ಡಿಎಂಕೆ ಪಕ್ಷದ ಐಟಿ ವಿಭಾಗದ ಮುಖ್ಯಸ್ಥ ಟಿಆರ್‌ಬಿ ರಾಜಾ (TRB Raja), ಸಾರ್ವಕರ್‌ ಅವರು ಕಾಗೆಯ ಮೇಲೆ ಕುಳಿತು ಹಾರುತ್ತಿರುವ ಚಿತ್ರವೊಂದನ್ನು ಟ್ವೀಟ್‌ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ.

ಚೆನ್ನೈ: ಡಿಎಂಕೆ ಪಕ್ಷದ ಐಟಿ ವಿಭಾಗದ ಮುಖ್ಯಸ್ಥ ಟಿಆರ್‌ಬಿ ರಾಜಾ (TRB Raja), ಸಾರ್ವಕರ್‌ ಅವರು ಕಾಗೆಯ ಮೇಲೆ ಕುಳಿತು ಹಾರುತ್ತಿರುವ ಚಿತ್ರವೊಂದನ್ನು ಟ್ವೀಟ್‌ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಕರ್ನಾಟಕದ ಪಠ್ಯಪುಸ್ತಕವೊಂದರಲ್ಲಿ ಸಾಹಿತಿಯೊಬ್ಬರು ‘ಸಾರ್ವಕರ್‌ ಅವರು ಜೈಲಿನಲ್ಲಿದ್ದಾಗ ಬುಲ್‌ಬುಲ್‌ (bulbul) ಪಕ್ಷಿಗಳ ರೆಕ್ಕೆ ಮೇಲೆ ಕುಳಿತು ಜೈಲಿನಿಂದ ಹೊರಹೋಗಿ ತಮ್ಮ ತಾಯ್ನಾಡಿಗೆ ಭೇಟಿ ನೀಡುತ್ತಿದ್ದರು’ ಎಂದು ಕಾವ್ಯಾತ್ಮಕವಾಗಿ ವರ್ಣಿಸಿದ್ದರು. ಇದನ್ನು ವ್ಯಂಗ್ಯವಾಡುವ ನಿಟ್ಟಿನಲ್ಲಿ ಸಾರ್ವಕರ್‌ ಅವರು ಕಾಗೆಯ ಮೇಲೆ ಕುಳಿತು ಹಾರುತ್ತಿರುವ ವ್ಯಂಗ್ಯಚಿತ್ರವೊಂದನ್ನು ರಾಜಾ ಟ್ವೀಟ್‌ ಮಾಡಿ ಬಳಿಕ ಅದನ್ನು ಅಳಿಸಿಹಾಕಿದ್ದಾರೆ. ಈ ಬಗ್ಗೆ ಹಿಂದೂ ಸಂಘಟನೆಗಳು (Hindu organizations) ಮತ್ತು ಬಿಜೆಪಿ ತೀವ್ರ ಆಕ್ಷೆಪ ವ್ಯಕ್ತಪಡಿಸಿದ್ದು, ಕೂಡಲೇ ರಾಜಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿವೆ.

ಸಾವರ್ಕರ್‌ (Sarvakar) ಬುಲ್‌ಬುಲ್‌ ಪಕ್ಷಿಯ ಮೇಲೆ ಕುಳಿತು ಹಾರುತ್ತಿದ್ದರು ಎನ್ನುವ ಅತಿರೇಕದ ವರ್ಣನೆಯ ಪಾಠವನ್ನು ಪಠ್ಯದಿಂದ ಕೈಬಿಡುವಂತೆ ಆಗ್ರಹಿಸಿ ಭಾರತೀಯ ವಿದ್ಯಾರ್ಥಿ ಫೆಡರೇಶನ್‌ (ಎಸ್‌ಎಫ್‌ಐ) ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಪಾಠದಲ್ಲಿ ಸಾವರ್ಕರ್‌ ಬಗ್ಗೆ ಅತಿರೇಕವಾಗಿ ವರ್ಣಿಸಲಾಗಿದೆ. ಇದು ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದ್ದು, ಬೆಳೆಯುವ ಮಕ್ಕಳ ತಲೆಯಲ್ಲಿ ಸುಳ್ಳು ಹಾಗೂ ಅವೈಜ್ಞಾನಿಕ ಮಾಹಿತಿಗಳನ್ನು ತುಂಬಿದಂತಾಗುತ್ತದೆ. ಹೀಗಾಗಿ ಕೂಡಲೇ ಈ ಪಾಠ ಕೈಬಿಡಬೇಕು. ಪಠ್ಯವನ್ನು ಕೇಸರೀಕರಣಗೊಳಿಸಲು ಮುಂದಾಗಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ (BC Nagesh) ಅವರನ್ನು ಸಚಿವ ಸಂಪುಟದಿಂದ ತೆಗೆಯಬೇಕು ಎಂದು ಒತ್ತಾಯಿಸಿದರು.

