Asianet Suvarna News Asianet Suvarna News

Sant Ishwar Samman 2022: ವಿಜ್ಞಾನ ಭವನದಲ್ಲಿ ಸಂತ ಈಶ್ವರ ಸಮ್ಮಾನ್‌, ಉಪರಾಷ್ಟ್ರಪತಿ ಮುಖ್ಯ ಅತಿಥಿ

ದೆಹಲಿಯ ವಿಜ್ಞಾನ ಭವನದಲ್ಲಿ ಭಾನುವಾರ 2022ರ ಸಾಲಿನ ಸಂತ ಈಶ್ವರ ಸಮ್ಮಾನ್‌ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ.ಪಂ. ಸ್ವಾಮಿ ಅವಧೇಶಾನಂದ ಗಿರಿ ಜಿ ಮಹಾರಾಜ್ (ಜುನಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ) ಆಶೀರ್ವಚನ ನೀಡಲಿದ್ದಾರೆ.
 

Sant Ishwar Samman 2022 Vice President Jagdeep Dhankhar is the chief guest san
Author
First Published Nov 13, 2022, 3:25 PM IST

ನವದೆಹಲಿ (ನ.13): 2022ರ ಸಾಲಿನ ಸಂತ ಈಶ್ವರ ಸಮ್ಮಾನ್‌ ಕಾರ್ಯಕ್ರಮ ಭಾನುವಾರ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿದೆ. ಈ ಬಾರಿಯ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂತ ಈಶ್ವರ ಫೌಂಡೇಶನ್ ಈ ಕಾರ್ಯಕ್ರವನ್ನು ಆಯೋಜಿಸುತ್ತಿದೆ. ರಾಷ್ಟ್ರೀಯ ಸೇವಾ ಭಾರತಿ ಕಾರ್ಯಕ್ರಮವನ್ನು ಆಯೋಜಿಸಲು ಸಹಾಯ ಮಾಡಿದೆ. ಕಾರ್ಯಕ್ರಮದಲ್ಲಿ ಪ.ಪಂ. ಸ್ವಾಮಿ ಅವಧೇಶಾನಂದ ಗಿರಿ ಜಿ ಮಹಾರಾಜ್ (ಜುನಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ) ಆಶೀರ್ವಚನ ನೀಡಲಿದ್ದಾರೆ.

ಮಧ್ಯಾಹ್ನ ಮೂರು ಗಂಟೆಗೆ ಕಾರ್ಯಕ್ರಮ ಆರಂಭವಾಗಿದೆ. ಕಾರ್ಯಕ್ರಮದ ನಿರೂಪಕ ಕಪಿಲ್ ಖನ್ನಾ. ಅವರು ಸಂತ ಈಶ್ವರ ಸಮ್ಮಾನ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಕಾರ್ಯಕ್ರಮದ ಗೌರವಾನ್ವಿತ ತೀರ್ಪುಗಾರರಲ್ಲಿ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ (ಮಾಜಿ ಮುಖ್ಯ ನ್ಯಾಯಮೂರ್ತಿ, ಸಿಕ್ಕಿಂ ಕೋರ್ಟ್), ಎಸ್. ಗುರುಮೂರ್ತಿ (ಸ್ವತಂತ್ರ ನಿರ್ದೇಶಕರು, ಭಾರತೀಯ ರಿಸರ್ವ್ ಬ್ಯಾಂಕ್), ರಾಂಬಹದ್ದೂರ್ ರೈ (ಅಧ್ಯಕ್ಷರು, ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್), ಜವಾಹರಲಾಲ್ ಕೌಲ್ (ಅಧ್ಯಕ್ಷರು) , ಜಮ್ಮು ಮತ್ತು ಕಾಶ್ಮೀರ ಅಧ್ಯಯನ ಕೇಂದ್ರ), ಪನ್ನಾಲಾಲ್ ಬನ್ಸಾಲಿ (ಅಧ್ಯಕ್ಷರು, ರಾಷ್ಟ್ರೀಯ ಸೇವಾ ಭಾರತಿ), ಗುನ್ವಂತ್ ಕೊಠಾರಿ (ರಾಷ್ಟ್ರೀಯ ಸ್ವಯಂಸೇವಕ ಸಂಘ ) ಮತ್ತು ಕಪಿಲ್ ಖನ್ನಾ (ಅಧ್ಯಕ್ಷರು, ಸಂತ ಈಶ್ವರ್ ಫೌಂಡೇಶನ್) ಇರಲಿದ್ದಾರೆ.

ಕಲೆ, ಸಾಹಿತ್ಯ, ಪರಿಸರ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸಮಾಜ ಸೇವೆ ಮಾಡಿದ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಪ್ರತಿ ವರ್ಷ ಪ್ರಶಸ್ತಿ ನೀಡಲಾಗುತ್ತದೆ. ಅಲ್ಲದೆ 12 ಸೇವಾ ಬಹುಮಾನಗಳನ್ನು ನೀಡಲಾಗುವುದು. ಈ ವರ್ಷ ಸಂತ ಈಶ್ವರ ಸಮ್ಮಾನ್ ಆರಂಭವಾಗಿ 100 ವರ್ಷಗಳನ್ನು ಪೂರೈಸಲಿದೆ. ಸೇವಾ ಭಾರತಿ ಸಹಯೋಗದಲ್ಲಿ ಪ್ರತಿ ವರ್ಷ ಈ ಗೌರವವನ್ನು ನೀಡಲಾಗುತ್ತದೆ.

Follow Us:
Download App:
  • android
  • ios