಎಂದು ಅಚಾರ್ಯ ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಣಿ ಸಮಿತಿಯಲ್ಲಿ ಆಚಾರ್ಯ ಪ್ರಮೋದ್ ಕೃಷ್ಣಂ ಅವರಿಗೆ ಸ್ಥಾನ ನೀಡಿಲ್ಲ. ಈ ಬೆಳವಣಿಗೆ ಕುರಿತು ಹಲವರು ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದಾರೆ. ಇನ್ನು ಖುದ್ದು ಪ್ರತಿಕ್ರಿಯೆ ನೀಡಿರುವ ಆಚಾರ್ಯ, ಕಾಂಗ್ರೆಸ್ ಪ್ರಮುಖ ನಾಯಕರಿಗೆ ನನ್ನ ವಸ್ತ್ರ, ತಿಲಕ ಹಿಡಿಸುತ್ತಿಲ್ಲ. ಆದರೆ ಸ್ಥಾನಕ್ಕಾಗಿ ಅಥವ ಕಾಂಗ್ರೆಸ್ ನಾಯಕರಿಗಾಗಿ ಬದುಕು ಬದಲಿಸಲು ಸಾಧ್ಯವಿಲ್ಲ ಎಂದು ಆಚಾರ್ಯ ಹೇಳಿದ್ದಾರೆ.
ಘರ್ ವಾಪಸಿ ಹಗ್ಗ ಜಗ್ಗಾಟ: ಅತೃಪ್ತರ ಓಲೈಕೆಗೆ ಬಿಜೆಪಿ ಕಸರತ್ತು
ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್, ಪಕ್ಷದಲ್ಲಿ ಉನ್ನತ ನಿರ್ಧಾರಗಳನ್ನು ಕೈಗೊಳ್ಳುವ ಸಂಸ್ಥೆಯಾದ ‘ಕಾಂಗ್ರೆಸ್ ಕಾರ್ಯಕಾರಿ ಸಮಿತಿ’ಯನ್ನು (ಸಿಡಬ್ಲ್ಯುಸಿ) ಭಾನುವಾರ ಪುನಾರಚಿಸಿದೆ. ಈ ಸಮಿತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ರಾಹುಲ… ಗಾಂಧಿ, ಅಧೀರ್ ರಂಜನ್ ಚೌಧರಿ, ಎ.ಕೆ. ಆ್ಯಂಟನಿ, ಅಂಬಿಕಾ ಸೋನಿ, ಮೀರಾ ಕುಮಾರ್,ದಿಗ್ವಿಜಯ ಸಿಂಗ್,ಪಿ ಚಿದಂಬರಂ,ತಾರೀಖ್ ಅನ್ವರ್,ಲಾಲ… ಥನ್ಹಾವಾಲಾ, ಮುಕುಲ… ವಾಸ್ನಿಕ್, ಆನಂದ ಶರ್ಮಾ, ಅಶೋಕ್ ಚವಾಣ್, ಅಜಯ… ಮಾಕನ್, ಚರಣಜಿತ್ ಸಿಂಗ್ ಚನ್ನಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕುಮಾರಿ ಸೆಲ್ಜಾ ಸೇರಿದಂತೆ ಪ್ರಮುಖರಿಗೆ ಸ್ಥಾನ ನೀಡಲಾಗಿದೆ.