ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಭದ್ರತೆಯಲ್ಲಿ ಭಾರಿ ಲೋಪವಾಗಿದೆ. ಅವರು ಗುರುವಾರ ಎಂದಿನಂತೆ ವಾಕಿಂಗ್‌ ಮಾಡುವಾಗ ವೇಗವಾಗಿ ಬಂದ ಬೈಕ್ ಸವಾರನೋರ್ವ ಬಹುತೇಕ ಅವರಿಗೆ ಡಿಕ್ಕಿ ಹೊಡೆಯುವಷ್ಟು ಸಮೀಪದಲ್ಲಿ ಪಾಸಾಗಿದ್ದು, ಈ ವೇಳೆ ನಿತೀಶ್‌ ಕುಮಾರ್ ಫುಟ್‌ಪಾತ್‌ಗೆ ಹಾರಿ ಜೀವ ಉಳಿಸಿಕೊಂಡಿದ್ದಾರೆ. 

ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಭದ್ರತೆಯಲ್ಲಿ ಭಾರಿ ಲೋಪವಾಗಿದೆ. ಅವರು ಗುರುವಾರ ಎಂದಿನಂತೆ ವಾಕಿಂಗ್‌ ಮಾಡುವಾಗ ವೇಗವಾಗಿ ಬಂದ ಬೈಕ್ ಸವಾರನೋರ್ವ ಬಹುತೇಕ ಅವರಿಗೆ ಡಿಕ್ಕಿ ಹೊಡೆಯುವಷ್ಟು ಸಮೀಪದಲ್ಲಿ ಪಾಸಾಗಿದ್ದು, ಈ ವೇಳೆ ನಿತೀಶ್‌ ಕುಮಾರ್ ಫುಟ್‌ಪಾತ್‌ಗೆ ಹಾರಿ ಜೀವ ಉಳಿಸಿಕೊಂಡಿದ್ದಾರೆ. 

ನಿತೀಶ್‌ ಕುಮಾರ್‌ ಅವರು ಬೆಳಗ್ಗೆ ತಮ್ಮ ನಿವಾಸದಿಂದ ಸಕ್ರ್ಯುಲರ್‌ ರಸ್ತೆಯಲ್ಲಿ ವಾಕಿಂಗ್‌ ಹೊರಟಿದ್ದರು. ಈ ವೇಳೆ ಸಂಚಾರ ನಿರ್ಬಂಧದ ನಡುವೆಯೂ ವ್ಯಕ್ತಿಯೊಬ್ಬ ಬೈಕ್‌​ನಲ್ಲಿ ನಿತೀಶ್‌ ಪಕ್ಕದಲ್ಲೇ ವೇಗ​ದಿಂದ ಹಾದುಹೋಗಿದ್ದಾನೆ. ಹೀಗಾ​​ಗಿ ನಿತೀಶ್‌ ತಕ್ಷಣವೇ ರಸ್ತೆಯಿಂದ ಪಕ್ಕದ ಪಾದಾಚಾರಿ ಮಾರ್ಗಕ್ಕೆ ಜಿಗಿದು ಪಾರಾ​ಗಿ​ದ್ದಾ​ರೆ. ಬಳಿಕ ​ಬೈ​ಕ್‌ ಚಾಲಕನನ್ನು ಭದ್ರತಾ ಸಿಬ್ಬಂದಿಗಳು ಬಂಧಿಸಿದ್ದಾ​ರೆ. ಭದ್ರತಾ ಲೋಪದ ಬಗ್ಗೆ​ಯೂ ತನಿಖೆ ನಡೆಯುತ್ತಿದೆ. ಘಟನೆ ನಡೆದ ಪ್ರದೇಶದಲ್ಲಿ ರಾಬ್ರಿ ದೇವಿ ಸೇರಿದಂತೆ ಬಿಹಾರದ ಅನೇಕ ರಾಜಕೀಯ ನಾಯಕರು ಗಣ್ಯರು ವಾಸ ಮಾಡುತ್ತಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನ ದಾಟಲ್ಲ, ನಿತೀಶ್ ಕುಮಾರ್ ಭವಿಷ್ಯ!

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಪ್ಲಾನ್, ಕೇಜ್ರಿವಾಲ್ ಭೇಟಿಯಾದ ನಿತೀಶ್!

ಇತ್ತೀಚೆಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್ ನಂತರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭೇಟಿಯಾಗಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದರು. ದೆಹಲಿಯಲ್ಲಿ ನಡೆಯುತ್ತಿರುವ ಕೇಂದ್ರ ಹಾಗೂ ದೆಹಲಿ ಸರ್ಕಾರದ ತಿಕ್ಕಾಟದ ಕುರಿತು ಮಹತ್ವದ ಮಾತುಕತೆ ನಡೆಸಿದ ಅವವರು ಈ ಮೂಲಕ 2024ರ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳು ಮೈತ್ರಿಯಿಂದ ಹೋರಾಡಿ ಬಿಜೆಪಿ ದೂರವಿಡಲು ಪ್ಲಾನ್ ರೆಡಿ ಮಾಡಿದ್ದಾರೆ.

ಕಳ್ಳಬಟ್ಟಿ ಕುಡಿದು ಸತ್ತವರ ಕುಟುಂಬಕ್ಕೆ 4 ಲಕ್ಷ ಲಕ್ಷ ಪರಿಹಾರ ಘೋಷಿಸಿದ ಸಿಎಂ

ಎಲ್ಲಾ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿಯನ್ನು ದೂರವಿಡಬೇಕು. ಹಿಮಾಚಲ ಪ್ರದೇಶದ ಬಳಿಕ ಕರ್ನಾಟಕದಲ್ಲಿ ಬಿಜೆಪಿ ಸದ್ದಡಗಿದೆ.ಇನ್ನುಳಿದ ರಾಜ್ಯಗಳಲ್ಲಿ ನಮ್ಮ ಸರ್ಕಾರ ರಚನೆಯಾಗಬೇಕು. 2024ರ ವೇಳೆಗೆ ಕೇಂದ್ರಲ್ಲಿ ಬಿಜೆಪಿಯನ್ನು ಸೋಲಿಸಲು ಮೈತ್ರಿ ಅಗತ್ಯ ಅನ್ನೋ ಮಾತುಗಳನ್ನು ಉಭಯ ನಾಯಕರು ಆಡಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.