ಶಬ್ಬಾಶ್..! ಹುಕ್ಕಾ ಸೇದುತ್ತ ಕೋರ್ಟ್ ವಿಚಾರಣೆಗೆ ವಕೀಲ ಹಾಜರ್!
ಕೊರೋನಾ ಕಾರಣಗಳಿಂದಾಗಿ ಕೋರ್ಟ್ ವಿಚಾರಣೆಗಳು ಈಗ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಾರಂಭಿಸಿವೆ. ಇದು ಕೆಲವು ವಕೀಲರ ಚಪಲಗಳು ಬಯಲಾಗುವಂತೆ ಮಾಡಿದೆ. ಅದರಲ್ಲೂ ದೇಶದ ಖ್ಯಾತ ಹಿರಿಯ ವಕೀಲ ರಾಜೀವ್ ಧವನ್ ಅವರು ತಮ್ಮ ನಿವಾಸದಲ್ಲೇ ಹುಕ್ಕಾ ಸೇದುತ್ತ ವಿಚಾರಣೆಗೆ ಹಾಜರಾಗಿದ್ದು ವಿವಾದಕ್ಕೀಡಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ
ಜೈಪುರ(ಆ.14): ಇತ್ತೀಚೆಗೆ ವಿಡಿಯೋ ಕಾನ್ಫರೆನ್ಸ್ (ವರ್ಚುವಲ್) ಮೂಲಕ ನಡೆದ ಕೋರ್ಟ್ ವಿಚಾರಣೆಗೆ ವಕೀಲರು ಬನಿಯನ್ ಧರಿಸಿ, ಟೀಶರ್ಟ್ ಹಾಕಿಕೊಂಡು ಹಾಗೂ ಮನೆಯಲ್ಲೇ ಮಂಚದ ಮೇಲೆ ಮಲಗಿ ವಿಚಾರಣೆಗೆ ಹಾಜರಾಗಿದ್ದಾಯ್ತು. ಈಗ ಹುಕ್ಕಾ ಸೇದುತ್ತ ಹಾಜರಾಗುವ ಸರದಿ!
ಹೌದು. ರಾಜಸ್ಥಾನ ಹೈಕೋರ್ಟ್‌ನಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ವಿಚಾರಣೆ ವೇಳೆ ದೇಶದ ಖ್ಯಾತ ಹಿರಿಯ ವಕೀಲ ರಾಜೀವ್ ಧವನ್ ಅವರು ತಮ್ಮ ನಿವಾಸದಲ್ಲೇ ಹುಕ್ಕಾ ಸೇದುತ್ತ ವಿಚಾರಣೆಗೆ ಹಾಜರಾಗಿದ್ದು ವಿವಾದಕ್ಕೀಡಾಗಿದೆ.
6 ಬಿಎಸ್‌ಪಿ ಶಾಸಕರು ಕಾಂಗ್ರೆಸ್‌ನಲ್ಲಿ ವಿಲೀನವಾಗಿದ್ದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ರಾಜಸ್ಥಾನ ಹೈಕೋರ್ಟ್‌ನ ಜೈಪುರ ಪೀಠ ವಿಚಾರಣೆ ನಡೆಸುತ್ತಿತ್ತು. ಈ ವೇಳೆ ಧವನ್ ಅವರ ಮುಖಕ್ಕೆ ಕೆಲವು ಕಾಗದಪತ್ರಗಳು ಅಡ್ಡವಾಗಿದ್ದು ವಿಡಿಯೋದಲ್ಲಿ ಮೊದಲು ಕಂಡುಬರುತ್ತಿದ್ದು, ಅದರ ಹಿಂದೆ ಸುರುಳಿಯಾಕಾರದ ಹೊಗೆ ಏಳುತ್ತಿರುವುದು ಕಾಣಿಸಿದೆ. ನಂತರ ತಮ್ಮ ಕಾಗದಪತ್ರಗಳನ್ನು ಧವನ್ ಬದಿಗೆ ಸರಿಸುತ್ತಾರೆ. ಆಗ ಅವರು ಹುಕ್ಕಾ ಸೇದುತ್ತಿರುವುದು ಕಂಡುಬರುತ್ತದೆ. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆದರೆ ಈ ವಿದ್ಯಮಾನವನ್ನು ನ್ಯಾಯಾಧೀಶರು ಗಮನಿಸಿದರೋ ಇಲ್ಲವೋ ತಿಳಿದುಬಂದಿಲ್ಲ.
ಬೆಂಗಳೂರು ಗಲಭೆ ಪ್ರಕರಣಕ್ಕೆ ಮತ್ತೊಂದು ಮೆಗಾ ಟ್ವಿಸ್ಟ್; 2 ದಿನದಿಂದ ನಡೆದಿತ್ತು ಸ್ಕೆಚ್..!
ಇನ್ನು ಶುಕ್ರವಾರ ವಿಚಾರಣೆ ಮುಂದುವರಿದಾಗ ಧವನ್ ಅವರ ವಿಡಿಯೋ ಏಕಾಏಕಿ ಆಫ್ ಆಯಿತು. ‘ಧವನ್ ಆಫ್ ಮಾಡಿದರಾ?’ ಎಂದು ನ್ಯಾಯಾಧೀಶರು ಕೇಳಿದ ಪ್ರಸಂಗವೂ ನಡೆಯಿತು.
ಗುಟ್ಕಾ ತಿಂದು ಸಿಕ್ಕಿಬಿದ್ದ ವಕೀಲ!
ನವದೆಹಲಿ: ಸುಪ್ರೀಂ ಕೋರ್ಟ್‌ನ ವರ್ಚುವಲ್ ವಿಚಾರಣೆ ವೇಳೆ ವಕೀಲರೊಬ್ಬರು ಗುಟ್ಕಾ ತಿಂದು ಬೈಸಿಕೊಂಡಿದ್ದಾರೆ. ನ್ಯಾ ಅರುಣ್ ಮಿಶ್ರಾ ಅವರು ಪ್ರಕರಣವೊಂದನ್ನು ವಿಡಿಯೋ ಮೂಲಕ ವಿಚಾರಣೆ ನಡೆಸುತ್ತಿರುವಾಗ ವಕೀಲರೊಬ್ಬರು ಗುಟ್ಕಾ ತಿನ್ನುದನ್ನು ಗಮನಿಸಿ, ದಬಾಯಿಸಿದರು. ಆಗ ವಕೀಲ ‘ಕ್ಷಮಿಸಿ’ ಎಂದರು. ಆಗ ಮತ್ತಷ್ಟು ಕ್ರುದ್ಧರಾದ ನ್ಯಾ ಮಿಶ್ರಾ, ‘ಏನಿದು? ನಾವು ಈ ಮುಂಚೆಯೂ ನೋಡಿದ್ದೇವೆ. ಕ್ಷಮಿಸಿ ಎನ್ನಬೇಡಿ. ಇದು ಮರುಕಳಿಸಕೂಡದು. ಇಲ್ಲಿಗೇ ನಿಲ್ಲಿಸಿ’ ಎಂದು ಕಿಡಿಕಾರಿದರು.