100 ಕೋಟಿ ಲಸಿಕೆ: ಸಂಭ್ರಮಿಸೋದು ಬಿಟ್ಟು ದೇಶದ ಜನರ ಕ್ಷಮೆ ಕೇಳಿ, ಹರಿಪ್ರಸಾದ್‌

*  ಕೊರೋನಾ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರ ವಿಫಲ: ಹರಿ ಪ್ರಸಾದ್‌ ಕಿಡಿ
*  ಮೋದಿ, ಬಿಜೆಪಿ ನಾಯಕರು ದೇಶದ ಕ್ಷಮೆ ಕೇಳಲಿ
*  ಕೊರೋನಾದಿಂದ ದೇಶದಲ್ಲಿ 40 ಲಕ್ಷಕ್ಕೂ ಹೆಚ್ಚು ಜನರ ಸಾವು 

PM Narendra Modi BJP Leaders Should Be Apologize to the Country Says BK Hariprasad grg

ಬೆಂಗಳೂರು(ಅ.22):  ದೇಶದಲ್ಲಿ 100 ಕೋಟಿ ಡೋಸ್‌(100 Crore Vaccination) ಲಸಿಕೆ ನೀಡಿದ್ದೇವೆ ಎಂದು ಕೇಂದ್ರ ಸರ್ಕಾರ ಸಂಭ್ರಮಿಸಲು ಮುಂದಾಗಿದೆ. ಆದರೆ, ಕೊರೋನಾದಿಂದ(Coronavirus) ದೇಶದಲ್ಲಿ 40 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಜನ ಔಷಧಿ, ಆಕ್ಸಿಜನ್‌ ಸಿಗದೆ ರಸ್ತೆಗಳಲ್ಲೇ ಪ್ರಾಣ ಬಿಟ್ಟಿದ್ದಾರೆ. ಇದು ಕರೋನಾ ನಿರ್ವಹಣೆಯಲ್ಲಿ ಕೇಂದ್ರ ಸಂಪೂರ್ಣ ವೈಫಲ್ಯ ಕಂಡಿದೆ ಎಂಬುದನ್ನು ಸಾಬೀತು ಮಾಡುತ್ತದೆ. ಈ ವೈಫಲ್ಯಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ಹಾಗೂ ಬಿಜೆಪಿ(BJP) ನಾಯಕರು ದೇಶದ ನಾಗರಿಕರ ಕ್ಷಮೆ ಕೋರಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌(BK Hariprasad) ಒತ್ತಾಯಿಸಿದ್ದಾರೆ. 

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 100 ಕೋಟಿ ಡೋಸ್‌ ಲಸಿಕೆ(Vaccine) ಕೊಟ್ಟಿದ್ದೇವೆ ಎನ್ನುವ ಕೇಂದ್ರ ಸರ್ಕಾರ(Central Government), ಸರ್ಕಾರಿ ಆಸ್ಪತ್ರೆಗಳಲ್ಲಿ ಎಷ್ಟು ಲಸಿಕೆ, ಖಾಸಗಿ ಆಸ್ಪತ್ರೆಗಳಲ್ಲಿ(Hospital) ಎಷ್ಟು ಲಸಿಕೆ ನೀಡಲಾಗಿದೆ. ಎಷ್ಟೆಷ್ಟು ಜನ 1,000 ರು.ಗಳಿಂದ 2,000 ರು. ನೀಡಿ ಲಸಿಕೆ ಪಡೆದಿದ್ದಾರೆ ಎಂಬುದನ್ನು ಜನರಿಗೆ ತಿಳಿಸಲಿ ಎಂದು ಆಗ್ರಹಿಸಿದರು.

'ಟೀಂ ಇಂಡಿಯಾ ಜಗತ್ತಿಗೆ ಶಕ್ತಿ ತೋರಿಸಿದೆ' ಲಸಿಕಾ ಅಭಿಯಾನಕ್ಕೆ ಮೋದಿ ಧನ್ಯವಾದ

100 ಕೋಟಿ ಜನ ಇರುವ ದೇಶದಲ್ಲಿ ಕೇವಲ 20 ಕೋಟಿ ಜನರಿಗೆ ಮಾತ್ರ ಎರಡೂ ಡೋಸ್‌ ಲಸಿಕೆ ನೀಡಲಾಗಿದೆ. ವಿಶ್ವದಲ್ಲೇ(World) ಅತಿ ಹೆಚ್ಚು ಲಸಿಕೆ ಉತ್ಪಾದಿಸುವ ಭಾರತದಲ್ಲಿ(India) ಇದು ಸಂಭ್ರಮಿಸುವ ವಿಚಾರವೇ? ಭಾರತದಿಂದ ಲಸಿಕೆ ಪಡೆದಿರುವ ದೇಶಗಳಲ್ಲಿ ಎಷ್ಟು ಮಂದಿಗೆ ಎರಡೂ ಡೋಸ್‌ ನೀಡಲಾಗಿದೆ ಎಂದು ಪ್ರಶ್ನಿಸಿದರು.
 

Latest Videos
Follow Us:
Download App:
  • android
  • ios