Scroll to load tweet…

ಪುಸ್ತಕದಲ್ಲಿ ವೀರ್ ಸಾವರ್ಕರ್ ಅವರ ಪಾಠದಲ್ಲಿ ಬುಲ್ ಬುಲ್ ಪಕ್ಷಿಯ ಮೂಲಕ ಅಂಡಮಾನ್ ಜೈಲಿನಿಂದ ಭಾರತಕ್ಕೆ ಹಾರಿ ಬರುತ್ತಿದ್ದರು ಎನ್ನುವ ಅಂಶ ಬಹಳ ಚರ್ಚೆಗೆ ಗ್ರಾಸವಾಗಿದೆ. 
ಅಂಡಮಾನ್​ ಜೈಲಿನಿಂದ (Andaman prison) ಬುಲ್​ ಬುಲ್ ಪಕ್ಷಿಯ ಮೇಲೆ ಕುಳಿತು ವೀರ ಸಾವರ್ಕರ್ (Sarvakar)ತಾಯ್ನಾಡನ್ನು ಸಂದರ್ಶಿಸಿ ಬರುತ್ತಿದ್ದರು ಎಂದು 8ನೇ ತರಗತಿಯ ಪುಸ್ತಕದ ಪಾಠವೊಂದಲ್ಲಿ ಇದೆ. ಈ ಬಗ್ಗೆ ಸಾಮಾಜಿ ಜಾಲತಾಣಗಲ್ಲಿ ಟ್ರಾಲ್ ಮಾಡಲಾಗುತ್ತಿದೆ.

ಬೆಳಗಾವಿಯಲ್ಲಿ ಸಾವರ್ಕರ್ ಮೂರ್ತಿ ಪ್ರತಿಷ್ಠಾಪನೆ ಕಿಚ್ಚು ಮತ್ತೆ ಮುನ್ನೆಲೆಗೆ

ಇನ್ನು ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ವೀರ್ ಸಾವರ್ಕರ್ ಬುಲ್ ಬುಲ್ ಪಕ್ಷಿಯ ಮೂಲಕ ಅಂಡಮಾನ್ ಜೈಲಿನಿಂದ ಭಾರತಕ್ಕೆ ಹಾರಿದ್ದರು ಎನ್ನುವುದರ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ. ವಿಚಾರಕ್ಕೆ ಪ್ರತಿಕ್ರಿಯಿಸಿ, ಮನೋವಿಜ್ಞಾನ ಅಂತ ಒಂದಿದೆ. ಒಬ್ಬ ಜೈಲಿನಲ್ಲಿದ್ದ ರಾಜಕೀಯ ಕೈದಿ ತಾನು ನೇರವಾಗಿ ತನ್ನ ದೇಶಕ್ಕೆ ಹೋಗಲು ಸಾಧ್ಯವಾಗದಿದ್ದಾಗ ಭಾವನೆಯನ್ನು ದೇಶದ ಒಳಗಿನ ಸಂಬಂಧವನ್ನು ಅಲ್ಲಿ ವ್ಯಕ್ತಪಡಿಸಲಾಗಿದೆ. ನಾವು ಇಲ್ಲಿದ್ದರೂ ಮನಸ್ಸಿನ ಮೂಲಕ, ಭಾವನೆಗಳ ಮೂಲಕ ವಿಹರಿಸಿ ಬರಬಹುದು. ತಾಂತ್ರಿಕವಾಗಿ, ವಿಪರೀತ ಅರ್ಥದಲ್ಲಿ ನೋಡಲು ಹೋಗಬೇಡಿ ಎಂದು ಸ್ಪಷ್ಟಪಡಿಸಿದರು.

ಕೆಲವರು ಭಾರತದಲ್ಲೇ ಇದ್ದಾರೆ. ಆದರೆ ಭಾರತೀಯತೆಯೇ ಇರುವುದಿಲ್ಲ. ಸಾವರ್ಕರ್ ಅವರು ಬ್ರಿಟಿಷರೊಂದಿಗೆ ರಾಜಿ ಮಾಡಿಕೊಂಡಿರಲಿಲ್ಲ. ರಾಜಿ ಮಾಡಿಕೊಂಡಿದ್ದರೆ ಪುಸ್ತಕ ಬರೆಯಲು ಅವಕಾಶವೂ ಸಿಗುತ್ತಿತ್ತು. ಡಿಸ್ಕವರಿ ಆಫ್ ಇಂಡಿಯಾ ಬರೆಯಲು ಅವಕಾಶ ಸಿಗುತ್ತಿತ್ತು. ಲಾರ್ಡ್ ಮೌಂಟ್ ಬ್ಯಾಟನ್ ಪತ್ನಿಯ ಹೆಗಲ ಮೇಲೆ ಕೈ ಹಾಕುವ ಅವಕಾಶವೂ ಸಿಗುತ್ತಿತ್ತು. ಆ ಅವಕಾಶ ಸಿಗಲಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್‌ಗೆ ರವಿ ತಿವಿದರು.

