ಚುನಾವಣಾ ಬಾಂಡ್ ಮಾಹಿತಿ ಬಹಿರಂಗ: ಜೂ.30ರವರೆಗೆ ಸಮಯ ಕೇಳಿದ ಎಸ್‌ಬಿಐ
ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ಗಳ ಬಗ್ಗೆ ಮಾಹಿತಿ ನೀಡಲು ತನಗೆ ವಿಧಿಸಲಾಗಿರುವ ಮಾ.6ರ ಗಡುವನ್ನು ಜೂ.30 ರವರೆಗೆ ವಿಸ್ತರಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.
ನವದೆಹಲಿ: ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ಗಳ ಬಗ್ಗೆ ಮಾಹಿತಿ ನೀಡಲು ತನಗೆ ವಿಧಿಸಲಾಗಿರುವ ಮಾ.6ರ ಗಡುವನ್ನು ಜೂ.30 ರವರೆಗೆ ವಿಸ್ತರಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.ಕಳೆದ ತಿಂಗಳು ಐತಿಹಾಸಿಕ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಎಸ್‌ಬಿಐ ಮೂಲಕ ನಡೆಯುತ್ತಿದ್ದ ಚುನಾವಣಾ ಬಾಂಡ್‌ಗಳ ರಹಸ್ಯ ದೇಣಿಗೆ ಯೋಜನೆಯನ್ನು ಮಾಹಿತಿ ಹಕ್ಕು ಉಲ್ಲಂಘನೆ ಕಾರಣ ನೀಡಿ ರದ್ದುಗೊಳಿಸಿತ್ತು ಮತ್ತು ಮಾ.6 ರೊಳಗೆ ಎಲ್ಲ ಖರೀದಿದಾರರ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡುವಂತೆ ಎಸ್‌ಬಿಐಗೆ ತಿಳಿಸಿತ್ತು.
ಆದರೆ, ಈಗ ಎಸ್‌ಬಿಐ ಜೂ.30ರವರೆಗೆ ಸಮಯ ಕೇಳಿದೆ. ಅರ್ಥಾತ್ ಅಷ್ಟೊತ್ತಿಗೆ ಲೋಕಸಭೆ ಚುನಾವಣೆ ಮುಗಿದಿರುತ್ತದೆ. ಹೀಗಾಗಿ ಚುನಾವಣೆ ಆರಂಭವಾಗುವುದರ ಒಳಗೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಮೂಲಕ ಹಣ ನೀಡಿರುವ ದೇಣಿಗೆದಾರರ ಹೆಸರು ಬಹಿರಂಗ ಮಾಡಲು ಹಿಂದೇಟು ಹಾಕುವ ಯತ್ನ ನಡೆದಿದೆ ಎಂಬ ಅನುಮಾನಕ್ಕೆ ಕಾರಣವಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ.
ಚುನಾವಣಾ ಬಾಂಡ್‌ಗಳಿಂದ 16518 ಕೋಟಿ ಸಂಗ್ರಹ: ಯಾವ ಪಕ್ಷಕ್ಕೆ ಎಷ್ಟು ಇಲ್ಲಿದೆ ಡಿಟೇಲ್ಸ್
ಎಸ್‌ಬಿಐ ಸಮಯ ವಿಸ್ತರಣೆ ಕೇಳಿರುವುದನ್ನು ಟೀಕಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಬಾಂಡ್ ಮಾಹಿತಿ ನೀಡಲು ಸಮಯ ವಿಸ್ತರಣೆ ಕೋರಿದ ಎಸ್‌ಬಿಐನ ನಿರ್ಧಾರವೂ ಲೋಕಸಭಾ ಚುನಾವಣೆಗೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರ ನಿಜವಾದ ಮುಖ ಮುಚ್ಚಿಕೊಳ್ಳಲು ನಡೆಸಿದ ಕಡೆ ಪ್ರಯತ್ನ ಎಂದು ಟೀಕಿಸಿದ್ದಾರೆ.
ಇದು ಲೋಕಸಭಾ ಚುನಾವಣೆ ಮುಕ್ತಾಯದವರೆಗೂ ಮೋದಿ ಮತ್ತು ಬಿಜೆಪಿಯನ್ನು ರಕ್ಷಿಸಲು ಎಸ್‌ಬಿಐ ಈ ರೀತಿ ಕ್ರಮ ಕೈಗೊಂಡಿದೆಯೆ? ಈ ಡಿಜಿಟಲ್ ಯುಗದಲ್ಲೂ ಇಂತಹ ಮಾಹಿತಿ ನೀಡಲು ಸಮಯ ವಿಸ್ತರಣೆ ಕೇಳಿರುವುದು ಅನುಮಾನದ ಆತಂಕಗಳನ್ನು ಸೃಷ್ಟಿಸಿದೆ ಎಂದು ಸಿಪಿಐ ಮುಖಂಡ ಸೀತಾರಾಮ್ ಯೆಚೂರಿ ದೂರಿದ್ದಾರೆ.
ಚುನಾವಣಾ ಬಾಂಡ್ ಮಾನ್ಯತೆ ಪ್ರಶ್ನಿಸಿದ ಅರ್ಜಿ ಸಾಂವಿಧಾನಿಕ ಪೀಠಕ್ಕೆ?