ಸರ್ಕಾರದಿಂದ ಕೊಡುವ ಎಮ್ಮೆಗಾಗಿ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಳ್ಳಲು ಮುಂದಾಗಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ವಿವಾಹವಾಗಿದ್ದರೂ ವಿಚ್ಛೇದನ ಪಡೆಯದೆ ಮರುಮದುವೆಗೆ ಸಿದ್ಧಳಾಗಿದ್ದಳು. ಸ್ವತಃ ಆಕೆಯ ತಂದೆ ತಾಯಿಯೇ ಮಗಳ ಮೋಸವನ್ನು ಬಯಲಿಗೆಳೆದಿದ್ದಾರೆ.
ಕೇವಲ ಒಂದು ಎಮ್ಮೆಯನ್ನು ಖರೀದಿ ಮಾಡುವ ಸಲುವಾಗಿ ಅಂದರೆ ಸರ್ಕಾರದಿಂದ ಕೊಡುವ ಎಮ್ಮೆಗಾಗಿ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಳ್ಳಲು ಮುಂದಾಗಿದ್ದ ಮಹಿಳೆಯನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಹಿಂದೆ ವಿವಾಹ ಸಂಬಂಧವನ್ನು ಮುರಿಯದೆ ಯುವತಿ ಎರಡನೇ ಮದುವೆಗೆ ಸಿದ್ಧಳಾಗಿದ್ದು, ಸ್ವತಃ ಈಕೆಯ ತಂದೆ ತಾಯಿಯೇ ಮಗಳ ಮೋಸವನ್ನು ಬಯಲಿಗೆ ಎಳೆದಿದ್ದಾರೆ.
ಇನ್ನು ಪೊಲೀಸರಿ ಬಂಧಿಸಿ ಕರೆದೊಯ್ದ ಮಹಿಳೆಯನ್ನು ಅಸ್ಮಾ ಎಂದು ಗುರುತಿಸಲಾಗಿದೆ. ಆದರೆ, ಈ ಆಸ್ಮಾ ಎರಡನೇ ಮದುವೆಗೆ ಏಕೆ ಸಿದ್ಧಳಾದಳು ಎಂಬ ಉತ್ತರ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಅಸ್ಮಾ ತನಗೆ ಸ್ವಂತಕ್ಕೆ ಸಾಕಾಣಿಕೆಗೆ ಎಮ್ಮೆಯನ್ನು ಖರೀದಿಸಲು 2ನೇ ಮದುವೆಯಾಗಲು ನಿರ್ಧರಿಸಿದ್ದಳು ಎಂಬುದು ತಿಳಿದುಬಂದಿದೆ. ರಾಜ್ಯ ಸರ್ಕಾರದ ಯೋಜನೆಯಡಿ ವಿವಾಹವಾಗುವ ಮಹಿಳೆಯರಿಗೆ 35,000 ರೂಪಾಯಿ ಮತ್ತು ಇತರ ಸೌಲಭ್ಯಗಳು ಮತ್ತು ಸಹಾಯವನ್ನು ಘೋಷಿಸಲಾಗಿತ್ತು. ಹೀಗಾಗಿ, ಮುಖ್ಯಮಂತ್ರಿಗಳ ಸಮೂಹ ವಿವಾಹ ಯೋಜನೆಯ ಪ್ರಕಾರ ಸಾಮೂಹಿಕ ಮದುವೆಯನ್ನು ಆಯೋಜನೆ ಮಾಡಲಾಗಿತ್ತು.
ಸರ್ಕಾರದ ವತಿಯಿಂದ ದೊಡ್ಡ ಕಾಲೇಜು ಆವರಣದಲ್ಲಿ ಆಯೋಜನೆ ಮಾಡಲಾಗಿದ್ದ ಸಾಮೂಹಿಕ ವಿವಾಹದಲ್ಲಿ 300ಕ್ಕೂ ಹೆಚ್ಚು ಮದುವೆಗಳು ಒಟ್ಟಿಗೆ ನಡೆಯುತ್ತಿದ್ದವು. ಇದೇ ಸಾಮೂಹಿಕ ವಿವಾಹದ ಸ್ಥಳದಲ್ಲಿ ಅಸ್ಮಾ ಕೂಡ ಸಿಕ್ಕಿಬಿದ್ದಿದ್ದಾಳೆ. 2ನೇ ಮದುವೆ ಮಾಡಿಕೊಳ್ಳಲು ಮುಂದಾಗಿದ್ದ ಅಸ್ಮಾ ಕಳೆದ 3 ವರ್ಷಗಳ ಹಿಂದೆ ನೂರ್ ಎನ್ನುವ ವ್ಯಕ್ತಿಯನ್ನು ವಿವಾಹವಾಗಿದ್ದಳು. ಇಬ್ಬರೂ ಬೇರೆಯಾಗಲು ನಿರ್ಧರಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೂ ಪ್ರಕರಣ ನಡೆಯುತ್ತಿದೆ. ಹೀಗಾಗಿ, ಇಬ್ಬರಿಗೂ ವಿವಾಹ ವಿಚ್ಛೇದನ ಸಿಕ್ಕಿಲ್ಲ.
