ಬೆಂಗಳೂರು(ಜೂ.25): ಕಳೆದ 3 ವರ್ಷಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡಿನ ನಾಯಕಿ ಶಶಿಕಲಾ ನಟರಾಜನ್‌ಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಇದೇ ಆಗಸ್ಟ್ 14 ರಂದು ಶಶಿಕಲಾ ನಟರಾಜನ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಬಿಜೆಪಿ ನಾಯಕ ಡಾ.ಆಶೀರ್ವಾದಂ ಆಚಾರಿ ಟ್ವಿಟರ್ ಮೂಲಕ ಬಹಿರಂಗ ಪಡಿಸಿದ್ದಾರೆ.

ಜಯಲಲಿತಾ ಪೊಲಿಟಿಕಲ್ ಸೀಕ್ರೆಟ್ ಬಿಚ್ಚಿಟ್ಟ ಜನಾರ್ಧನ ರೆಡ್ಡಿ...

ತಮಿಳುನಾಡಿ ಮುಖ್ಯಮಂತ್ರಿ ಜಯಲಲಿತಾ ನಿಧನದ ಬಳಿಕ ಉತ್ತರಾಧಿಕಾರಿ ಎಂದೇ ಗುರುತಿಸಿಕೊಂಡಿದ್ದ ಶಶಿಕಲಾ ನಟರಾಜನ್ ಆಗಸ್ಟ್ 14 ರಂದು ಬಿಡುಗಡೆಯಾಗಲಿದ್ದಾರೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ. ಶಿಶಕಲಾ ಜೊತೆಗೆ , ಇಳವರಸಿ ಹಾಗೂ ಸುಧಾಕರನ್ ಅಕ್ರಮ ಆಸ್ತಿಗಳಿಗೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು.. 2017ರ ಫೆಬ್ರವರಿಯಲ್ಲಿ ಶಿಶಿಕಲಾ ಸೇರಿದಂತೆ ಮೂವರಿಗೆ ಜೈಲು ಶಿಕ್ಷೆ ವಿಧಿಸಲಾಯಿತು. 

 

ಬಿಜೆಪಿ ಸಹಾಯದಿಂದ ಶಶಿಕಲಾ ನಟರಾಜನ್‌ಗೆ ಬಿಡುಗಡೆ ಭಾಗ್ಯ ಸಿಗುತ್ತಿದೆ ಎಂದು ಆಶೀವಾದಂ ಆಚಾರಿ ಹೇಳಿಕೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇತ್ತ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಬಿಡುಗಡೆ  ವರದಿಯನ್ನು ತಳ್ಳಿಹಾಕಿದ್ದಾರೆ. ಬಿಡುಗಡೆಗೆ ಯಾವುದೇ ದಿನಾಂಕ ಫಿಕ್ಸ್ ಮಾಡಿಲ್ಲ. ಶಶಿಕಲಾ 20 ದಿನ ಪರೋಲ್ ಮೂಲಕ ತೆರಳಿದ್ದಾರೆ. ಈ 20 ದಿನ ಜೈಲುವಾಸಕ್ಕೆ ಸೇರಿಕೊಳ್ಳಲಿದೆ. ಇದನ್ನು ಹೊರತು ಪಡಿಸಿದರೆ ಅವರ ಶಿಕ್ಷೆಯ ಅವಧಿ ಸಂಪೂರ್ಣಗೊಳಿಸಿದಾಗ ಬಿಡುಗಡೆಯಾಗುತ್ತಾರೆ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.