ಶ್ರೀನಗರ (ನ. 20): ವಿಶೇಷಾಧಿಕಾರ ರದ್ದಾದ ಬಳಿಕ ಆ.5ರಿಂದ ಬಂದ್‌ ಆಗಿದ್ದ ಜಮ್ಮು ಕಾಶ್ಮೀರ ಬಹುತೇಕ ಸಹಜ ಸ್ಥಿತಿಗೆ ಮರಳಿದ್ದು, ಶ್ರೀನಗರದಲ್ಲಿ ಮಂಗಳವಾರ ಹಲವು ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸಿವೆ. ಸಾರ್ವಜನಿಕ ಸಾರಿಗೆ ಸಂಚಾರ ಕೂಡ ಸಹಜ ಸ್ಥಿತಿಗೆ ಮರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಇಂದಿನಿಂದ ಹೊಸ ಅಧ್ಯಾಯ! ಏನೇನು ಬದಲಾಗಲಿದೆ?

ಮೂರು ತಿಂಗಳಿನಿಂದ ಬಂದ್‌ ಆಗಿದ್ದ ಶಾಲೆಗಳು ಪುನಾರಂಭಗೊಂಡಿದ್ದು, ಖಾಸಗಿ ಶಾಲೆಗಳು ಬೆಳಿಗ್ಗೆ 10 ರಿಂದ ಮದ್ಯಾಹ್ನ 1ರ ವರಗೆ ಕಾರ್ಯ ನಿರ್ವಹಿಸುತ್ತಿವೆ. ಸಮವಸ್ತ್ರ ಧರಿಸದೇ ಶಾಲೆಗೆ ಬರಲು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಸಾರಿಗೆ ಸಂಚಾರ ಕೂಡ ಆರಂಭಗೊಂಡಿದ್ದು, ಅಂತರ್‌ ಜಿಲ್ಲಾ ಹಾಗೂ ಜಿಲ್ಲಾ ಸಾರಿಗೆಯಲ್ಲಿ ಗಮನಾರ್ಹ ಸುಧಾರಣೆ ಉಂಟಾಗಿದೆ.

370 ರದ್ದತಿಯ ಶ್ರೇಯ ಸರ್ದಾರ್‌ಗೆ ಸಮರ್ಪಣೆ: ಪ್ರಧಾನಿ ಮೋದಿ!

ಖಾಸಗಿ ವಾಹನಗಳ ಸಂಚಾರಕ್ಕೆ ಯಾವುದೇ ಅಡೆತಡೆ ಉಂಟಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ಶನಿವಾರದಿಂದ ಶ್ರೀನಗರ -ಬನಿಹಾರ್‌ ರೈಲು ಸೇವೆ ಕೂಡ ಪುನಾರಂಭಿಸಲಾಗಿದೆ. ಈ ಮಧ್ಯೆ ಮಾರುಕಟ್ಟೆಗಳು, ಅಂಗಡಿ ಮುಂಗಟ್ಟುಗಳು ಕೂಡ ಬೆಳಿಗ್ಗಿನಿಂದ ಮಧ್ಯಾಹ್ನ ವರೆಗೆ ಕಾರ್ಯ ನಿರ್ವಹಿಸುತ್ತಿದೆ. ಇಂಟರ್ನೆಟ್‌ ಸೇವೆಗಳ ಮೇಲಿನ ನಿರ್ಬಂದ ಯತಾಸ್ಥಿತಿ ಇದೆ.