Asianet Suvarna News Asianet Suvarna News

ಲೋಕಲ್ ರಾಂಚೋ ಇನ್ನಿಲ್ಲ.. ಪ್ರಾಣ ಬಲಿಪಡೆದ  ಸಿಂಗಲ್ ಸೀಟರ್ ಹೆಲಿಕಾಪ್ಟರ್ ತಯಾರಿ!

* ಶಾಲೆ ಅರ್ಧಕ್ಕೆ ಬಿಟ್ಟ ಹುಡುಗನಿಗೆ ಹೆಲಿಕಾಪ್ಟರ್ ತಯಾರಿಕೆ ಕನಸು
* ಮಾರುತಿ 800  ಎಂಜಿನ್ ಬಳಸಿ ಮಾದರಿ ಸಿದ್ಧಮಾಡಿದ್ದ
* ಟೆಸ್ಟಿಂಗ್ ಮಾಡುವಾಗ  ದಾರುಣ ಸಾವು
* ತಾನೇ ಸಿದ್ಧ ಮಾಡಿದ್ದ ಬ್ಲೇಡ್ ತನ್ನ ಕುತ್ತಿಗೆಯನ್ನೇ ಕತ್ತರಿಸಿತು

School dropout builds helicopter dies as blades slash his throat Maharashtra mah
Author
Bengaluru, First Published Aug 12, 2021, 4:29 PM IST

ಯಾವತ್ಮಲ್(ಮುಂಬೈ) ( ಆ. 12)  ಹೆಲಿಕಾಪ್ಟರ್ ಮಾದರಿ ಮಾಡಿ ಅದಕ್ಕೆ ಅಳವಡಿಸಿದ್ದ ಬ್ಲೇಡ್ ಒಂದು ಸಂಶೋಧಕನ ಕುತ್ತಿಗೆಯನ್ನೇ ಕತ್ತರಿಸಿದೆ. ಸ್ಥಳದಲ್ಲಿಯೇ ಪ್ರಾಣ ಹೋಗಿದ್ದು ಸ್ನೇಹಿತರು ಓಡಿ ಹೋಗಿ ನೋಡಿದರೂ ಏನು ಮಾಡಲಾಗದ ಸ್ಥಿತಿಯಲ್ಲಿದ್ದರು.  ಸೋಶಿಯಲ್ ಮೀಡಿಯಾದಲ್ಲಿಯೂ ಈ ವಿಡಿಯೋ ವೈರಲ್ ಆಗುತ್ತಿದೆ.

ಜಿಲ್ಲೆಯ ಮಹಾಗಾಂವ್ ತಹಸಿಲ್‌ನ ಫುಲ್ಸವಾಂಗಿ ಗ್ರಾಮದಲ್ಲಿ ದುರ್ಘಟನೆ ನಡೆದಿದೆ.  ಸಂಶೋಧನೆಯಲ್ಲಿ ತೊಡಗಿದ್ದ ಶೇಖ್ ಇಸ್ಲಾಂ ಶೇಖ್ ಪ್ರಾಣ ಕಳೆದುಕೊಂಡಿದ್ದಾರೆ.  ಎಂಟನೇ ತರಗತಿಗೆ ಶಾಲೆ ಬಿಟ್ಟ ಶೇಖ್ ತನ್ನ ಅಣ್ಣನ ಗ್ಯಾಸ್ ವೆಲ್ಡಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ.

ಕಬ್ಬಿಣದ ಉಪಕರಣ ತಯಾರಿಕೆಯಲ್ಲಿ ಪಾರಮ್ಯ ಸಾಧಿಸಿಕೊಂಡಿದ್ದ ಶೇಖ್ ಸ್ಟೀಲ್ ಮತ್ತು ಆಲ್ಯೂಮಿನಿಯಂ ಶೀಟ್ ಗಳನ್ನು ಬಳಸಿಕೊಂಡು ಮಿನಿ ಹೆಲಿಕಾಪ್ಟರ್ ಮಾದರಿ ತಯಾರಿಸಿದ್ದ. ಹೊಸದು ಏನಾದರೂ ಒಂದನ್ನು ಮಾಡಿ ಹೆಸರು ಸಂಪಾದನೆ ಮಾಡಬೇಕು ಎಂದು ಹಂಬಲಿಸಿದ್ದ.

ಈ ಬಾಲಕಿ ಕಂಡುಹಿಡಿದ ಮಾಸ್ಕ್ ಧರಿಸಿದರೆ ಕೊರೋನಾ ಪ್ರವೇಶ ಸಾಧ್ಯವೇ ಇಲ್ಲ!

ತ್ರೀ ಈಡಿಯಟ್ಸ್  ರಾಂಚೋ ಪ್ರೇರಣೆ;  ಬಾಲಿವುಡ್ ಸಿನಿಮಾ ತ್ರೀ ಈಡಿಯಟ್ಸ್ ರಾಂಚೋ ಪಾತ್ರದಿಂದ ಪ್ರೇರಣೆ  ಹೊಂದಿದ್ದ ಹುಡುಗ ನ ಹೆಲಿಕಾಪ್ಟರ್  ತಯಾರು ಮಾಡಬೇಕು ಎಂದು ಬಯಸಿದ್ದ. ಯೂಟ್ಯೂಬ್ ನಲ್ಲಿ ಮಾಹಿತಿ ಕಲೆ ಹಾಕಿ ಸಿಂಗಲ್ ಸೀಟರ್ ಹೆಲಿಕಾಪ್ಟರ್ ತಯಾರಿಕೆ ಆರಂಭಿಸಿದ್ದ.  ಮಾರುತಿ 800   ಬಳಸಿಕೊಂಡು ಸ್ಟೀಲ್ ಮತ್ತು ಆಲ್ಯೂಮಿನಿಯಂ ಶೀಟ್ ಗಳ ನೆರವಿನಿಂದ  ಮಾದರಿ ಸಿದ್ಧಮಾಡಿದ್ದ.

ಈ ಬಾರಿಯ ಸ್ವಾತಂತ್ರ್ಯ ದಿನದಂದು ತನ್ನ ಹೆಲಿಕಾಪ್ಟರ್ ಪರಿಚಯಿಸಬೇಕು ಎಂಬ ಆಸೆ ಶೇಖ್ ದಾಗಿತ್ತು.  ಮಂಗಳವಾರ ರಾತ್ರಿ ಟೆಸ್ಟ್ ಮಾಡಲು ಮುಂದಾಗಿ ಫೈಲಟ್ ಸೀಟ್ ನಲ್ಲಿ ಕುಳಿತುಕೊಂಡು ಎಂಜಿನ್ ಸ್ಟಾರ್ಟ್ ಮಾಡಿದಾಗ  ಅಳವಡಿಕೆ ಮಾಡಿದ್ದ ರೆಕ್ಕೆ ಕತ್ತರಿಸಿದೆ. ಕುತ್ತಿಗೆಯನ್ನು ಸೀಳಿದೆ.

ಲೋಕಲ್ ರಾಂಚೋ ಎಂದೇ ಹೆಸರು ಮಾಡಿದ್ದ ಹುಡುಗ ದುರ್ಮರಣಕ್ಕೆ ಗುರಿಯಾಗಿದ್ದಾನೆ. ಸ್ಥಓಯ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. 

Follow Us:
Download App:
  • android
  • ios