ಇದನ್ನೂ ಓದಿ: PM Kisan: 19ನೇ ಕಂತಿನ ಹಣ ಬರದಿದ್ದರೆ ರೈತರು ಏನು ಮಾಡಬೇಕು? ತಕ್ಷಣ ಈ ಕೆಲಸ ಮಾಡಿ
ಆದರೆ, ತನ್ನ ಸೊಸೆ ಆಸ್ಮಾ, ಮಗನಿಂದ ಡಿವೋರ್ಸ್ ಪಡೆಯುವುದಕ್ಕೂ ಮುನ್ನವೇ ಬೇರೆಂದು ಮದುವೆ ಆಗುತ್ತಿರುವ ವಿಚಾರವನ್ನು ತಿಳಿದು ಸಾಮೂಹಿಕ ವಿವಾಹ ನಡೆಯುತ್ತಿದ್ದ ಸ್ಥಳಕ್ಕೆ ಬಂದಿದ್ದಾರೆ. ಆಗ ವಿವಾಹದ ಸ್ಥಳದಲ್ಲಿ ನೀನೇಕೆ ನನ್ನ ಮಗನನ್ನು ಬಿಟ್ಟು 2ನೇ ಮದುವೆ ಮಾಡಿಕೊಳ್ಳುತ್ತಿದ್ದೀಯಾ? ಎಂದು ಮದುವೆ ಮಂಟಪದಲ್ಲಿ ಪ್ರಶ್ನೆ ಮಾಡಿದ್ದಕ್ಕೆ ಈ ವಿಚಾರ ಬೆಳಕಿಗೆ ಬಂದಿದೆ. ಅದೇ ಸಮಯದಲ್ಲಿ ಅಸ್ಮಾ ತನ್ನ ಸೋದರಸಂಬಂಧಿ ಜಬ್ಬರ್ ಮೊಹಮ್ಮದ್‌ನನ್ನು ಮದುವೆಯಾಗಲು ಸಿದ್ಧಳಾಗಿದ್ದಳು. ಮದುವೆಯ ನಂತರ ಸಿಗುವ ಉಚಿತ ಮತ್ತು ಹಣವನ್ನು ಹಂಚಿಕೊಳ್ಳಲು ಇಬ್ಬರೂ ಯೋಜಿಸಿದ್ದರು.
ಸರ್ಕಾರಿ ಯೋಜನೆ ಅಡಿಯಲ್ಲಿ ಸಾಮೂಹಿಕ ವಿವಾಹ ಮಾಡಿಕೊಂಡವರಿಗೆ ಡಿನ್ನರ್ ಸೆಟ್, 2 ಜೊತೆ ಡ್ರೆಸ್, ವಾಲ್ ಕ್ಲಾಕ್, ವ್ಯಾನಿಟಿ ಕಿಟ್, ದುಪ್ಪಟ್ಟಾ, ಬೆಳ್ಳಿ ಆಭರಣಗಳು, ಲಂಚ್ ಬಾಕ್ಸ್ ಉಚಿತವಾಗಿ ಸಿಗಲಿವೆ. ಅದೇ ಸಮಯದಲ್ಲಿ ಮದುವೆಯ ಉಡುಗೊರೆಯಾಗಿ ಬರುವ ಹಣದಿಂದ ಎಮ್ಮೆಯನ್ನು ಖರೀದಿಸಲು ಇಬ್ಬರೂ ಯೋಜಿಸಿದ್ದರು. ಮುಖ್ಯ ಅಭಿವೃದ್ಧಿ ಅಧಿಕಾರಿ ಅಶ್ವಿನಿ ಕುಮಾರ್ ಅವರು ಮಾಜಿ ಪತಿಯ ತಂದೆ ಮದುವೆ ಪ್ರಮಾಣಪತ್ರವನ್ನು ಹಾಜರುಪಡಿಸಿದ ನಂತರ ಪೊಲೀಸರಿಗೆ ತಿಳಿಸಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಮದುವೆಯನ್ನು ನಿಲ್ಲಿಸಿದ್ದಾರೆ.
ಇದನ್ನೂ ಓದಿ: ಇವರದ್ದು 84 ವರ್ಷದ ದಾಂಪತ್ಯ, 100ಕ್ಕೂ ಅಧಿಕ ಮೊಮ್ಮಕ್ಕಳು!
