Asianet Suvarna News Asianet Suvarna News

ಸ್ಯಾನಿಟರಿ ಪ್ಯಾಡ್‌ ಜೊತೆ ವಿಲೇವಾರಿ ಬ್ಯಾಗ್‌ ಕಡ್ಡಾಯ: 2021ರಿಂದ ಹೊಸ ನೀತಿ

ಸ್ಯಾನಿಟರಿ ಪ್ಯಾಡ್‌ ಜೊತೆ ವಿಲೇವಾರಿ ಬ್ಯಾಗ್‌ ಕಡ್ಡಾಯ| 2021ರಿಂದ ಹೊಸ ನೀತಿ| ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌

Sanitary pad disposal bags mandatory from January 2021
Author
Bangalore, First Published Mar 9, 2020, 11:16 AM IST
  • Facebook
  • Twitter
  • Whatsapp

ಪುಣೆ[ಮಾ.09]: ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರು ಮಾಡುವ ಕಂಪನಿಗಳು ಮುಂದಿನ ವರ್ಷದ ಜನವರಿಯಿಂದ ವಿಲೇವಾರಿ ಬ್ಯಾಗ್‌ಗಳನ್ನು ಒದಗಿಸುವುದು ಕಡ್ಡಾಯವಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನದ ನಿಮಿತ್ತ ಪುಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪದೇ ಪದೆ ಮನವಿ ಮಾಡಿದ ಹೊರತಾಗಿಯೂ ಸ್ಯಾನಿಟರಿ ಪ್ಯಾಡ್‌ ತಯಾರಕರು ಪರಿಸರ ಸ್ನೇಹಿ ಬ್ಯಾಗ್‌ಗಳನ್ನು ಒದಗಿಸುತ್ತಿಲ್ಲ. 2021 ಜ.1ರಿಂದ ಪರಿಸರ ಪರಿಸರ ಸ್ನೇಹಿ ಬ್ಯಾಗ್‌ಗಳನ್ನು ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದರು.

ಇದೇ ವೇಳೆ ನಗರ ಪ್ರದೇಶಗಳಲ್ಲಿ ಜಾರಿಯಲ್ಲಿರುವ ಸ್ವಚ್ಛತಾ ನಿಯಮಗಳನ್ನು ಹಳ್ಳಿಗಳಲ್ಲೂ ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.

Follow Us:
Download App:
  • android
  • ios