ನವದೆಹಲಿ(ಮೇ.06): ಭಾರತದಲ್ಲಿ ಕೊರೋನಾ ಅಟ್ಟಹಾಸ ಮಿತಿ ಮೀರಿದೆ. ಎರಡನೇ ಅಲೆಗೆ ಈವರೆಗೂ ದೇಶದಲ್ಲಿ ಒಟ್ಟು 126 ವೈದ್ಯರು ಸಾವನ್ನಪ್ಪಿದ್ದಾರೆ. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ನ ಅಧ್ಯಯನದಲ್ಲಿ ಈ ವಿಚಾರ ಬಯಲಾಗಿದೆ. ಆದರೆ ಕೊರೋನಾಗೆ ಬಲಿಯಾದ ಈ ವೈದ್ಯರು ಲಸಿಕೆ ಪಡೆದಿದ್ದರಾ, ಇಲ್ಲವಾ ಎಂಬ ಮಾಹಿತಿ ಲಭ್ಯವಾಗಿಲ್ಲ.

ಐಎಂಎ ಅನ್ವಯ ಈ ವರ್ಷ ಕೊರೋನಾಗೆ 126 ವೈದ್ಯರು ಬಲಿಯಾಗಿದ್ದಾರೆ. ಆದರೆ ಮೊದಲ ಅಲೆ 736 ಕೊರೋನಾ ವಾರಿಯರ್ಸ್‌ನ್ನು ಬಲಿ ಪಡೆದಿತ್ತು. ಈ ಸಂಬಬಂಧ ಮಾಹಿತಿ ನೀಡಿದ ಡಾ. ರವಿ ವಾಂಖೆಡ್ಕರ್ ಕೇಂದ್ರದ ಆರೋಗ್ಯ ಇಲಾಖೆ ಹಾಗೂ ರಾಜ್ಯಗಳು ಕೊರೋನಾ ಸೋಂಕು ತಗುಲಿ ಮೃತಪಟ್ಟ ವೈದ್ಯರ ಸಾವಿನ ಹಾಗೂ ಅವರು ಲಸಿಕೆ ಪಡೆದಿದ್ದರಾ ಎಂಬ ಮಾಹಿತಿ ಕಲೆ ಹಾಕಬೇಕು. ಆದರೆ ಸರ್ಕಾರ ಹೀಗೆ ಮಾಡಿಲ್ಲ ಎಂಬುವುದು ಬಹಳ ದುಃಖದ ವಿಚಾರ. ಹೀಗಾಗಿ ಈಎಂಎ ಈ ಕಾರ್ಯಕ್ಕೆ ಮುಂದಾಗಿದೆ ಎಂದಿದ್ದಾರೆ. 

"

ಜನವರಿ 16ರಿಂದ ದೇಶದಲ್ಲಿ ಲಸಿಕೆ ಅಭಿಯಾನ

ಕೇಂದ್ರ ದೆಶಾದ್ಯಂತ ಜನವರಿ 16 ರಿಂದ ಲಸಿಕೆ ಅಭಿಯಾನ ಆರಂಭಿಸಿತ್ತು. ಇದರಡಿ ಹೆಲ್ತ್ ವರ್ಕರ್ಸ್‌ ಹಾಗೂ ಫ್ರಂಟ್‌ಲೈನ್‌ ವರ್ಕರ್ಸ್‌ಗೆ ಲಸಿಕೆ ನೀಡಲಾಗಿತ್ತು. ಇದಾಧ ಬಳಿಕ ಜನ ಸಾಮಾಣ್ಯರಿಗೂ ಲಸಿಕೆ ನೀಡುವ ಕಾರ್ಯ ಆರಂಭವಾಗಿದ್ದು, ಈವರೆಗೂ ಒಟ್ಟು 16 ಕೋಟಿ ಜನರಿಗೆ ಲಸಿಕೆ ನಿಡಲಾಗಿದೆ. ಇದರಲ್ಲಿ ಶೇ. 94.7 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯ ಮೊದಲ ಡೋಸ್ ನೀಡಿದ್ದರೆ, 63.5 ಲಕ್ಷ ಆರೋಗ್ಯ ಸಿಬ್ಬಂದಿಗೆ ಎರಡನೇ ಡೋಸ್‌ ಕೂಡಾ ನೀಡಲಾಗಿದೆ.

ವೈದ್ಯರಿಗಾಗಿ ಫಂಡ್‌ ನಿರ್ಮಿಸಿದ ಐಎಂಎ

ಐಎಂಎ ಈಗಾಗಲೇ Covid Martyrs Fund ನಿರ್ಮಿಸಿದೆ. ಈ ಮೂಲಕ ಈವರೆಗೆ ಒಟ್ಟು 1.6 ಕೋಟಿ ರೂಪಾಯಿ ಮೃತ ವೈದ್ಯರ ಕುಟುಂಬಕ್ಕೆ ನೀಡಲಾಗಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona