370 ರದ್ದತಿಯ ಶ್ರೇಯ ಸರ್ದಾರ್‌ ಪಟೇಲ್‌ಗೆ ಸಮರ್ಪಿಸಿದ ಪ್ರಧಾನಿ| ಸರ್ದಾರ್ ಪಟೇಲ್ ಅವರ 144ನೇ ಜನ್ಮ ಜಯಂತಿ|  ರಾಷ್ಟ್ರೀಯ ಏಕತಾ ದಿವಸ್  ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ| ಸರ್ದಾರ್ ವಲ್ಲಭಬಾಯಿ ಪಟೇಲ್ ಏಕತಾ ಪ್ರತಿಮೆಗೆ ಮೋದಿ ಪುಷ್ಪ ನಮನ| ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ಗುರುತು ಎಂದ ಪ್ರಧಾನಿ| ಪಟೇಲ್ ಅವರ ದೂರದೃಷ್ಟಿಯ ಪರಿಣಾಮ ದೇಶ ಒಗ್ಗೂಡಿದೆ ಎಂದ ಮೋದಿ| ದೇಶ ಹಿಂದೆಂದಿಗಿಂತಲೂ ಹೆಚ್ಚು ಬಲಿಷ್ಠವಾಗಿದೆ  ಎಂದ ಪ್ರಧಾನಿ| ದೇಶದ  ಏಕತೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರತಿಜ್ಞೆ ಮಾಡಿದ ಮೋದಿ| 

ಅಹಮದಾಬಾದ್(ಅ.31): ರಾಷ್ಟ್ರೀಯ ಏಕತಾ ದಿವಸ್ ಅಂಗವಾಗಿ ಪ್ರಧಾನಿ ಮೋದಿ ಗುಜರಾತ್‌ನ ನರ್ಮದಾ ಜಿಲ್ಲೆಯ ಕೇವಾಡಿಯಾದಲ್ಲಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಏಕತಾ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಪಟೇಲ್ ಅವರ 144ನೇ ಜನ್ಮ ಜಯಂತಿಯ ಅಂಗವಾಗಿ ಜನತೆಗೆ ಏಕತೆಯ ಪ್ರಮಾಣವಚನವನ್ನು ಮೋದಿ ಬೋಧಿಸಿದರು.

Scroll to load tweet…

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ಗುರುತಾಗಿದ್ದು ದೇಶದ ಈ ಏಕತೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರತಿಜ್ಞೆ ಮಾಡುವುದಾಗಿ ಘೋಷಿಸಿದರು.

ವಿವಿಧತೆಯಲ್ಲಿ ಏಕತೆಯೇ ಜೀವಾಳ: ಏಕತಾ ದಿವಸ್‌ನಲ್ಲಿ ಮೋದಿ!

Scroll to load tweet…


ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ದೂರದೃಷ್ಟಿಯ ಪರಿಣಾಮ ದೇಶ ಒಗ್ಗೂಡಿದ್ದು, 370ನೇ ವಿಧಿಯ ರದ್ದತಿಯ ಶ್ರೇಯವನ್ನು ಸರ್ದಾರ್ ಪಟೇಲ್ ಅವರಿಗೆ ಸಮರ್ಪಿಸುವುದಾಗಿ ಪ್ರಧಾನಿ ಮೋದಿ ಹೇಳಿದರು. 

Scroll to load tweet…

ದೇಶದ ಆಂತರಿಕ ಭದ್ರತೆಗೆ ನನ್ನಿಂದ ಸಾಧ್ಯವಾದ ಕೊಡುಗೆ ನೀಡುವುದಾಗಿ ಭರವಸೆ ನೀಡಿದ ಪ್ರಧಾನಿ, ದೇಶ ಹಿಂದೆಂದಿಗಿಂತಲೂ ಹೆಚ್ಚು ಬಲಿಷ್ಠವಾಗಿದೆ ಎಂದು ನುಡಿದರು. ಬಳಿಕ ಪ್ರಧಾಣಿ ಮೋದಿ ಏಕತಾ ಪ್ರತಿಮೆ ಬಳಿ ಇರುವ ಸರ್ದಾರ್ ಮ್ಯೂಸಿಯಂಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.

Scroll to load tweet…