Asianet Suvarna News Asianet Suvarna News

ಎರಡನೇ ಅಲೆ ಇಳಿಮುಖ: ಕೊಂಚ ಎಚ್ಚರ ತಪ್ಪಿದ್ರೂ ಮತ್ತೆ ಅಪಾಯ!

* 2ನೇ ಅಲೆ ಮುಗಿ​ದಿ​ಲ್ಲ: ಕೇಂದ್ರ ಸರ್ಕಾ​ರ ಎಚ್ಚ​ರಿ​ಕೆ

* ಸಾಲು-ಸಾಲು ಹಬ್ಬಗಳ ಈ ಸಂದರ್ಭದಲ್ಲಿ ಎಚ್ಚರ ಅಗತ್ಯ

* ಕೊಂಚ ಎಚ್ಚರ ತಪ್ಪಿದ್ದರೂ ಮತ್ತೆ ಕೋವಿಡ್‌ ಅಬ್ಬರ ಖಚಿತ

* ದೇಶದ ಜನತೆಗೆ ಜಾಗ್ರತೆಯಾಗಿರಲು ಪೌಲ್‌ ಸೂಚ​ನೆ

Second Wave Is Subsidising But It Is Not Fair To Say Worst Is Over VK Paul Warns Ahead of Diwali pod
Author
Bangalore, First Published Oct 18, 2021, 11:59 AM IST
  • Facebook
  • Twitter
  • Whatsapp

ನವದೆಹಲಿ(ಅ.18): ಕಳೆದ ಕೆಲ ದಿನಗಳಿಂದ ದೈನಂದಿನ ಕೊರೋನಾ ಸೋಂಕಿತರ(Covid 19) ಸಂಖ್ಯೆ ಇಳಿಮುಖವಾಗಿದೆ ಎಂದು ಯಾರೂ ಸಹ ಮೈಮರೆಯಬಾರದು ಎಂದು ದೇಶದ ಜನತೆಗೆ ಕೇಂದ್ರ ಸರ್ಕಾರ(Central Govt) ಎಚ್ಚರಿಕೆ ನೀಡಿದೆ.

ಈ ಸಂಬಂಧ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋವಿಡ್‌ ಕಾರ್ಯಪಡೆ ಮುಖ್ಯಸ್ಥ ವಿ.ಕೆ. ಪೌಲ್‌(VK Paul) ಅವರು, ‘ದೇಶದಲ್ಲಿ ದೈನಂದಿನ ಕೋವಿಡ್‌ ಸಂಖ್ಯೆ ಕಮ್ಮಿಯಾಗಿದೆ. ಎರಡನೇ ಅಲೆ(Second Wave) ಇಳಿಮುಖವಾಗಿದೆ ಎಂಬ ಕಾರಣಕ್ಕೆ ಕೋವಿಡ್‌ ಅಲೆಯೇ ಮುಕ್ತಾಯವಾಗಿದೆ ಎಂದು ತಿಳಿಯುವುದು ತಪ್ಪಾದೀತು. ವಿಶ್ವದ ಹಲವು ದೇಶಗಳನ್ನು ಕೊರೋನಾ ವೈರಸ್‌ನ 2ಕ್ಕಿಂತ ಹೆಚ್ಚು ಅಲೆಗಳು ಬಾಧಿಸಿರುವುದನ್ನು ನಾವು ಕಂಡಿದ್ದೇವೆ. ದೇಶದಲ್ಲಿ ಸಾಲು-ಸಾಲು ಹಬ್ಬಗಳನ್ನು ಆಚರಿಸಲಾಗುತ್ತಿದೆ. ಇದು ನಿರ್ಣಾಯಕ ಸಂದರ್ಭವಾಗಿದ್ದು, ಕೋವಿಡ್‌(Covid 19) ಮತ್ತೆ ವ್ಯಾಪಕವಾಗಿ ಹಬ್ಬುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜನರು ಎಚ್ಚರಿಕೆಯಿಂದ ಇರಬೇಕು’ ಎಂದು ಹೇಳಿದರು.

