ಚೆನ್ನೈ[ಫೆ.23]: ಕುಖ್ಯಾತ ದಂತಚೋರ, ಕಾಡುಗಳ್ಳ ವೀರಪ್ಪನ್ ಪುತ್ರಿ, ವಕೀಲೆ ವಿದ್ಯಾರಾಣಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಶನಿವಾದಂದು ತಮಿಳುನಾಡಿನ ಕೃಷ್ಣಗಿರಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ವಿದ್ಯಾರಾಣಿ ಕಮಲ ಪಾಳಯಕ್ಕೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್, ಮಾಜಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಸೇರಿದಂತೆ ತಮಿಳುನಾಡು ರಾಜ್ಯ ಬಿಜೆಪಿ ನಾಯಕರು ವಿದ್ಯಾರಾಣಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. 

ಬಿಜೆಪಿ ಸೇರ್ಪಡೆಗೊಂಡ ಬಳಿಕ ಪ್ರತಿಕ್ರಿಯಿಸಿದ ವೀರಪ್ಪನ್ ಪುತ್ರಿ ವಿದ್ಯಾರಾಣಿ 'ನನ್ನ ತಂದೆ ವೀರಪ್ಪನ್ ಕೂಡಾ ಸಮಾಜ ಸೇವೆ ಮಾಡಲು ಬಯಸಿದ್ದರು. ಆದರೆ ಅವರು ಆಯ್ಕೆ ಮಾಡಿಕೊಂಡ ಮಾರ್ಗ ತಪ್ಪಾಗಿತ್ತು. ಅವರಿಗೆ ತಪ್ಪಿನ ಅರಿವಾಗುಷ್ಟರಲ್ಲಿ ಸಮಯ ಮೀರಿತ್ತು. ನಾನು ಈಗ ಸಮಾಜ ಸೇವೆ ಮಾಡುವ ಉದ್ದೇಶದಿಂದ ಬಿಜೆಪಿ ಸೇರಿದ್ದೇನೆ' ಎಂದಿದ್ದಾರೆ.

ವೀರಪ್ಪನ್​ಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ವಿದ್ಯಾರಾಣಿ ಹಿರಿಯ ಪುತ್ರಿಯಾಗಿದ್ದಾರೆ. ಈಕೆ ವೃತ್ತಿಯಲ್ಲಿ ಓರ್ವ ವಕೀಲೆಯಾಗಿದ್ದಾರೆ.

ಫೆಬ್ರವರಿ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