Covid ಲಸಿಕೆ ಬಗ್ಗೆ ಅನುಮಾನ: ಕರ್ನಾಟಕ ವಕೀಲನ ಅರ್ಜಿ ವಜಾ!

*ಲಸಿಕೆ ಬಳಕೆಗೆ ನಿಷೇಧ ಹೇರಬೇಕೆಂದು ಕರ್ನಾಟಕ ವಕೀಲನ ಅರ್ಜಿ
*ನ್ಯಾಯಾಲಯದ  ಸಮಯ ವ್ಯರ್ಥ ಮಾಡಬೇಡಿ ಎಂದ ಹೈಕೋರ್ಟ್
*50000 ರೂ. ದಂಡ ವಿಧಿಸಿದ ನ್ಯಾಯಾಲಯ!
 

SC rejects plea against mass vaccination by karnataka lawyer

ನವದೆಹಲಿ (ಅ. 26): ಕೋವಿಡ್‌ ಲಸಿಕೆಗಳ (Covid Vaccine) ಪ್ರಾಯೋಗಿಕ ಪರೀಕ್ಷೆ ಸೂಕ್ತವಾಗಿ ನಡೆದಿಲ್ಲ. ಹೀಗಾಗಿ ಅವುಗಳ ಬಳಕೆಗೆ ನಿಷೇಧ ಹೇರಬೇಕು ಎಂದು ಕೋರಿ ಕರ್ನಾಟಕ ಮೂಲದ ವಕೀಲ ಮ್ಯಾಥ್ಯೂ ಥಾಮಸ್‌ (Mathew Thomas) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ (Supreme Court) ವಜಾ ಮಾಡಿದೆ. ಈ ವಿಷಯದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಅದು ಎತ್ತಿಹಿಡಿದಿದೆ. ಜೊತೆಗೆ ಇಂತಹ ಅರ್ಜಿಗಳ ಮೂಲಕ ಸಮಯ ವ್ಯರ್ಥ ಮಾಡಬೇಡಿ ಎಂದು ಅರ್ಜಿದಾರರಿಗೆ ಸೂಚನೆ ನೀಡಿ, ರೂ. 50000 ದಂಡ ವಿಧಿಸಿದೆ. ಜೊತೆಗೆ ಕೋವೀಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆಯಿಂದ ಸೋಂಕು ಕಡಿಮೆಯಾಗಿದೆ. ಅದರ ಬಗ್ಗೆ ನಮಗೆ ಅನುಮಾನಗಳಿಲ್ಲ ಎಂದು ಸ್ಪಷ್ಟಪಡಿಸಿದೆ.

ಅಭಿನಂದನೆಗಳು ಭಾರತ: 100 ಕೋಟಿ ಲಸಿಕೆ ದಾಖಲೆ, RML ಆಸ್ಪತ್ರೆಗೆ ಪಿಎಂ ಮೋದಿ ಭೇಟಿ!

ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ಬಳಕೆ ವಿರುದ್ಧದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಅ. 25) ವಜಾ ಮಾಡಿದೆ. ಕೋವಿಡ್ -19 ನಿಂದ ಜನರನ್ನು ರಕ್ಷಿಸಲು ಈ ಲಸಿಕೆಗಳು ಅವಶ್ಯವಾಗಿವೆ. ಈ ವಿಷಯದ ಬಗ್ಗೆ ವಾದ ಮಾಡಲು ನಾವು ಬಯಸುವುದಿಲ್ಲ, ಲಸಿಕೆಯ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ನ್ಯಾಯಾಲಯ ತಿಳಿಸಿದೆ. ಜತೆಗೆ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶದಲ್ಲಿ ಯಾವುದೇ ಲೋಪವಿಲ್ಲ ಎಂದಿರುವ ನ್ಯಾಯಾಲಯ, ಸಮಯ ವ್ಯರ್ಥ ಮಾಡಿದ್ದಕ್ಕಾಗಿ ರೂ. 50000 ದಂಡ ವಿಧಿಸಿದೆ.

ಕರ್ನಾಟಕದಲ್ಲಿ 6 ಕೋಟಿ ಡೋಸ್ ಲಸಿಕೆ ವಿತರಣೆ: ಅಭಿಯಾನದಲ್ಲಿ ಕರ್ನಾಟಕ ಗೆದ್ದಿದ್ದು ಹೇಗೆ?

