ನವದೆಹಲಿ(ಅ.01): ಬರೋಬ್ಬರಿ 28 ವರ್ಷಗಳ ಬಳಿಕ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ಸಿಬಿಐ ವಿಶೇಷ ಕೋರ್ಟ್ ಪ್ರಕಟಸಿತ್ತು. ಬಿಜೆಪಿ ಹಿರಿಯ ನಾಯಕರಾದ ಎಲ್‌ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಸೇರಿದಂತೆ 32 ಮಂದಿಯನ್ನು ಕೋರ್ಟ್ ಖುಲಾಸೆಗೊಳಿಸಿತ್ತು. ಈ ಪೈಕಿ ಉಮಾ ಭಾರತಿ ಮೇಲೆ ಪ್ರಕರಣ ಕೂಡ ಖುಲಾಸೆಯಾಗಿತ್ತು. ತೀರ್ಪು ಪರ ವಿರೋಧ ಚರ್ಚೆಗೂ ಎಡೆಮಾಡಿತ್ತು. ಇದರ ಬೆನ್ನಲ್ಲೇ ಇಂಗ್ಲೀಷ್ ಮಾಧ್ಯವೊಂದು ಪ್ರಕಟಿಸಿದ ಸುದ್ದಿಗೆ ಇದೀಗ ಆಡಿಶನಲ್ ಸಾಲಿಸಿಟರ್ ಜನರಲ್ ಹಾಗೂ ಬಿಜೆಪಿ ನ್ಯಾಷನಲ್ ಎಕ್ಸ್‌ಕ್ಯೂಟಿವ್ ಸತ್ಯಪಾಲ್ ಜೈನ್ ಸ್ಪಷ್ಟನೆ ನೀಡಿದ್ದಾರೆ.

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ, ಜೋಶಿ ಸೇರಿ ಎಲ್ಲಾ ಆರೋಪಿಗಳು ಖುಲಾಸೆ!

ಇಂಗ್ಲೀಷ್ ಮಾಧ್ಯವೊಂದು ಬಾಬ್ರಿ ಮಸೀದಿ ತೀರ್ಪು ಪ್ರಕರಣ ವಿಶ್ಲೇಷಿಸುತ್ತಾ ಜಸ್ಟೀಸ್ ಲೆಬ್ರಹಾನ್ ವರದಿಯನ್ನು ಉಲ್ಲೇಖಿಸಿದೆ. ಈ ವರದಿಯಲ್ಲಿ ಬಿಜೆಪಿ ನಾಯಕ ಉಮಾ ಭಾರತಿ , ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಜವಾಬ್ದಾರಿ ಹೊತ್ತಿದ್ದರು ಎಂದಿದೆ. ಆದರೆ ಇದು ಸತ್ಯಕ್ಕೆ ದೂರವಾಗಿದೆ ಎಂದ ಸತ್ಯಪಾಲ್ ಜೈನ್ ಸ್ಪಷ್ಟಪಡಿಸಿದ್ದಾರೆ. 

 

ಟ್ವಿಟರ್ ಮೂಲಕ ಜಸ್ಟೀಸ್ ಲೆಬ್ರಹಾನ್ ವರದಿಯಲ್ಲಿ ಉಮಾಭಾರತಿ ಹೇಳಿಕೆಯನ್ನು ದಾಖಲೆ ಸಮೇತ ಸತ್ಯಪಾಲ್ ಜೈನ್ ವಿವರಿಸಿದ್ದಾರೆ. ಉಮಾ ಭಾರತಿ ಎಂದೂ ಕೂಡ ಬಾಬ್ರಿ ಮಸೀದಿ ಜವಾಬ್ದಾರಿ ಹೊತ್ತುಕೊಂಡಿಲ್ಲ. ಈ ಕುರಿತು ಜಸ್ಟೀಸ್ ಲೆಬ್ರಹಾನ್ ವರದಿಯಲ್ಲಿನ ಸತ್ಯಾಂಶಗಳನ್ನು ಬಿಚ್ಚಿಟ್ಟಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಕೇಳಿದ ಸಂತೋಷದ ವಿಚಾರವಿದು, ಜೈ ಶೀರಾಮ್ ಎಂದು ಭಾವುಕರಾದ ಅಡ್ವಾಣಿ

ಅಯೋಧ್ಯ ವಿಚಾರಣೆ ಮಾಡಿದ ಲೆಬ್ರಹಾನ್ ಕಮಿಶನ್ ವರದಿಯ 10ನೇ ಅಧ್ಯಾಯದ 124.15ನೇ ಪ್ಯಾರದಲ್ಲಿ ಜಸ್ಟೀಸ್ ಲೆಬ್ರಹಾನ್, ಉಮಾ ಭಾರತಿ ಹೇಳಿಕೆ ದಾಖಲಿಸಿದ್ದಾರೆ. ಇದರಲ್ಲಿ ಉಮಾ ಭಾರತಿ ಎಲ್ಲಿಯೂ ಬಾಬ್ರಿ ಮಸೀದಿ ಧ್ವಂಸ ಜವಾಬ್ದಾರಿಯನ್ನು ಹೊತ್ತುಕೊಂಡಿಲ್ಲ. ಉದ್ರಿಕ್ತ ಕರಸೇವಕರು ಗುಂಪು ಮಸೀದಿ ಧ್ವಂಸಗೊಳಿಸದಂತೆ ಮನವೊಲಿಸಲು ಎಲ್‌ಕೆ ಅಡ್ವಾಣಿ ಉಮಾ ಭಾರತಿಯನ್ನು ಕಳಹಿಸಿದ್ದರು.  ಆದರೆ ಕರಸೇವಕರು ಉಮಾ ಭಾರತಿಯನ್ನು ವಾಪಸ್ ಕಳುಹಿಸಿದ್ದಾರೆ. ಇಷ್ಟೇ ಅಲ್ಲ, ಇತ್ತ ಕಡೆ ಬರದಂತೆ ಎಚ್ಚರಿ ನೀಡಿದ್ದರು ಎಂದು ದಾಖಲಿಸಿದ್ದಾರೆ. ಇದೇ ವರಿಯನ್ನು ಉಲ್ಲೇಖಿಸಿ ಮಾಧ್ಯಮ ಮಾಡಿದ ವರದಿ ಸಂಪೂರ್ಣ ಸುಳ್ಳು ಎಂದು ಸತ್ಯಪಾಲ್ ಜೈನ್ ಹೇಳಿದ್ದಾರೆ. 

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಪೂರ್ವ ನಿಯೋಜಿತವಲ್ಲ. ಆಕಸ್ಮಿಕವಾಗಿ ಸಂಭವಿಸಿದ ಘಟನೆ. ಇದನ್ನು ಪೂರ್ವನಿಯೋಜಿತ ಕೃತ್ಯ ಎಂದು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಸಿಬಿಐ ವಿಶೇಷ ಕೋರ್ಟ್ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.