ಭಾರತದಲ್ಲಿ ನಿಷೇಧಿತ Garmin inReach ಜಿಪಿಎಸ್‌ ಬಳಸಿದ ಸ್ಕಾಟ್ಲೆಂಡ್‌ ಹೈಕರ್‌ ಬಂಧನ

ದೆಹಲಿ ವಿಮಾನ ನಿಲ್ದಾಣದಲ್ಲಿ ನಿಷೇಧಿತ ಗಾರ್ಮಿನ್ ಇನ್‌ರೀಚ್‌ ಜಿಪಿಎಸ್‌ ಡಿವೈಸ್‌ ಹೊಂದಿದ್ದ ಬ್ರಿಟನ್‌ನ ಹೈಕರ್‌ನನ್ನು ಬಂಧಿಸಲಾಗಿದೆ. ಉತ್ತರಾಖಂಡದ ರಿಷಿಕೇಶಕ್ಕೆ ಹೋಗುವಾಗ ಈ ಘಟನೆ ನಡೆದಿದ್ದು, ಇದೇ ರೀತಿಯ ಡಿವೈಸ್‌ ಹೊಂದಿದ್ದಕ್ಕೆ ಕೆನಡಾ ಮೂಲದ ರನ್ನರ್‌ ಕೂಡ ಬಂಧನಕ್ಕೊಳಗಾಗಿದ್ದರು.

Scottish Hiker Detained Delhi Airport For Carrying Garmin inReach GPS Device san

ನವದೆಹಲಿ (ಜ.3): ಭಾರತದಲ್ಲಿ ನಿಷೇಧವಾಗಿರುವ ಗಾರ್ಮಿನ್ ಇನ್ ರೀಚ್ ಜಿಪಿಎಸ್  ಡಿವೈಸ್‌ಅನ್ನು ಹೊಂದಿದ್ದ ಕಾರಣಕ್ಕಾಗಿ ಯುನೈಟೆಡ್‌ ಕಿಂಗ್‌ಡಮ್‌ನ ಸ್ಲಾಟ್ಲೆಂಡ್‌ ಮೂಲದ ಹೈಕರ್‌ಅನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಇನ್ಸ್‌ಟಾಗ್ರಾಮ್‌ನಲ್ಲಿ ಹೈಕರ್‌ ಹೀದರ್‌ ಎನ್ನುವ ಹೆಸರನ್ನು ಹೊಂದಿರುವ ಹೀದರ್‌, ಉತ್ತರಾಖಂಡದ ರಿಷಿಕೇಷಕ್ಕೆ ಹೋಗುವ ಮಾರ್ಗದಲ್ಲಿ ತಮ್ಮನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಇನ್ಸ್‌ಟಾಗ್ರಾಮ್‌ನಲ್ಲಿ ವಿವರ ನೀಡಿರುವ ಹೀದರ್‌, ನನಗೆ ಇತರ ಟ್ರಾವೆಲರ್‌ಗಳು ಈ ಬಗ್ಗೆ ವಾರ್ನ್‌ ಕೂಡ ಮಾಡಿದ್ದರು. ಭಾರತಕ್ಕೆ ಪ್ರಯಾಣ ಮಾಡುವಾಗ Garmin inReach  ಅಥವಾ ಇನ್ಯಾವುದೇ ಸ್ಯಾಟಲೈಟ್‌ ಕಮ್ಯುನಿಕೇಟರ್‌ಅನ್ನು ತರದೇ ಇರುವಂಥೆ ಎಚ್ಚರಿಕೆ ನೀಡಿದ್ದರು. ಅವು ಭಾರತದಲ್ಲಿ ನಿಷೇಧ ಎಂದು ಮಾಹಿತಿ ನೀಡಿದ್ದರು. ಈ ಬಗ್ಗೆ ಏರ್‌ಪೋರ್ಟ್‌ನಲ್ಲಿ ವಶಕ್ಕೆ ಪಡೆದ ಬಳಿಕ ಆಕೆ ಮಾತನಾಡಿದ್ದಾರೆ.

ಇಂದು ಬೆಳಗ್ಗೆ 110.30ರ ಸುಮಾರಿಗೆ ನಾನು ದೆಹಲಿ ಏರ್‌ಪೋರ್ಟ್‌ನ ಸೆಕ್ಯುರಿಟಿಯಿಂದ ಪಾಸ್‌ ಆಗುತ್ತಿದೆ. ರಿಷಿಕೇಷನಲ್ಲಿ ಫ್ಲೈಟ್‌ ಹಿಡಿಯುವುದು ನನ್ನ ಗುರಿಯಾಗಿತ್ತು.ಈ ಹಂತದಲ್ಲಿ ಸೆಕ್ಯುರಿಟಿ ಟ್ರೇಯಲ್ಲಿ ನನ್ನ Garmin Inreach ಡಿವೈಸ್‌ಅನ್ನು ಇರಿಸಿದ್ದೆ. ಇದು ಸ್ಕ್ಯಾನರ್‌ ಮೂಲಕ ಹಾದಿ ಹೋದಾಗ, ಸೆಕ್ಯುರಿಟಿ ಸಿಬ್ಬಂದಿ ಕೆಲ ಸಮಯ ಕಾಯುವಂತೆ ನನಗೆ ತಿಳಿಸಿದ್ದರು ಎಂದು ಹೀದರ್‌ ಬರೆದುಕೊಂಡಿದ್ದಾರೆ.