Veer Savarkar ಕತೆ ಹೇಳುವ ‘ಕೊಪ್ಪಳ ಕಾ ರಾಜಾ’

ಹಿಂದುತ್ವ ಉಸಿರಾಗಲಿ

ಇಂದಿನ ರಾಜ್ಯಕಾರಿಣಿಗಳು ಹಿಂದುತ್ವವನ್ನು ಮತ ಬ್ಯಾಂಕ್‌ ಆಗಿ ಬಳಸಿಕೊಳ್ಳುತ್ತಿದ್ದಾರೆ. ಇದು ವಿಷಾದನೀಯ ಸಂಗತಿ ಹಿಂದುತ್ವ ಅನ್ನುವುದು ಪ್ರತಿಯೊಬ್ಬ ಹಿಂದುವಿನ ಉಸಿರಾಗಬೇಕು. ರಕ್ತದ ಕಣ ಕಣದಲ್ಲೂ ರಕ್ತಗತವಾದರೆ ಮಾತ್ರ ಹಿಂದುತ್ವ ಉಳಿಯಲು ಸಾಧ್ಯ ಎಂದು ರಾಷ್ಟ್ರೀಯ ಶ್ರೀರಾಮಸೇನಾ ಅಧ್ಯಕ್ಷ ಶ್ರೀಪ್ರಮೋದ ಮುತಾಲಿಕ ಹೇಳಿದರು. ಬನಶಂಕರಿ ದೇವಸ್ಥಾನದಲ್ಲಿ ನಡೆದ ಹಿಂದೂ ಯುವಧರ್ಮ ಸಭೆ ಹಾಗೂ ತುಲಾಭಾರ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಅವರು. ಇಂದಿನ ಎಲ್ಲ ರಾಷ್ಟ್ರೀಯ ಪಕ್ಷಗಳು ಚುನಾವಣೆ ಬಂದಾಗ ಹಿಂದುತ್ವದ ಜಪ ಮಾಡುತ್ತಾರೆ. ಚುನಾವಣೆ ಮುಗಿದ ಬಳಿಕ 5 ವರ್ಷ ಸುಮ್ಮನಿದ್ದು ಮತ್ತೆ ಚುನಾವಣೆ ಬಂದಾಗ ಮತ್ತೆ ಮತಕ್ಕಾಗಿ ಹಿಂದುತ್ವ ಜಪ ಮಾಡುವುದನ್ನು ಬಿಟ್ಟು ನಾನು ಹಿಂದೂ ಎಂದು ಎದೆ ಉಬ್ಬಿಸಿ ಹೇಳಬೇಕು. ಹಿಂದುತ್ವ ಅನ್ನುವುದು ಈ ದೇಶದಲ್ಲಿ ಇರುವ ಪ್ರತಿಯೊಬ್ಬರ ಉಸಿರು ಹಿಂದುತ್ವಕ್ಕಾಗಿ ಕೈ ಎತ್ತಿ ಅದು ಕಲ್ಪವೃಕ್ಷವಾಗುವುದು, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಸಾವರ್ಕರ್‌ ಇಡೀ ಜೀವಿತ ಅವಧಿಯಲ್ಲಿ 22 ವರ್ಷ ಜೈಲಿನಲ್ಲಿ ಕಳೆದರೂ ಅವರ ಹೆಸರು ಹೇಳಲು ಯಾವ ಕಾಂಗ್ರೆಸ್ಸಿಗರಿಗೂ ನೈತಿಕತೆ ಇಲ್ಲ. ಮಹಾನ್‌ ಕ್ರಾಂತಿಕಾರಿ ದೇಶಭಕ್ತ ವೀರ ಸಾವರ್ಕರ್‌ ಅವರನ್ನು ಕಾಂಗ್ರೆಸ್ಸಿಗರು ಮರೆಮಾಚಿದರು. ಅವರ ಹೋರಾಟವನ್ನು ತುಳಿದು ಹಾಕಿದರು. ಇಂದು ಕಾಂಗ್ರೆಸ್‌ ಕೋಮಾ ಸ್ಥಿತಿ ತಲುಪಿದೆ, ಅವರ ಸಾವಿನ ಘೋಷಣೆಯನ್ನು ದೇಶದ ಪ್ರಧಾನಿ ಸರ್ವಶ್ರೇಷ್ಠ ರಾಷ್ಟ್ರ ನಾಯಕ ನರೇಂದ್ರ ಮೋದಿ ಮಾಡಬೇಕಿದೆ ಎಂದರು.