ಮ.ಪ್ರದಲ್ಲಿ 2021 ಮಾ.31ರ ವರೆಗೆ ಶಾಲೆ ಇಲ್ಲ| 9 ರಿಂದ 12ನೇ ತರಗತಿಗಳು ಸದ್ಯದಲ್ಲೇ ಆರಂಭ| ಬೋರ್ಡ್‌ ಪರೀಕ್ಷೆ ನಡೆಸಲು ನಿರ್ಧಾರ| ವಾರಕ್ಕೆ ಒಂದು ಅಥವಾ ಎರಡು ದಿನ ಶಾಲೆ

ಭೋಪಾಲ್‌(ಡಿ.06): ಮಧ್ಯಪ್ರದೇಶದಲ್ಲಿ 2021ರ ಮಾಚ್‌ರ್‍ 31ರ ವರೆಗೆ 1ರಿಂದ 8 ತರಗತಿ ವರೆಗಿನ ತರಗತಿಗಳನ್ನು ತೆರೆಯುವುದಿಲ್ಲ ಎಂದು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯ ಅವಲೋಕನ ಸಭೆಯಲ್ಲಿ ಮಾತನಾಡಿದ ಅವರು, 1-8ರ ವರೆಗಿನ ತರಗತಿಗಳನ್ನು 2021ರ ಮಾ.31ರ ವರೆಗೆ ತೆರೆಯುವುದಿಲ್ಲ. ಅಲ್ಲದೇ ಅವರಿಗೇ ಯಾವುದೇ ರೀತಿಯ ಪರೀಕ್ಷೆಯೂ ನಡೆಸಲಾಗುವುದಿಲ್ಲ. ಅವರಿಗೆ ನೀಡಲಾದ ಪ್ರಾಜೆಕ್ಟ್ ವರ್ಕ್ ಮೂಲಕ ಅವರಿಗೆ ಅಂಕ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ವೇಳೆ 10-12ರ ವರೆಗಿನ ತರಗತಿಗಳು ಸದ್ಯದಲ್ಲೇ ಪುನಾರಂಭವಾಗಲಿದೆ. ಅವರಿಗೆ ಬೋರ್ಡ್‌ ಪರೀಕ್ಷೆ ಕೂಡ ನಡೆಯಲಿದೆ. ವಾರಕ್ಕೆ ಒಂದು ಅಥವಾ ಎರಡು ದಿನ ತರಗತಿಗಳನ್ನು ನಡೆಸಲಾಗುವುದು. ಶಾಲೆಯಲ್ಲಿ ದೈಹಿಕ ಅಂತರ ಹಾಗೂ ಇನ್ನಿತರ ನಿಯಮಾವಳಿಗಳನ್ನು ಪಾಲನೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಸೆ.21 ರಿಂದ 9-12ನೇ ತರಗತಿಗಳು ಭಾಗಶಃ ಆರಂಭವಾಗಿದ್ದು, ಕಠಿಣ ಕೋವಿಡ್‌ ನಿಯಮಾವಳಿಗಳನ್ನು ಪಾಲನೆ ಮಾಡಲಾಗುತ್ತಿದೆ. ಸಮಯ ಕಳೆದಂತೆ ಹೆಚ್ಚಿನ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಶಿಕ್ಷಣ ಸಚಿವ ಇಂದರ್‌ ಸಿಂಗ್‌ ಪಾರ್ಮರ್‌ ಹೇಳಿದ್ದಾರೆ.