ಈ ಡಿವೈಸ್‌ಅನ್ನು ಭಾರತದಲ್ಲಿ ಇರಿಸಿಕೊಳ್ಳುವುದು ಕಾನೂನುಬಾಹಿರ ಎಂದು ತಿಳಿಸಿದ ಬಳಿಕ, ನಾನು ನನ್ನ ರಾಯಭಾರ ಕಚೇರಿಗೆ ಕರೆ ಮಾಡಿ ಮಾಹಿತಿ ತಿಳಿಸಿದೆ. ಆದರೆ, ಕಾನೂನು ಕ್ರಮದಲ್ಲಿ ಮಧ್ಯಸ್ಥಿಕೆ ವಹಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. ಬಳಿಕ ನನ್ನನ್ನು ಪೊಲೀಸ್‌ ಸ್ಟೇಷನ್‌ಗೆ ಕರೆದೊಯ್ಡು ವಿಚಾರಣೆ ನಡೆಸಲಾಯಿತು. ಅತ್ಯಂತ ಸ್ನೇಹಪರವಾಗಿ ಅವರು ನನ್ನೊಂದಿಗೆ ನಡೆದುಕೊಂಡು, ಕೆಲವು ರಾಶಿ ದಾಖಲೆಗಳಿಗೆ ಸಹಿ ಹಾಕಿಸಿಕೊಂಡರು. ನಾನು ಎಲ್ಲೂ ಅವರ ಪ್ರಶ್ನೆಗಳಿಗೆ ಉತ್ತರ ನೀಡದೇ ಇರುವ ಪ್ರಯತ್ನ ಮಾಡಲಿಲ್ಲ.ಪ್ರಾಮಾಣಿಕವಾಗಿ ಇದ್ದೆ' ಎಂದು ತಿಳಿಸಿದ್ದಾರೆ.

ನಂತರ ನನ್ನನ್ನು ಬಿಡುಗಡೆ ಮಾಡಲಾಯಿತಾದರೂ, ಕೋರ್ಚ್‌ ವಿಚಾರಣೆಗೆ ವಾಪಾಸ್‌ ಬರಬೇಕು ಎಂದು ತಿಳಿಸಲಾಯಿತು. ಈ ಕಾನೂನಿನ ಕಾರಣದಿಂದಾಗಿ ಕಷ್ಟಪಟ್ಟಿದ್ದು ನಾನೊಬ್ಬಳೇ ಇಲ್ಲ. ಹಾಗಾಗಿ ಈ ಬಗ್ಗೆ ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಇದರ ಈ ವಿಡಿಯೋ ಮಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಇದೇ ರೀತಿಯ ಸಾಧನವನ್ನು ಹೊಂದಿದ್ದ ಕಾರಣಕ್ಕಾಗಿ ಕಳೆದ ಡಿಸೆಂಬರ್‌ನಲ್ಲಿ ಕೆನಡಾ ಮೂಲದ ರನ್ನರ್‌ಅನ್ನು ಬಂಧಿಸಲಾಗಿತ್ತು ಎಂದೂ ಅವರು ತಿಳಿಸಿದ್ದಾರೆ.

ಡಿಸೆಂಬರ್ ಆರಂಭದಲ್ಲಿ, ಟೀನಾ ಲೂಯಿಸ್ ಎಂಬ ಕೆನಡಾದ ರನ್ನರ್‌ಅನ್ನು ಕೊಚ್ಚಿಗೆ ಹೋಗುವ ಮಾರ್ಗದಲ್ಲಿ ಗೋವಾ ವಿಮಾನ ನಿಲ್ದಾಣದಲ್ಲಿ ಇದೇ ರೀತಿಯ ಸಂವಹನ ಸಾಧನವನ್ನು ಹೊಂದಿದ್ದ ಕಾರಣಕ್ಕೆ ಬಂಧಿಸಲಾಗಿತ್ತು.

ಜಿಪಿಎಸ್‌ ತೋರಿದ ದಾರೀಲಿ ಮದುವೆ ಮನೆಗೆ ಹೋಗ್ತಿದ್ದ ಕಾರು ಸೀದಾ ನದಿಗೆ ಬಿದ್ದು ಮೂವರ ಸಾವು!

ಯಾಕೆ ನಿಷೇಧ: Garmin inReach  ಎನ್ನುವುದು ಸ್ವಿಸ್‌ ಮೂಲದ ಸ್ಯಾಟಲೈಟ್‌ ಕಮ್ಯುನಿಕೇಷನ್‌ ಡಿವೈಸ್‌. ಇದನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಅನಧಿಕೃತವಾಗಿ ಇದನ್ನು ಬಳಕೆ ಮಾಡುವಂತಿಲ್ಲ. ಭದ್ರತಾ ಆತಂಕ ಹಾಗೂ ಕಾನೂನು ಬಾಹಿರವಾಗಿ ವಿಚಕ್ಷಣೆ ಮಾಡುವ ಕಾರಣಕ್ಕಾಗಿ ಸ್ಯಾಟಲೈಟ್‌ ಫೋನ್‌ಗಳು ಹಾಗೂ ಡಿವೈಸ್‌ಗಳ ಬಳಕೆಗೆ ಭಾರತದಲ್ಲಿ ನಿಷೇಧವಿದೆ.

ಗೂಗಲ್ ಮ್ಯಾಪ್ ನಂಬಿ ಕಾಲುವೆ ಬಿದ್ದ ಕಾರು, ಪ್ರಯಾಣಿಕರ ಜೀವ ಉಳಿಸಿದ ಟಾಟಾ ಟಿಗೋರ್!

 

Latest Videos
Follow Us:
Download App:
  • android
  • ios