Asianet Suvarna News Asianet Suvarna News

100 ಎನ್‌​ಐಸಿ ಕಂಪ್ಯೂ​ಟ​ರ್‌​ ಮೇಲೆ ಬೆಂಗಳೂರು ಕಂಪನಿ ಸೈಬರ್‌ ದಾಳಿ!

100 ಎನ್‌​ಐಸಿ ಕಂಪ್ಯೂ​ಟ​ರ್‌​ ಮೇಲೆ ಬೆಂಗಳೂರು ಕಂಪನಿ ಸೈಬರ್‌ ದಾಳಿ| ವೈರಸ್‌ ಬಂದಿದ್ದು ಬೆಂಗ​ಳೂರು ಐಟಿ ಕಂಪ​ನಿ​ಯಿಂದ| ಪೊಲೀಸ್‌ ತನಿಖೆ ವೇಳೆ ಬೆಳ​ಕಿ​ಗೆ| ಇ-ಮೇಲ್‌​ನ​ಲ್ಲಿತ್ತು ವೈರ​ಸ್‌| ಇ-ಮೇಲ್‌ ತೆರೆ​ದ ಕಂಪ್ಯೂ​ಟ​ರ್‌​ಗಳ ಕೆಲಸ ಬಾಧಿ​ತ| ಭಾರಿ ಸೈಬರ್‌ ಭದ್ರತಾ ಲೋಪದ ಭೀತಿ

Security Of Government Computers Breached E Mail Traced To Bengaluru pod
Author
Bangalore, First Published Sep 19, 2020, 1:59 PM IST

ನವ​ದೆ​ಹ​ಲಿ(ಸೆ.19): ಸರ್ಕಾ​ರದ ವೆಬ್‌​ಸೈಟ್‌ಗಳು, ಪ್ರಧಾ​ನಿ​ಯಂಥ ಗಣ್ಯರ ಕಂಪ್ಯೂ​ಟ​ರ್‌ ವ್ಯವಸ್ಥೆ, ನಾಗ​ರಿ​ಕರ ಸೈಬರ್‌ ದತ್ತಾಂಶ​ಗ​ಳು ಹಾಗೂ ಇತರ ಕಂಪ್ಯೂ​ಟರ್‌ ವ್ಯವ​ಸ್ಥೆಗಳನ್ನು ನೋಡಿ​ಕೊ​ಳ್ಳುವ ನ್ಯಾಷ​ನ​ಲ್‌ ಇನ್ಫ​ರ್ಮೆ​ಟಿಕ್ಸ್‌ ಸೆಂಟರ್‌ನ (ಎ​ನ್‌​ಐ​ಸಿ​) 100 ಕಂಪ್ಯೂ​ಟ​ರ್‌​ಗಳ ಮೇಲೆ ಸೈಬರ್‌ ದಾಳಿ ನಡೆ​ದಿ​ದೆ. ವೈರಸ್‌ ಬಂದಿದ್ದು ಬೆಂಗ​ಳೂ​ರಿನ ಐಟಿ ಕಂಪ​ನಿ​ಯೊಂದ​ರಿಂದ ಎಂದು ಪತ್ತೆ​ಯಾ​ಗಿ​ದೆ.

ವೈರಸ್‌ ದಾಳಿ ಆಗು​ತ್ತಿ​ದ್ದಂತೆಯೇ ದಿಲ್ಲಿ ಪೊಲೀ​ಸ​ರಿಗೆ ಎನ್‌​ಐಸಿ ದೂರು ನೀಡಿತು. ದೂರಿನ ಅನ್ವಯ ದಿಲ್ಲಿ ಪೊಲೀಸ್‌ ವಿಶೇಷ ಘಟ​ಕವು ಮಾಹಿತಿ ತಂತ್ರ​ಜ್ಞಾನ ಕಾಯ್ದೆ​ಯಡಿ ದೂರು ದಾಖ​ಲಿ​ಸಿ​ಕೊಂಡಿದೆ. ಆರಂಭಿಕ ತನಿ​ಖೆಯ ಸಂದ​ರ್ಭ​ದಲ್ಲಿ, ಬೆಂಗ​ಳೂ​ರಿನ ಮಾಹಿತಿ ತಂತ್ರ​ಜ್ಞಾನ ಕಂಪ​ನಿ​ಯೊಂದ​ರಿಂದ ಎನ್‌​ಐ​ಸಿಗೆ ಇ-ಮೇಲ್‌ ರವಾ​ನೆ​ಯಾ​ಗಿದೆ. ಈ ಇ-ಮೇಲ್‌​ನಲ್ಲಿನ ವೈರ​ಸ್‌​ನಿಂದ ಎನ್‌​ಐ​ಸಿಯ ಕಂಪ್ಯೂ​ಟ​ರ್‌​ಗಳು ಬಾಧಿತವಾಗಿ​ರ​ಬ​ಹುದು ಎಂದು ತಿಳಿ​ದು​ಬಂದಿ​ದೆ.