ಮೇ ತಿಂಗಳಿನಲ್ಲಿ ಕರ್ನಾಟಕ ಹೈಕೋರ್ಟ್‌ ವಕೀಲರ ಅರ್ಜಿಯನ್ನು ವಜಾಗೊಳಿಸಿತ್ತು. ಜತೆಗ ಈ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿಯ ನಿಟ್ಟಿನಲ್ಲಿ ಹಾಕಲಾಗಿಲ್ಲ ಹಾಗಾಗಿ ನ್ಯಾಯಾಲಯದ 45 ನಿಮಿಷ ವ್ಯರ್ಥ ಮಾಡಿದ್ದಕ್ಕಾಗಿ ದಂಡ ಕೂಡ ವಿಧಿಸಬಹುದು. ಇದೇ ಸಮಯವನ್ನು ಕೊರೋನಾದಿಂದಾಗುತ್ತಿರುವ ಇತರ ಸಮಸ್ಯೆಗಳನ್ನು ಚರ್ಚಿಸಲು ಬಳಸಬಹುದಿತ್ತು ಎಂದು ನ್ಯಾಯಾಲಯ ತಿಳಿಸಿತ್ತು. ಹೈಕೋರ್ಟಿನಲ್ಲಿ ಅರ್ಜಿದಾರರ ವಕೀಲರು, ಕ್ಲಿನಿಕಲ್ ಪ್ರಯೋಗಗಳನ್ನು (Clinical trials) ಪೂರ್ಣಗೊಳಿಸದೆ ಕೇಂದ್ರವು ಯಾವ ಕಾನೂನಿನ ಅಧಿಕಾರದ ಅಡಿಯಲ್ಲಿ ಲಸಿಕೆಯನ್ನು ಅನುಮತಿಸಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಪ್ರತಿಪಾದಿಸಿದರು. ಆದರೆ ನ್ಯಾಯಾಲಯ ಈ ಅರ್ಜಿಯನ್ನು ವಜಾಗೊಳಿಸುವ ಮೂಲಕ ಲಸಿಕೆ ವಿಚಾರದಲ್ಲಿ ಯಾವುದೇ ಸಂದೇಹ ಬೇಡ ಎಂದು ತಿಳಿಸಿದೆ.

ಭಾರತಕ್ಕೆ 100 ಕೋಟಿ ಲಸಿಕೆ ಸಂಭ್ರಮ!

ಕೊರೋನಾ ವೈರಸ್(Coronavirus) ವಿರುದ್ಧದ ಹೋರಾಟದಲ್ಲಿ ಭಾರತವು ಅಕ್ಟೋಬರ್ 21 ರಂದು ಐತಿಹಾಸಿಕ ಸಾಧನೆಗೈದು,  100 ಕೋಟಿ ಲಸಿಕೆ ಹಾಕಿ ಹೊಸತೊಂದು ಅಧ್ಯಾಯ ಸೃಷ್ಟಿಸಿತ್ತು. ಇದೇ ವೇಳೆ ಪ್ರಧಾನಿ ಮೋದಿ ಕೂಡಾ ಟ್ವೀಟ್ ಮಾಡಿ ಜನರನ್ನು ಅಭಿನಂದಿಸಿದ್ದರು. ಮೋದಿ ತಮ್ಮ ಟ್ವೀಟ್‌ನಲ್ಲಿ ' ಭಾರತೀಯ ವಿಜ್ಞಾನ, ಉದ್ಯಮ ಮತ್ತು ಸಾಮೂಹಿಕ ಮನೋಭಾವದ ವಿಜಯಕ್ಕೆ 130 ಕೋಟಿ ಭಾರತೀಯರು ಸಾಕ್ಷಿಯಾಗುತ್ತಿದ್ದೇವೆ. 100 ಕೋಟಿ ಲಸಿಕೆಗಳನ್ನು ದಾಟಿದ ಭಾರತಕ್ಕೆ ಅಭಿನಂದನೆಗಳು. ನಮ್ಮ ವೈದ್ಯರು, ದಾದಿಯರು ಮತ್ತು ಈ ಸಾಧನೆ ಮಾಡಲು ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಬರೆದಿದ್ದರು. ಜತೆಗೆ ಭಾರತ  100 ಕೋಟಿ ಲಸಿಕೆ ಹಾಕಿದ ಸಂಭ್ರಮದಲ್ಲಿ ದೇಶಾದ್ಯಂತ ವಿವಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

100 ಕೋಟಿ ಲಸಿಕೆ: ಸಂಭ್ರಮಿಸೋದು ಬಿಟ್ಟು ದೇಶದ ಜನರ ಕ್ಷಮೆ ಕೇಳಿ, ಹರಿಪ್ರಸಾದ್‌

Latest Videos
Follow Us:
Download App:
  • android
  • ios