ಚುನಾವಣಾ ಬಾಂಡ್ ಮಾನ್ಯತೆ ಪ್ರಶ್ನಿಸಿದ ಅರ್ಜಿ ಸಾಂವಿಧಾನಿಕ ಪೀಠಕ್ಕೆ?
ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ಹಣ ಕಳಿಸಲು ನೆರವಾಗುವ ವಿವಾದಾತ್ಮಕ ಚುನಾವಣಾ ಬಾಂಡ್ ಯೋಜನೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ನವದೆಹಲಿ: ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ಹಣ ಕಳಿಸಲು ನೆರವಾಗುವ ವಿವಾದಾತ್ಮಕ ಚುನಾವಣಾ ಬಾಂಡ್ ಯೋಜನೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈವರೆಗೆ 12 ಸಾವಿರ ಕೋಟಿ ರು. ಹಣವು ಚುನಾವಣಾ ಬಾಂಡ್ ಮೂಲಕ ರಾಜಕೀಯ ಪಕ್ಷಗಳಿಗೆ ಸಂದಾಯವಾಗಿದೆ. ಇದರಲ್ಲಿ ಶೇ.66ರಷ್ಟು ಹಣವು ದೊಡ್ಡ ಪಕ್ಷಗಳಿಗೆ ಸಂದಾಯವಾಗಿದೆ. ಹೀಗಾಗಿ ಇದರ ತುರ್ತು ವಿಚಾರಣೆ ಅಗತ್ಯ. ಇನ್ನೇನು ಕರ್ನಾಟಕ ಚುನಾವಣೆ (Karnata election) ನಡೆಯಲಿದ್ದು, ಅದಕ್ಕೂ ಮೊದಲೇ ಚುನಾವಣೆ ನಡೆಯುವ ಅಗತ್ಯವಿದೆ ಎಂದು ಅರ್ಜಿದಾರ ಎನ್‌ಜಿಒ ಪರ ವಕೀಲರು ವಾದಿಸಿದರು.
ಇದಕ್ಕೆ ಒಪ್ಪಿದ ಮುಖ್ಯ ನ್ಯಾ. ಡಿ.ವೈ. ಚಂದ್ರಚೂಡ (D.Y. Chandrachud) ಅವರ ಪೀಠ, ಏ.11ರಂದು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಏನಿದು ಚುನಾವಣಾ ಬಾಂಡ್?:
ಭಾರತದ ನಾಗರಿಕರು ಬ್ಯಾಂಕ್‌ಗಳಲ್ಲಿ ಚುನಾವಣಾ ಬಾಂಡ್ (Election Bond) ಖರೀದಿಸಿ ನೋಂದಾಯಿತ ಪಕ್ಷಗಳಿಗೆ ಹಣ ರವಾನಿಸಬಹುದು. ದೇಣಿಗೆದಾರರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ. 20 ಸಾವಿರ ರು.ಗಿಂತ ಕಡಿಮೆ ಹಣ ನೀಡಿದ ದೇಣಿಗೆದಾರರ ಹೆಸರನ್ನು ರಾಜಕೀಯ ಪಕ್ಷಗಳೂ ಬಹಿರಂಗಪಡಿಸಬೇಕಿಲ್ಲ. ಹೀಗಾಗಿ, ದೇಣಿಗೆದಾರರ ಗೌಪ್ಯತೆ ಕಾಪಾಡುವ ನಿಯಮದಿಂದ ಕಪ್ಪುಹಣ ಹೊಂದಿದವರು ಪಕ್ಷಗಳಿಗೆ ಸುಲಭವಾಗಿ ದೇಣಿಗೆ ನೀಡಲು ಸಾಧ್ಯವಾಗುತ್ತದೆ. ಪಕ್ಷಗಳಿಗೂ ಸುಲಭವಾಗಿ ಕಪ್ಪು ಹಣ ಸ್ವೀಕರಿಸಲು ಸಾಧ್ಯವಾಗುತ್ತದೆ ಎಂಬುದು ಬಾಂಡ್ ಪ್ರಶ್ನಿಸಿರುವ ಅರ್ಜಿದಾರರ ವಾದ.
ಬರೀ ಐನೂರಾ, 2 ಸಾವಿರ ಕೊಡು..! ಭಾರತ್ ಜೋಡೋ ನಿಧಿ ಸಂಗ್ರಹದ ವೇಳೆ ಕೈ ಕಾರ್ಯಕರ್ತರ ಆವಾಜ್!