ಸಾವೆನ್ ಹರೇಂದ್ರ ಸಿಕ್ಸ್ಟಿ, ಪ್ರಿನ್ಸಿಪಲ್ ಬರೆದ ಚೆಕ್ ಸ್ಪೆಲ್ಲಿಂಗ್ ನೋಡಿ ಸುಸ್ತಾದ ಬ್ಯಾಂಕ್ ಸಿಬ್ಬಂದಿ, ಶಾಲಾ ಬಿಸಿಯೂಟದ ಸಿಬ್ಬಂದಿಗೆ ಬಾಕಿ ಮೊತ್ತ ನೀಡಲು ಪ್ರಿನ್ಸಿಪಲ್ ಚೆಕ್ ಬರೆದುಕೊಟ್ಟಿದ್ದಾರೆ. ಆದರೆ ಈ ಚೆಕ್ ರಿಜೆಕ್ಟ್ ಆಗಿದ್ದು ಮಾತ್ರವಲ್ಲ, ಬ್ಯಾಂಕ್ ಸಿಬ್ಬಂದಿ ಕಂಗಾಲಾಗಿದ್ದಾರೆ. 

ಹಿಮಾಚಲ ಪ್ರದೇಶ (ಸೆ.30) ಸಾವೆನ್ ಥರ್ಸಡೇ ಸಿಕ್ಸ್ ಹರೇಂದ್ರ ಸಿಕ್ಸ್ಟಿ ಒನ್ಲಿ, ಇದು ಶಾಲಾ ಪ್ರಿನ್ಸಿಪಲ್ ಬರೆದ ಚೆಕ್ ಮೊತ್ತ. ಇದನ್ನು ಓದಿ ಬ್ಯಾಂಕ್ ಸಿಬ್ಬಂದಿ ಎಷ್ಟು ಮೊತ್ತ ನೀಡಬೇಕು ಅನ್ನೋದು ಗೊಂದಲಕ್ಕೀಡಾಗಿದ್ದಾರೆ. ಪ್ರಿನ್ಸಿಪಾಲ್ ಸ್ಪೆಲ್ಲಿಂಗ್ ನೋಡಿ ಬ್ಯಾಂಕ್ ಸಿಬ್ಬಂದಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಇತ್ತ ಹಣ ಪಡೆಯಲು ಬ್ಯಾಂಕ್‌ಗೆ ಚೆಕ್ ನೀಡಿದ ವ್ಯಕ್ತಿ ಕೂಡ ಕಂಗಾಲಾಗಿದ್ದಾರೆ. ಸುದೀರ್ಘ ದಿನಗಳ ಬಳಿಕ ಬಾಕಿ ಮೊತ್ತ ನೀಡಲಾಗಿತ್ತು. ಆದರೆ ಮೊತ್ತ ಕೈಸೇರಲು ಸ್ಪೆಲ್ಲಿಂಗ್ ಅಡ್ಡಿಯಾದ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.

ಏನಿದು ಸಾವೆನ್ ಥರ್ಸಡೇ ಸಿಕ್ಸ್ ಹರೇಂದ್ರ ಸಿಕ್ಸ್ಟಿ?

ಚೆಕ್‌ನಲ್ಲಿ ಪ್ರಿನ್ಸಿಪಾಲ್ ಬರೆದ ಸಾವೆನ್ ಥರ್ಸಡೇ ಸಿಕ್ಸ್ ಹರೇಂದ್ರ ಸಿಕ್ಸ್ಟಿ ಒನ್ಲಿ ಎಷ್ಟು ಮೊತ್ತ ಗೊತ್ತಾ? 7617 ರೂಪಾಯಿ. ಸೆವೆನ್ ಬರೆಯುವ ಬದಲು ಸಾವೆನ್ ಬರೆಯಲಾಗಿದೆ. ಇನ್ನು ಥೌಸೆಂಡ್ ಬರೆಯುವ ಬದಲು ಥರ್ಸಡೇ ಬರೆದಿದ್ದರೆ, ಹಂಡ್ರೆಡ್ ಬದಲು ಹರೇಂದ್ರ ಎಂದ ಬರೆದಿದ್ದಾರೆ. (Saven thursaday six harendra sixty rupees only. ಈ ಸ್ಪೆಲ್ಲಿಂಗ್ ನೋಡಿ ಬ್ಯಾಂಕ್ ಸಿಬ್ಬಂದಿಗಳು ಸುಸ್ತಾಗಿದ್ದಾರೆ.

