ಈಗಾಗಲೇ ಕೋವಿಡ್‌ ಚುಚ್ಚುಮದ್ದಿನ ಲಸಿಕೆಗೆ ಅಧಿಕೃತ ಅನುಮೋದನೆ ಪಡೆದಿರುವ ಭಾರತ್‌ ಬಯೋಟೆಕ್| ಮತ್ತೊಂದು ಮಹತ್ವದ ಪ್ರಗತಿ 

ನವದೆಹಲಿ(ಜ.20): ಈಗಾಗಲೇ ಕೋವಿಡ್‌ ಚುಚ್ಚುಮದ್ದಿನ ಲಸಿಕೆಗೆ ಅಧಿಕೃತ ಅನುಮೋದನೆ ಪಡೆದಿರುವ ಭಾರತ್‌ ಬಯೋಟೆಕ್‌, ಈಗ ಮತ್ತೊಂದು ಮಹತ್ವದ ಪ್ರಗತಿ ಕಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಂಪನಿಯ ‘ಕೋವ್ಯಾಕ್ಸಿನ್‌’ ನೇಸಲ್‌ ಲಸಿಕೆಯ ಪ್ರಯೋಗಕ್ಕೆ ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ ಮಂಗಳವಾರ ಅನುಮೋದನೆ ನೀಡಿದೆ. ಮೂಗಿನಲ್ಲಿ 2 ಹನಿ ಹಾಕುವ ಸಿಂಗಲ್‌ ಡೋಸ್‌ ಲಸಿಕೆ ಇದಾಗಿದೆ. ಇದರ 1 ಹಾಗೂ 2ನೇ ಹಂತದ ಪ್ರಯೋಗ ಆರಂಭಕ್ಕೆ ಹಸಿರು ನಿಶಾನೆ ದೊರಕಿದೆ. ಶೀಘ್ರದಲ್ಲೇ ಪ್ರಯೋಗ ಆರಂಭವಾಗುವ ನಿರೀಕ್ಷೆಯಿದೆ.

‘ಚುಚ್ಚುಮದ್ದಿನ ಲಸಿಕೆಗೆ ಸಿರಿಂಜ್‌, ಸೂಜಿ ಬೇಕು. ಹೀಗಾಗಿ ಇದರ ವೆಚ್ಚ ಹೆಚ್ಚು. ಇವನ್ನು ಎಸೆದಾಗ ಮಾಲಿನ್ಯವೂ ಆಗುತ್ತದೆ. ಇದು 2 ಡೋಸ್‌ ಲಸಿಕೆ. ಆದರೆ ಮೂಗಿನಲ್ಲಿ ಪ್ರಯೋಗಿಸುವ ನೇಸಲ್‌ ಲಸಿಕೆಯಿಂದ ಮಾಲಿನ್ಯ ಇಲ್ಲ. ವೆಚ್ಚವೂ ಕಮ್ಮಿ. ಅಲ್ಲದೆ, ಒಂದು ಬಾರಿ ಇದನ್ನು ನೀಡಿದರೆ ಸಾಕು’ ಎಂದು ಇತ್ತೀಚೆಗೆ ಭಾರತ್‌ ಬಯೋಟೆಕ್‌ ಮುಖ್ಯಸ್ಥ ಡಾ| ಕೃಷ್ಣ ಎಲ್ಲಾ ಹೇಳಿದ್ದರು.