Asianet Suvarna News Asianet Suvarna News

ಸಂದೇಶ್‌ಖಾಲಿ ಕೇಸ್‌, ಶಹಜಹಾನ್‌ನನ್ನು ಸಿಬಿಐಗೆ ಒಪ್ಪಿಸಲು ನಿರಾಕರಿಸಿದ ಪಶ್ಚಿಮ ಬಂಗಾಳ ಸರ್ಕಾರ!

ಸಂದೇಶ್‌ಖಾಲಿ ಹಿಂಸಾಚಾರ ಪ್ರಕರಣದಲ್ಲಿ ಕೋಲ್ಕತ್ತಾ ಹೈಕೋರ್ಟ್‌, ಪ್ರಮುಖ ಆರೋಪಿ ಶಹಜಹಾನ್‌ರೊಂದಿಗೆ ಇಡೀ ಪ್ರಕರಣದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು  ಸಿಬಿಐಗೆ ವರ್ಗಾವಣೆ ಮಾಡುವಂತೆ ಪಶ್ಚಿಮ ಬಂಗಾಳ ಪೊಲೀಸರಿಗೆ ಸೂಚನೆ ನೀಡಿತ್ತು.

Sandeshkhali Violence West Bengal Refuses To Hand Over Sheikh Shahjahan To CBI san
Author
First Published Mar 6, 2024, 1:48 PM IST

ಕೋಲ್ಕತ್ತಾ (ಮಾ.6): ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಮುಕ್ತವಾಗಿ ಮಾಫಿಯಾಗೆ ಬೆಂಬಲ ನೀಡುತ್ತಿರುವುದು ಸಾಬೀತಾಗಿದೆ. ಬಂಗಾಳದ ಸಂದೇಶ್‌ಖಾಲಿಯಲ್ಲಿ ಸುಲಿಗೆ, ಭೂಅಕ್ರಮ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ತೃಣಮೂಲ ಕಾಂಗ್ರೆಸ್‌ನ ಬಲಿಷ್ಠ ವ್ಯಕ್ತಿ ಶೇಖ್‌ ಶಹಜಹಾನ್‌ ಅವರನ್ನು ಸಿಬಿಐಗೆ ಹಸ್ತಾಂತರ ಮಾಡಲು ಪಶ್ಚಿಮ ಬಂಗಾಳ ಸರ್ಕಾರ ನಿರಾಕರಿಸಿದೆ. ಮಂಗಳವಾರ ಸಂಜೆ 4.30ರ ಒಳಗಾಗಿ ಇಡೀ ಪ್ರಕರಣದ ಪ್ರಮುಖ ಆರೋಪಿ ಶಹಜಹಾನ್‌ ಹಾಗೂ ಪ್ರಕರಣದ ಸಂಪೂರ್ಣ ದಾಖಲೆಗಳನ್ನು ಬಂಗಾಳ ಸರ್ಕಾರದ ಸಿಐಡಿಯಿಂದ ಸಿಬಿಐಗೆ ವರ್ಗಾವಣೆ ಮಾಡಬೇಕು ಎಂದು ತಿಳಿಸಲಾಗಿತ್ತು. ಆದರೆ, ಕೋರ್ಟ್‌ ಆದೇಶವನ್ನು ಧಿಕ್ಕರಿಸಿರುವ ಪಶ್ಚಿಮ ಬಂಗಾಳ ಈ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಸಂಜೆ 4.30 ರೊಳಗೆ ಷಹಜಹಾನ್ ಅವರ ಕಸ್ಟಡಿ ಮತ್ತು ಪ್ರಕರಣದ ದಾಖಲೆಗಳನ್ನು ಸಿಬಿಐಗೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿತ್ತು. ಅದರೆ, ಕೋಲ್ಕತ್ತದ ಪೊಲೀಸ್‌ ಪ್ರಧಾನ ಕಚೇರಿಯಲ್ಲಿ ರಾತ್ರಿ 7.30ರವರೆಗೂ ಈ ದಾಖಲೆಗಾಗಿ ಕಾದಿದ್ದ ಸಿಬಿಐಗೆ ನಿರಾಸೆಯಾಗಿದ್ದು, ಬರಿಗೈಯಲ್ಲಿಯೇ ಅಲ್ಲಿಂದ ಹೊರಟಿದೆ. 

ಕೋಲ್ಕತ್ತ ಹೈಕೋರ್ಟ್‌ ತೀರ್ಪಿನ ವಿರುದ್ಧವಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಇದರಿಂದಾಗಿ ಸುಪ್ರೀಂ ಕೋರ್ಟ್‌ ತೀರ್ಪಿನವರೆಗೂ ಶೇಖ್‌ ಶಹಜಹಾನ್‌ಅವರನ್ನು ಸಿಬಿಐಗೆ ಹಸ್ತಾಂತರ ಮಾಡಲು ಸಾಧ್ಯವಿಲ್ಲ ಪೊಲೀಸ್‌ ಇಲಾಖೆ ತಿಳಿಸಿದೆ.