ಎನ್‌​ಐ​ಸಿಯ ಉದ್ಯೋ​ಗಿ​ಯೊ​ಬ್ಬರು ಈ ಶಂಕಾ​ಸ್ಪದ ಇ-ಮೇಲ್‌ ಸ್ವೀಕ​ರಿ​ಸಿ​ದ್ದಾರೆ. ಆದರೆ ಅವ​ರಿಗೆ ಇ-ಮೇಲ್‌ ಸರಿ​ಯಾಗಿ ಓಪನ್‌ ಆಗು​ತ್ತಿರಲಿಲ್ಲ. ಏನೋ ಶಂಕಾ​ಸ್ಪದ ಚಟು​ವ​ಟಿಕೆ ಇದ​ರ​ಲ್ಲಿದೆ ಎಂದು ಭಾವಿ​ಸಿದ ಅವರು ಇತ​ರ ಸಹೋ​ದ್ಯೋ​ಗಿ​ಗಳ ಗಮ​ನಕ್ಕೆ ತಂದಿ​ದ್ದಾರೆ. ಆದರೆ ಶಂಕಾ​ಸ್ಪದ ಇ-ಮೇಲ್‌ ತಮಗಷ್ಟೇ ಅಲ್ಲ, ತಮ್ಮ ಸಹೋ​ದ್ಯೋ​ಗಿ​ಗ​ಳಿಗೂ ಬಂದಿದ್ದು, ಅವರ ಕಂಪ್ಯೂ​ಟ​ರ್‌​ಗಳೂ ಬಾಧಿ​ತ​ವಾ​ಗಿವೆ ಎಂದು ಅವರ ಅರಿ​ವಿಗೆ ಬಂದಿದೆ. ಕೂಡಲೇ ಎನ್‌​ಐಸಿ ಎಚ್ಚ​ರಿಕೆ ಸಂದೇ​ಶ​ವನ್ನು ಎಲ್ಲ ಉದ್ಯೋ​ಗಿ​ಗ​ಳಿಗೂ ನೀಡಿ, ಪೊಲೀಸರ ಗಮ​ನಕ್ಕೆ ಈ ವಿಷಯ ತಂದಿದೆ ಎಂದು ಪೊಲೀ​ಸರು ಹೇಳಿ​ದ್ದಾ​ರೆ.

ಶಂಕಾ​ಸ್ಪ​ದ ಇ-ಮೇಲ್‌ ಅನ್ನು ಯಾವ್ಯಾವ ಕಂಪ್ಯೂ​ಟ​ರ್‌​ನಲ್ಲಿ ತೆರೆ​ಯ​ಲಾ​ಗಿ​ದೆಯೋ ಆ ಕಂಪ್ಯೂ​ಟ​ರ್‌​ಗಳು ಬಾಧಿ​ತ​ವಾ​ಗಿವೆ. ಇದರ ಮೂಲ ಹುಡು​ಕ​ಹೊ​ರ​ಟಾಗ ಇ-ಮೇಲ್‌ ರವಾನೆ ಆಗಿ​ರು​ವುದು ಬೆಂಗ​ಳೂರು ಐಟಿ ಕಂಪ​ನಿ​ಯೊ​ಂದ​ರಿಂದ ಎಂದು ಗೊತ್ತಾ​ಗಿದೆ.

ಭಾರತದ ಭದ್ರತೆ, ನಾಗ​ರಿ​ಕರು, ಪ್ರಧಾನಿ, ರಾಷ್ಟ್ರೀಯ ಭದ್ರತಾ ಸಲ​ಹೆ​ಗಾ​ರರು, ಗೃಹ ಸಚಿ​ವ​ರು ಹಾಗೂ ಸರ್ಕಾ​ರ ಪ್ರಮು​ಖ​ರ ದತ್ತಾಂಶ​ಗಳನ್ನು ಎನ್‌​ಐ​ಸಿಯ ಸೈಬರ್‌ ಹಬ್‌ ನೋಡಿಕೊಳ್ಳು​ತ್ತ​ದೆ. ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟ​ದಲ್ಲೂ ಇ-ಆಡ​ಳಿ​ತದ ಜಾರಿಗೆ ನೆರವು ನೀಡು​ತ್ತ​ದೆ.

Follow Us:
Download App:
  • android
  • ios