ನವದೆಹಲಿ(ಫೆ.11): ಸದ್ಯ ಹಡಗು ಒಡೆಯುವ ಕೇಂದ್ರದಲ್ಲಿ ಬೀಡುಬಿಟ್ಟಿರುವ ವಿರಾಟ್‌ ಯುದ್ಧನೌಕೆಯನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕæೂೕರ್ಟ್‌ ಸೂಚಿಸಿದೆ.

3 ದಶಕಗಳ ಕಾಲ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿ 2017ರಲ್ಲಷ್ಟೇ ನಿವೃತ್ತಿಯಾಗಿದ್ದ ನೌಕೆಯನ್ನು ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲು ಅನುಮತಿ ಕೋರಿ ಎನ್ವಿಟೆಕ್‌ ಮರೈನ್‌ ಕನ್ಸಲ್ಟೇಷನ್‌ ಎಂಬ ಕಂಪನಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ ಕೆಲವೊಂದು ನೀತಿ ನಿರೂಪಣಾ ವಿಷಯ ಮತ್ತು ಭದ್ರತೆಯ ಕಾರಣಕ್ಕಾಗಿ ಸರ್ಕಾರ ಅನುಮತಿ ನಿರಾಕರಿಸಿತ್ತು.

ಈ ಹಿನ್ನೆಲೆಯಲ್ಲಿ ಆ ಕಂಪನಿ, ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು. ಈ ಹಿನ್ನೆಲೆಯಲ್ಲಿ ಹಡಗನ್ನು ಒಡೆಯುವ ಕಾರ್ಯಕ್ಕೆ ತಡೆ ನೀಡಿರುವ ಕೋರ್ಟ್‌, ಅರ್ಜಿದಾರರ ಮನವಿ ಕುರಿತು ಉತ್ತರಿಸುವಂತೆ ಸೂಚಿಸಿ ನೋಟಿಸ್‌ ಜಾರಿ ಮಾಡಿದೆ.

1959ರಲ್ಲಿ ಎಚ್‌ಎಂಎಸ್‌ ಹಮ್ಸ್‌ರ್‍ ಹೆಸರಿನಲ್ಲಿ ಬ್ರಿಟನ್‌ ನೌಕಾಪಡೆಗೆ ಸೇರ್ಪಡೆಯಾಗಿದ್ದ ಈ ಯುದ್ಧನೌಕೆಯನ್ನು ನವೀಕರಣಗೊಳಿಸಿ 1986-87ರಲ್ಲಿ ವಿರಾಟ್‌ ಹೆಸರಿನಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು.