ಅಮೃತ್‌ಸರ್‌ನ ಸ್ವರ್ಣ ಮಂದಿರದ ಮುಂಭಾಗದಲ್ಲಿ ನಮಾಜ್ | ಕೋಮು ಸೌಹಾರ್ದತೆಗಾಗಿ ಮುಸ್ಲಿಮರಿಂದ ನಮಾಜ್| ಮುಸ್ಲಿಮರ ನಡೆ ಖಂಡಿಸಿದ ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ| ಮಸೀದಿ ಮುಂದೆ ನಾವು ಯಜ್ಞ ಮಾಡಲು ಅವಕಾಶ ಇದೆಯೇ ಎಂದು ಪ್ರಶ್ನಿಸಿದ ಪಾತ್ರಾ| 

ನವದೆಹಲಿ(ಫೆ.08): ಕೋಮು ಸಾಮರಸ್ಯಕ್ಕಾಗಿ ಅಮೃತ್‌ಸರ್‌ನ ಸ್ವರ್ಣ ಮಂದಿರದ ಆವರಣದಲ್ಲಿ ನಮಾಜ್ ಮಾಡಿದ ಮುಸ್ಲಿಮರ ನಡೆಯನ್ನು ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಖಂಡಿಸಿದ್ದಾರೆ.

ಒಂದು ವೇಳೆ ಹಿಂದೂ ಸಮುದಾಯ ಮಸೀದಿ ಆವರಣದಲ್ಲಿ ಯಜ್ಞ ಅಥವಾ ಕೀರ್ತನೆ ಮಾಡಿದರೆ ಅದಕ್ಕೆ ಅವಕಾಶ ನೀಡಲಾಗುತ್ತದೆಯೇ ಎಂದು ಪಾತ್ರಾ ಪ್ರಶ್ನಿಸಿದ್ದಾರೆ.

Scroll to load tweet…

ಕೋಮು ಸೌಹಾರ್ದತೆ ಹೆಸರಲ್ಲಿ ಸ್ವರ್ಣ ಮಂದಿರದ ಮುಂಭಾಗದಲ್ಲಿ ಮುಸಲ್ಮಾನರು ನಮಾಜ್ ಮಾಡುವುದಾದರೆ, ನಾವೂ ಕೂಡ ಮಸೀದಿ ಮುಂಭಾಗದಲ್ಲಿ ಯಜ್ಞ ಮಾಡಬಹುದಲ್ಲವೇ ಎಂದು ಪಾತ್ರಾ ಟ್ವೀಟ್ ಮಾಡಿದ್ದಾರೆ.

ಚೌಕಿದಾರ್ ಚೋರ್ ಹೈ ಎಂದ ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ!

ಕೋಮು ಸೌಹಾರ್ದತೆ ಹೆಸರಲ್ಲಿ ನಮ್ಮ ಪ್ರಾರ್ಥನಾ ಮಂದಿರಗಳ ಮುಂದೆ ಮುಸ್ಲಿಮರು ನಮಾಜ್ ಮಾಡಬಹದು ಎಂದಾದರೆ, ಅದೇ ಕೋಮು ಸೌಹಾರ್ದತೆಗಾಗಿ ನಾವು ಮಸೀದಿ ಮುಂದೆಯೂ ಯಜ್ಞ ಮಾಡಬಹುದು ಎಂದು ಪಾತ್ರಾ ಹೇಳಿದ್ದಾರೆ.

Scroll to load tweet…

ದೇಶದಲ್ಲಿ ಕೋಮು ಸೌಹಾರ್ದತೆ ನೆಲೆಸಲೆಂದು ಆಗ್ರಹಿಸಿ ಮುಸ್ಲಿಮರು ಅಮೃತ್‌ಸರ್‌ನಲ್ಲಿರುವ ಸ್ವರ್ಣ ಮಂದಿರದ ಮುಂಭಾಗದಲ್ಲಿ ನಮಾಜ್ ಮಾಡಿ ಗಮನ ಸೆಳೆದಿದ್ದರು.