Asianet Suvarna News Asianet Suvarna News

ರಾಮ ಮಂದಿರ ಭೂಮಿ ಪೂಜೆ; ಮರಳು ಶಿಲ್ಪದ ಮೂಲಕ ಸುದರ್ಶನ್ ಪಟ್ನಾಯಕ್ ನಮನ!

ರಾಮ ಮಂದಿರ ಭೂಮಿ ಪೂಜೆ ನೆರವೇರಿದೆ. ಈ ಮೂಲಕ ಶತ ಶತಮಾನಗಳಿಂದ ಹುದುಗಿದ್ದ ಕನಸು ನನಸಾಗಿದೆ. ಶತ ಶತಮಾನಗಿಂಧ ಬಂಧಿಯಾಗಿದ್ದ ಶ್ರೀ ರಾಮನಿಗೆ ಭವ್ಯ ಮಂದಿರ ನಿರ್ಮಾಣದ ಮೂಲಕ ಮುಕ್ತಿ ಸಿಗುತ್ತಿದೆ. ಇದೀಗ ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಪುರಿ ಸಮುದ್ರ ತೀರದಲ್ಲಿ ಮರಳಿನ ಮೂಲಕ ಶ್ರೀ ರಾಮ ಭಕ್ತಿ ಸಲ್ಲಿಸಿದ್ದಾರೆ.

Sand artist Sudarsan Pattnaik created a replica of Ram temple on Puri beach
Author
Bengaluru, First Published Aug 5, 2020, 2:09 PM IST

ಪುರಿ(ಆ.05): ಕೊರೋನಾ ವೈರಸ್ ಕಾರಣ ರಾಮ ಮಂದಿರ ಭೂಮಿ ಪೂಜೆಗೆ ಆಹ್ವಾನಿತರನ್ನು ಹೊರತು ಪಡಿಸಿ ಇತರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಿರಲಿಲ್ಲ.  ಹೀಗಾಗಿ ಹಲವರ ತಾವಿದ್ದಲ್ಲಿಂದಲೆ ಭಕ್ತಿ ಸಮರ್ಪಿಸಿದ್ದಾರೆ. ಖ್ಯಾತ ಮರಳು ಶಿಲ್ಪಿ ಒಡಿಶಾದ ಸುದರ್ಶನ್ ಪಟ್ನಾಯಕ್ ಪುರಿ ಸಮದ್ರು ತೀರದಲ್ಲಿ ಶ್ರೀ ರಾಮ ಮಂದಿರ ಮರಳು ಶಿಲ್ಪ ರಚಿಸಿ ನಮನ ಸಲ್ಲಿಸಿದ್ದಾರೆ

ರಾಮಲಲ್ಲಾನಿಗೆ ದೀರ್ಘದಂಡ ನಮಸ್ಕಾರ, ರಾಮ ಮಂದಿರಕ್ಕೆ ಮೋದಿ ಶಿಲಾನ್ಯಾಸ!.

ಕೊರೋನಾ ವೈರಸ್ ಕಾರಣ ಪುರಿ ಸಮುದ್ರ ತೀರದಲ್ಲಿ ಶ್ರೀ ರಾಮ ಮಂದಿರ ಮರಳು ಶಿಲ್ಪಿ ರಚಿಸಿದ್ದೇನೆ. ಅಯೋಧ್ಯೆಗೆ ಬೇಟಿ ನೀಡಲು ಸಾಧ್ಯವಾಗಿಲ್ಲ. ಕಳೆದ ವರ್ಷ ಅಯೋಧ್ಯೆಗೆ ಬೇಟಿ ನೀಡಿ ಪರಿಸರ ಸೇರಿದಂತೆ, ಮಂದಿರ ನಿರ್ಮಾಣ ಸ್ಥಳ ಎಲ್ಲವನ್ನೂ ಪರಿಶೀಲಿಸಿದ್ದೆ ಎಂದು ಸುದರ್ಶನ್ ಪಟ್ನಾಯಕ್ ಹೇಳಿದ್ದಾರೆ.

ಪುರಿ ಸಮುದ್ರ ತೀರದಲಲ್ಲಿ 5 ಅಡಿ ಎತ್ತರದ ಮರಳು ಶಿಲ್ಪ ರಚಿಸಲಾಗಿದೆ. ಸತತ 5 ಗಂಟೆಗಳ ಕಾಲ ಸುದರ್ಶನ್ ಪಟ್ನಾಯಕ್ ಈ ಶ್ರೀರಾಮ ಮಂದಿರ ಮರಳು ಶಿಲ್ಪ ರಚಿಸಲು ತೆಗೆದುಕೊಂಡಿದ್ದಾರೆ.

ಹಲವು ಶತಮಾನಗಳಿಂದ ಕಾಯುತ್ತಿದ್ದ ದಿನ ಬಂದಿದೆ. ಸಂತಸ ಉಕ್ಕಿದೆ. ಸಂಭ್ರಮ ಮನೆ ಮಾಡಿದೆ. ಶ್ರೀ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಇದು ಐತಿಹಾಸಿಕ ದಿನ ಎಂದು ಸುದರ್ಶನ ಪಟ್ನಾಯಕ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಮರಳು ಶಿಲ್ಪದಲ್ಲಿ ಸುದರ್ಶನ ಪಟ್ನಾಯಕ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹಾಗೂ ಮನ್ನಣೆಗಳಿಸಿದ್ದಾರೆ. 60ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಸಿರುವ ಸುದರ್ಶನ ಪಟ್ನಾಯಕ್ ಅತ್ಯಂತ ಜನಪ್ರಿಯ ಮರಳು ಶಿಲ್ಪಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

Follow Us:
Download App:
  • android
  • ios