ರೈತ ಪ್ರತಿಭಟನೆ ಮತ್ತಷ್ಟು ಚುರುಕುಗೊಳಿಸಿದ ರೈತ ಸಂಘಟನೆ ಸೆಪ್ಟೆಂಬರ್ 25ಕ್ಕೆ ಭಾರತ್ ಬಂದ್ ಘೋಷಿಸಿದ ರೈತ ಸಂಘಟನೆ ಕೃಷಿ ಮಸೂದೆ ಹಿಂಪಡೆಯಲು ಒತ್ತಾಯಿಸಿದ ಭಾರತ್ ಬಂದ್
ನವದೆಹಲಿ(ಆ.27): ಕೇಂದ್ರ ಸರ್ಕಾರ ತಂದಿರುವ ಕೃಷಿ ಮಸೂದೆ ವಿರೋಧಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರಗೊಳಿಸಲು ರೈತರು ಮುಂದಾಗಿದೆ. ಇದಕ್ಕಾಗಿ ಮತ್ತೆ ಭಾರತ್ ಬಂದ್ ಬಿಸಿ ಎದುರಿಸಬೇಕಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾ ರೈತ ಸಂಘಟನೆ ಸೆಪ್ಟೆಂಬರ್ 25ಕ್ಕೆ ಭಾರತ್ ಬಂದ್ ಘೋಷಿಸಿದೆ.
ಖಲಿಸ್ತಾನ ಉಗ್ರರಿಂದ ರೈತ ಪ್ರತಿಭಟನೆ ಹೈಜಾಕ್; ಎಚ್ಚರಿಕೆ ನೀಡಿದ ರೈತ ಮುಖಂಡನಿಗೆ ಗೇಟ್‌ಪಾಸ್!
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ 40ಕ್ಕೂ ಹೆಚ್ಚು ರೈತ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿತು. ಕೊರೋನಾ ಸೇರಿದಂತೆ ಅದೆಷ್ಟೆ ಅಡೆತಡೆ ಎದುರಿಸಿದರೂ ರೈತ ಸಂಘಟನೆಗಳು ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ. ಕೊರೋನಾ 2ನೇ ಅಲೆ ಕಾರಣ ಆಂದೋಲನ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಇದೀಗ ಸಂಯಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್ ಘೋಷಿಸಿದೆ.
ಕೇಂದ್ರ ಸರ್ಕಾರಕ್ಕೆ ಮತ್ತೆ ಎಚ್ಚರಿಕೆ ನೀಡಲು ಈ ಬಂದ್ ಘೋಷಿಸಲಾಗಿದೆ. ಕೃಷಿ ಮಸೂದೆಯನ್ನು ಸಂಪೂರ್ಣವಾಗಿ ರದ್ದು ಮಾಡಬೇಕು ಅನ್ನೋ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಕೃಷಿ ಮಸೂದೆ ಹಿಂಪಡೆಯಲು ಒತ್ತಾಯಿಸಿ ಸೆಪ್ಟೆಂಬರ್ 25 ರಂದು ಭಾರತ್ ಬಂದ್ ಆಯೋಜಿಸಲಾಗುತ್ತಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ರೈತ ಮುಖಂಡ ಆಶಿಶ್ ಮಿತ್ತಲ್ ಹೇಳಿದ್ದಾರೆ.
ರೈತ ಪ್ರತಿಭಟನೆ ಕರಾಳ ಘಟನೆ ಬೆನ್ನಲ್ಲೇ ಮತ್ತೊಂದು ಟ್ರಾಕ್ಟರ್ ರ‍್ಯಾಲಿ ಘೋಷಿಸಿದ ಟಿಕಾಯತ್!
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಮಸೂದೆ ರದ್ದುಪಡಿಸಲು ಆಗ್ರಹಿಸಿ ಸರಿಸುಮಾರು ಕಳೆದ ಒಂದು ವರ್ಷದಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಜೊತೆಗೆ ಕೇಂದ್ರ ಸರ್ಕಾರ 11 ಸುತ್ತಿನ ಮಾತುಕತೆ ನಡೆಸಿದೆ. ಆದರೆ 11 ಎಲ್ಲಾ ಮಾತುಕತೆಗಳು ವಿಫಲವಾಗಿದೆ.
ಎಲ್ಲಾ ಮಾತುಕತೆಯಲ್ಲಿ ರೈತರು ಒಂದೇ ಪಟ್ಟು ಹಿಡಿದಿದ್ದಾರೆ. ಕೃಷಿ ಮಸೂದೆ ರದ್ದತಿ ಬಿಟ್ಟು ಬೇರೆ ಮಾತು ಆಡಿಲ್ಲ. ಕೇಂದ್ರ ಸರ್ಕಾರ ಮಸೂದೆಯಲ್ಲಿ ಯಾವುದೇ ದೋಷವಿದ್ದರೆ ತಿದ್ದುಪಡಿಗೆ ಸಿದ್ದ, ದೋಷದ ಕುರಿತು ವಿವರ ನೀಡುವಂತೆ ಕೇಂದ್ರ ಸರ್ಕಾರ ಕೋರಿತ್ತು. ಆದರೆ ದೋಷದ ಬದಲು ಸಂಪೂರ್ಣ ಮಸೂದೆಯನ್ನೇ ರದ್ದು ಮಾಡುವಂತೆ ರೈತ ಸಂಘಟನೆಗಳು ಆಗ್ರಹಿಸಿದೆ.