ಬಂಗಾಳ ಸರ್ಕಾರವು ತನ್ನ ಅರ್ಜಿಯ ತಕ್ಷಣದ ವಿಚಾರಣೆಯನ್ನು ಕೇಳಿತ್ತು, ಆದರೆ ಅದನ್ನು ತಿರಸ್ಕರಿಸಲಾಯಿತು. ನಿಯಮಗಳಿಗೆ ಅನುಸಾರವಾಗಿ ರಿಜಿಸ್ಟ್ರಾರ್ ಜನರಲ್ ಮುಂದೆ ತನ್ನ ಮನವಿಯನ್ನು ನಮೂದಿಸುವಂತೆ ರಾಜ್ಯದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಮಂಗಳವಾರ ಬೆಳಗ್ಗೆ ನಡೆದ ವಿಚಾರಣೆಯ ವೇಲೆ ಸ್ವತಃ ಹೈಕೋರ್ಟ್‌, ರಾಜ್ಯ ಪೊಲೀಸ್‌ ಈ ವಿಚಾರದಲ್ಲಿ ಸಂಪೂರ್ಣವಾಗಿ ಪಕ್ಷಪಾತಿಯಾಗಿದೆ ಎಂದು ಹೇಳಿತ್ತು. ಷಹಜಹಾನ್ ವಿರುದ್ಧದ ಆರೋಪಗಳ ಬಗ್ಗೆ "ನ್ಯಾಯಯುತ, ಪ್ರಾಮಾಣಿಕ ಮತ್ತು ಸಂಪೂರ್ಣ ತನಿಖೆ" ಗೆ ಕರೆ ನೀಡಿತು. "ಇದಕ್ಕಿಂತ ಉತ್ತಮವಾದ ಪ್ರಕರಣ ಬೇರೊಂದಿಲ್ಲ... ಇದನ್ನು ಸಿಬಿಐನಿಂದ ವರ್ಗಾಯಿಸುವ (ಮತ್ತು) ತನಿಖೆಗೆ ಒಳಪಡಿಸುವ ಅಗತ್ಯವಿದೆ" ಎಂದು ಅದು ಹೇಳಿತ್ತು.

ಸಿಬಿಐ ಮತ್ತು ರಾಜ್ಯ ಪೊಲೀಸ್ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು ರಚಿಸುವ ಹಿಂದಿನ ಆದೇಶವನ್ನು ರದ್ದುಗೊಳಿಸಿದ್ದ ಮುಖ್ಯ ನ್ಯಾಯಮೂರ್ತಿ ಟಿಎಸ್ ಶಿವಜ್ಞಾನಂ ನೇತೃತ್ವದ ಹೈಕೋರ್ಟ್ ಪೀಠವು, ಪ್ರಕರಣವನ್ನು ಕೇಂದ್ರ ಏಜೆನ್ಸಿಗೆ ವರ್ಗಾವಣೆ ಮಾಡಲು ತೀರ್ಮಾನ ಮಾಡಿತ್ತು. ಇನ್ನು ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಮತ್ತು ಪಶ್ಚಿಮ ಬಂಗಾಳ ಎರಡು ಪ್ರತ್ಯೇಕ ಅರ್ಜಿಯನ್ನು ಸಲ್ಲಿಕೆ ಮಾಡಿತ್ತು. ಇಡಿ,  ಈ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಹೇಳಿದ್ದರೆ, ರಾಜ್ಯ ಪೊಲೀಸ್‌, ಇದನ್ನು ಸಿಐಡಿ ಮೂಲಕ ತನಿಖೆ ಮಾಡಿಸುವುದಾಗಿ ತಿಳಿಸಿತ್ತು.

ಶಾಜಹಾನ್ ಬಂಧಿಸಿ: ಬಂಗಾಳ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ಶೇಖ್‌ ಶಹಜಹಾನ್‌ ಜನವರಿ 5 ರಿಂದಲೂ ನಾಪತ್ತೆಯಾಗಿದ್ದ. ರಿ ನಿರ್ದೇಶನಾಲಯದ ಅಧಿಕಾರಿಗಳ ತಂಡವು ದಾಳಿ ನಡೆಸಲು ಹಾದಿಯಲ್ಲಿದ್ದಾಗ, ಈತನ ಬೆಂಬಲಿಗರ ಗುಂಪೊಂದು ದಾಳಿ ನಡೆಸಿತು. ಶೇಖ್ ಶಹಜಹಾನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ₹ 12.78 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿರುವುದಾಗಿ ಇಡಿ ಈಗಾಗಲೇ ತಿಳಿಸಿದೆ.

ಸಂದೇಶ್‌ಖಾಲಿಯಾ ರಾಕ್ಷಸ ಶಾಜಹಾನ್: ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಅಳ್ವಿಕೆ ಸೂಕ್ತವಲ್ಲವೇ?

ಇಡಿ ಅಧಿಕಾರಿಗಳ ಮೇಲೆ ದಾಳಿ ಹಾಗೂ ಶಹಜಹಾನ್‌ ನಾಪತ್ತೆ ದೊಡ್ಡ ಮಟ್ಟದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿತ್ತು. ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಮೇಲೆ ಮುಗಿಬಿದ್ದಿರುವ ಬಿಜೆಪಿ, ಅಪರಾಧಿಯನ್ನು ಸರ್ಕಾರವೇ ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿತ್ತು. 55 ದಿನಗಳ ಕಾಲ ನಾಪತ್ತೆಯಾಗಿದ್ದ ಶಹಜಹಾನ್‌ನ್ನು ವಿಶೇಷ ಪೊಲೀಸ್‌ ತಂಡ ಕೊನೆಯದಾಗಿ ಬಂಧಿಸಿದ ಬೆನ್ನಲ್ಲಿಯೇ ಈತನನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತು ಮಾಡಲಾಗಿತ್ತು. ಈತನ ಬಂಧನವಾಗಲೇಬೇಕು ಎಂದು ಹೈಕೋರ್ಟ್‌ ಸೂಚನೆ ನೀಡಿದ ಮೂರು ದಿನಗಳ ನಂತರ ಶಹಜಹಾನ್‌ನನ್ನು ಬಂಧಿಸಲಾಗಿತ್ತು.

 

Follow Us:
Download App:
  • android
  • ios