ದೇಶದಲ್ಲಿ ಈಗ ಅಗತ್ಯವಿರುವಷ್ಟು ಲಸಿಕೆಯಿದ್ದು, ಲಸಿಕೆ ಕೊರತೆಯಂತೂ ಇಲ್ಲ. ಕೆಲ ಕಾರಣಗಳಿಗಾಗಿ ಲಸಿಕಾ ಕಾರ್ಯಕ್ರಮದಲ್ಲಿ ಹಿಂದೆ ಬಿದ್ದಿರುವ ರಾಜ್ಯಗಳು ಲಸಿಕೆ ಅಭಿಯಾನಕ್ಕೆ ಚುರುಕು ನೀಡಬೇಕು ಎಂದು ಸೂಚಿಸಿದೆ.

ಮಕ್ಕ​ಳಿಗೆ ಲಸಿ​ಕೆ:

ವಿಶ್ವದ ನಾನಾ ದೇಶಗಳಲ್ಲಿ ಹದಿಹರೆಯ ಮತ್ತು ಮಕ್ಕಳಿಗೂ ಲಸಿಕೆ ನೀಡಲಾಗುತ್ತಿದೆ. ಅದೇ ರೀತಿ ಭಾರತದಲ್ಲೂ ಈಗಾಗಲೇ ಅಭಿವೃದ್ಧಿಪಡಿಸಲಾದ ಝೈಡಸ್‌ ಕ್ಯಾಡಿಲಾದ ಝೈಕೋವ್‌ ಡಿ ಮತ್ತು ಭಾರತ್‌ ಬಯೋಟೆಕ್‌ನ ಕೋವ್ಯಾಕ್ಸಿನ್‌ ಲಸಿಕೆಗಳ ವೈಜ್ಞಾನಿಕ ವರದಿಯನ್ನು ಆಧರಿಸಿ ಈ ಲಸಿಕೆಗಳ ಬಳಕೆಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.

ಕೋವ್ಯಾಕ್ಸಿನ್‌ಗೆ ಅ.26ಕ್ಕೆ ಜಾಗತಿಕ ಮನ್ನಣೆ ಸಾಧ್ಯತೆ

ಭಾರತ್‌ ಬಯೋಟೆಕ್‌(Bharat Biotech) ಅಭಿವೃದ್ಧಿಪಡಿಸಿರುವ ಭಾರತದ ಸ್ವದೇಶಿ ಲಸಿಕೆ ಕೋವ್ಯಾಕ್ಸಿನ್‌ಗೆ ಅ.26ರಂದು ಜಾಗತಿಕ ಮನ್ನಣೆ ಲಭಿಸುವ ಸಾಧ್ಯತೆಯಿದೆ. ಅ.26ರಂದು ವಿಶ್ವ ಆರೋಗ್ಯ ಸಂಸ್ಥೆಯ(World Health Organisation) ತಾಂತ್ರಿಕ ಸಲಹಾ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಕೋವ್ಯಾಕ್ಸಿನ್‌ ಲಸಿಕೆಯ ತುರ್ತು ಬಳಕೆಗೆ ಅವಕಾಶ ನೀಡುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್‌ ಅವರು ತಿಳಿಸಿದರು.

ಈ ಬಗ್ಗೆ ಭಾನುವಾರ ಟ್ವೀಟ್‌ ಮಾಡಿರುವ ಸೌಮ್ಯಸ್ವಾಮಿನಾಥನ್‌, ‘ಕೋವ್ಯಾಕ್ಸಿನ್‌ ಲಸಿಕೆಯ ತುರ್ತು ಬಳಕೆಗೆ ಅವಕಾಶ ನೀಡುವ ಬಗ್ಗೆ ಭಾರತ್‌ ಬಯೋಟೆಕ್‌ ಸಂಸ್ಥೆಯ ಜತೆ ನಿಕಟವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ. ವ್ಯಾಪಕ ಲಸಿಕೆಗಳಿಗೆ ಮಾನ್ಯತೆ ನೀಡುವ ಮುಖಾಂತರ ಆ ಲಸಿಕೆಗಳನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದೇ ತಮ್ಮ ಗುರಿಯಾಗಿದೆ’ ಎಂದು ಹೇಳಿದ್ದಾರೆ.

Follow Us:
Download App:
  • android
  • ios