ಹಿಮಾಚಲ ಪ್ರದೇಶದ ಸರ್ಕಾರಿ ಶಾಲಾ ಪ್ರಿನ್ಸಿಪಾಲ್ ಚೆಕ್‌ನಲ್ಲಿ ಸಾಮಾನ್ಯ ಸ್ಪೆಲ್ಲಿಂಗ್ ಬರೆಯುವಾಗ ಪ್ರಮುಖವಾಗಿ ಅಂಕಿ ಸಂಖ್ಯೆ ಅಕ್ಷರ ರೂಪದಲ್ಲಿ ಬರೆಯುವಾಗ ಇಷ್ಟು ತಪ್ಪು ಮಾಡಿದ್ದಾರೆ. ಇನ್ನು ಮಕ್ಕಳಿಗೆ ಏನು ಕಲಿಸುತ್ತಾರೆ, ಪ್ರಿನ್ಸಿಪಾಲ್ ಒಬ್ಬರ ಸಾಮಾನ್ಯ ಇಂಗ್ಲೀಷ್ ಈ ರೀತಿ ಇದ್ದರೆ, ಇನ್ನು ಮಕ್ಕಳ ಪರಿಸ್ಥಿತಿ ಹೇಗಿರಬಹುದು ಎಂದು ಹಲವರು ಪ್ರಶ್ನಿಸಿದ್ದಾರೆ.

Scroll to load tweet…

ಅಲ್ಟರ್ ಸಿಂಗ್‌ಗೆ ನೀಡಿದ್ದ ಚೆಕ್

ಅಲ್ಟರ್ ಸಿಂಗ್ ಹಿಮಾಚಲ ಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ ಮಧ್ಯಾಹ್ನ ಬಿಸಿಯೂಟದ ಜವಾಬ್ದಾರಿ ಹೊತ್ತಿದ್ದಾನೆ. ಬಿಸಿಯೂಟದ ಸಾಮಾಗ್ರಿ, ಸಿಬ್ಬಂದಿಗಳ ವೇತನ ಸೇರಿದಂತೆ ಶಾಲೆಯಿಂದ 7617 ರೂಪಾಯಿ ಬಾಕಿ ಉಳಿದಿತ್ತು. ಈ ಮೊತ್ತವನ್ನು ಶಾಲಾ ಪ್ರಿನ್ಸಿಪಾಲ್ ಚೆಕ್ ನೀಡಿದ್ದಾರೆ. ಚೆಕ್ ಹಿಡಿದು ಬ್ಯಾಂಕ್ ತೆರಳಿ ಚಲನ್ ಭರ್ತಿ ಮಾಡಿ ನೀಡಿದ್ದಾನೆ. ಆದರೆ ಚೆಕ್ ರಿಜೆಕ್ಟ್ ಆಗಿದೆ. ಆಲ್ಟರ್ ಸಿಂಗ್ ಆತಂಕಗೊಂಡಿದ್ದಾನೆ. ತಾನು ಭರ್ತಿ ಮಾಡಿದ ಚಲನ್‌ನಲ್ಲಿ ತಪ್ಪುಗಳು, ಖಾತೆ ಸಂಖ್ಯೆಯಲ್ಲಿ ಏನಾದರು ತಪ್ಪುಗಳಿವೆಯಾ ಎಂದು ಪರಿಶೀಲಿಸಿ ಹೊಸ ಚಲನ್ ಹಾಕುತ್ತೇನೆ ಎಂದು ಬ್ಯಾಂಕ್ ಸಿಬ್ಬಂದಿ ಬಳಿ ಹೇಳಿದ್ದಾನೆ. ಆದರೆ ನಿಮ್ಮ ಸಮಸ್ಯೆಯಲ್ಲ, ಚೆಕ್‌ನಲ್ಲಿನ ತಪ್ಪಿನಿಂದ ರಿಜೆಕ್ಟ್ ಆಗಿದೆ ಎಂದಿದ್ದಾರೆ.

ಪ್ರಿನ್ಸಿಪಾಲ್ ಚೆಕ್ ನೋಡಿ ಬ್ಯಾಂಕ್ ಸಿಬ್ಬಂದಿಗಳು ಸುಸ್ತು

ಪ್ರಿನ್ಸಿಪಲ್ ಚೆಕ್ ನೋಡಿದ ಸಿಬ್ಬಂದಿಗಳು ನಕ್ಕು ಸುಸ್ತಾಗಿದ್ದಾರೆ. ಎಲ್ಲಾ ಸಿಬ್ಬಂದಿಗಳು ಈ ಚೆಕ್ ಫೋಟೋ ತೆಗೆದಿದ್ದಾರೆ. ಹಲವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಮುಖವಾಗಿ ಈ ಚೆಕ್‌ನಲ್ಲಿ ಶಾಲೆಯ ಸೀಲ್ ಕೂಡ ಇದೆ. ಹೀಗಾಗಿ ಭಾರಿ ವೈರಲ್ ಆಗುತ್ತಿದೆ.